ನವದೆಹಲಿ: ಜು.26ರಿಂದ ಪ್ಯಾರಿಸ್ ಒಲಿಂಪಿಕ್ ಆರಂಭಗೊಳ್ಳಲಿದೆ. ಈ ಬಾರಿ ಭಾರತದಿಂದ ಒಟ್ಟು 117 ಕ್ರೀಡಾಪಟುಗಳು ಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ ಸಲ ಟೊಕಿಯೋ ಒಲಿಂಪಿಕ್ನಲ್ಲಿ ಭಾರತ 7 ಪದಕಗಳನ್ನು ಗೆದ್ದುಕೊಂಡಿತ್ತು. ಇದರಲ್ಲಿ ಒಂದು ಚಿನ್ನದ ಪದಕ ಸೇರಿತ್ತು. ಈ ಬಾರಿಯೂ ಹೆಚ್ಚು ಪದಕಗಳನ್ನು ಗೆಲ್ಲುವು ನಿರೀಕ್ಷೆಯೊಂದಿಗೆ ಭಾರತ ಕಣಕ್ಕಿಳಿಯಲಿದೆ.
ಆದರೆ, ನಿಮಗೆ ಗೊತ್ತಾ? ಒಲಿಂಪಿಕ್ ಪದಕ ವಿಜೇತರಿಗೆ ಭಾರತ ಸೇರಿ ಪ್ರಮುಖ ದೇಶಗಳಲ್ಲಿ ಬಹುಮಾನವಾಗಿ ಎಷ್ಟು ನಗದು ಸಿಗುತ್ತದೆ ಗೊತ್ತೇ?.
ಕ್ರೀಡೆಯನ್ನು ಆಯೋಜಿಸುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಪದಕ ವಿಜೇತರಿಗೆ ಪದಕ ಹೊರತುಪಡಿಸಿ ಯಾವುದೇ ರೀತಿಯ ಹಣ ಆಗಲಿ ಬಹುಮಾನವಾಗಲಿ ನೀಡುವುದಿಲ್ಲ. ಆದರೆ ರಾಷ್ಟ್ರೀಯ ಸರ್ಕಾರಗಳು ಅಥವಾ ಸಂಸ್ಥೆಗಳು ಅಥವಾ ಕ್ರೀಡಾ ಒಕ್ಕೂಟಗಳು ಕ್ರೀಡಾಪಟುಗಳಿಗೆ ನಗದು ಅಥವಾ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸುವುದನ್ನು ಇದು ತಡೆಯುವುದಿಲ್ಲ.
ವಿವಿಧ ದೇಶಗಳ ಸರ್ಕಾರಗಳು ಮತ್ತು ಖಾಸಗಿ ಪ್ರಾಯೋಜಕರು ಸಾಮಾನ್ಯವಾಗಿ ಕ್ರೀಡಾಪಟುಗಳಿಗೆ ನಗದು, ಆಸ್ತಿ, ಮತ್ತು ಜಾನುವಾರುಗಳಂತಹ ಕೋಟ್ಯಂತರ ರೂ ಬಹುಮಾನಗಳನ್ನು ನೀಡುತ್ತಾರೆ. ಕೆಲವು ದೇಶಗಳಲ್ಲಿ, ಸಾಮಾನ್ಯವಾಗಿ ನಗದು ಜೊತೆಗೆ, ವಿಜೇತ ಕ್ರೀಡಾಪಟುಗಳಿಗೆ ಐಷಾರಾಮಿ ಕಾರುಗಳಿಂದ ಹಿಡಿದು ಅಪಾರ್ಟ್ಮೆಂಟ್ಗಳವರೆಗೆ ಅದ್ದೂರಿ ಬಹುಮಾನಗಳನ್ನೂ ನೀಡಲಾಗುತ್ತದೆ.
ಯಾವ ದೇಶದಲ್ಲಿ ಎಷ್ಟು ಬಹುಮಾನ?
ಭಾರತ:ಕಳೆದ ಒಲಿಪಿಂಕ್ನಲ್ಲಿ ಪದಕ ಗೆದ್ದು ಬಂದಿದ್ದ ವಿಜೇತರಿಗೆ ಭಾರತ ಸರ್ಕಾರ ಗೌರವಿಸಿತ್ತು. ಅಲ್ಲದೇ ರಾಜ್ಯವಾರು ಸರ್ಕಾರಗಳು ತಮ್ಮ ತಮ್ಮ ಒಲಿಪಿಂಕ್ ಪದಕ ವಿಜೇತರಿಗೆ ಭರ್ಜರಿ ಬಹುಮಾನಗಳನ್ನು ನೀಡಿದ್ದರು. ಕೇಂದ್ರ ಸರ್ಕಾರವು ಒಲಿಂಪಿಕ್ ಚಿನ್ನದ ಪದಕ ವಿಜೇತರಿಗೆ ರೂ 75 ಲಕ್ಷ ರೂ, ಬೆಳ್ಳಿ ಪದಕ ವಿಜೇತರು ರೂ 50 ಲಕ್ಷ ಮತ್ತು ಕಂಚಿನ ಪದಕ ವಿಜೇತರು ರೂ 10 ಲಕ್ಷ ನೀಡಿ ಗೌರವಿಸಿತ್ತು. ಇದಲ್ಲದೇ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಪ್ರತ್ಯೇಕವಾಗಿ 1 ಕೋಟಿಗೂ ಅಧಿಕ ಮೊತ್ತವನ್ನು ನೀಡುತ್ತದೆ.
ಯುಎಸ್ಎ:ಯುಎಸ್ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿಯ ಆಪರೇಷನ್ ಗೋಲ್ಡ್ ಕಾರ್ಯಕ್ರಮದ ಅಡಿಯಲ್ಲಿ, ಒಲಿಂಪಿಕ್ ಚಿನ್ನದ ಪದಕ ವಿಜೇತರಿಗೆ $37,500 ನೀಡಿದರೇ ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರು ಕ್ರಮವಾಗಿ $22,500 ಮತ್ತು $15,000 ಪಡೆಯುತ್ತಾರೆ.