ಹೈದರಾಬಾದ್: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೇವಲ ಬ್ಯಾಟಿಂಗ್‌ಗೆ ಮಾತ್ರವಲ್ಲದೆ ತಮ್ಮ ಫ್ಯಾಷನ್ನಿಂದಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಮೈದಾನದ ಒಳಗಿರಲಿ ಅಥವಾ ಹೊರಗಿರಲಿ ವಿರಾಟ್ ತಮ್ಮ ಸ್ಟೈಲಿಶ್ ಲುಕ್ನಿಂದಲೇ ಗಮನ ಸೆಳೆಯುತ್ತಾರೆ. ಅದರಲ್ಲೂ ಕ್ರಿಕೆಟ್ ಪಂದ್ಯದ ವೇಳೆ ಕೊಹ್ಲಿ ಧರಿಸುವ ಸನ್ ಗ್ಲಾಸ್ ಹೆಚ್ಚು ಆಕರ್ಷಣೆಯುತವಾಗಿ ಕಾಣಿಸುತ್ತದೆ. ಆದರೆ ಬಹುತೇಕ ಅಭಿಮಾನಿಗಳು ಅವರು ಧರಿಸುವ ಸನ್ ಗ್ಲಾಸ್ ಯಾವ ಬ್ರಾಂಡ್ನದ್ದು ಮತ್ತು ಅದರ ಬೆಲೆ ಎಷ್ಟು ಎಂದು ತಿಳಿದುಕೊಳ್ಳಬೇಕೆಂದು ಬಯಸುತ್ತಾರೆ. ಹಾಗಾದ್ರೆ ಬನ್ನಿ ಈ ಸುದ್ದಿಯಲ್ಲಿ ಅದರ ಕುರಿತು ತಿಳಿದುಕೊಳ್ಳೋಣ.
ಓಕ್ಲೆ ರಾಡರ್ ಇವಿ ಪಾತ್ (Oakley Radar EV Path):ವಿರಾಟ್ ಕೊಹ್ಲಿ ಹೆಚ್ಚಾಗಿ ಟಾಪ್ ಬ್ರಾಂಡ್ ಓಕ್ಲೆಯ ಸನ್ ಗ್ಲಾಸ್ ಧರಿಸುತ್ತಾರೆ. ಓಕ್ಲೆ ಕೇವಲ್ ಲುಕ್ಗೆ ಮಾತ್ರವಲ್ಲದೇ ಹೆಚ್ಚಿನ ಕಾರ್ಯಕ್ಷಮತೆ ಮತ್ತು ಬಾಳಿಕೆಗೆ ಹೆಸರುವಾಸಿಯಾಗಿದೆ. ಅದರಲ್ಲೂ ಕ್ರಿಕೆಟ್ ಪಂದ್ಯದ ವೇಳೆ ಕೊಹ್ಲಿ ಧರಿಸುವ ಸನ್ಗ್ಲಾಸ್ ಓಕ್ಲೆ ರಾಡಾರ್ ಇವಿ ಪಾತ್ ಹೆಸರಿನದ್ದಾಗಿದೆ.
ಈ ಸನ್ ಗ್ಲಾಸ್ಗಳನ್ನು ವಿಶೇಷವಾಗಿ ಕ್ರೀಡಾಪಟುಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸೂರ್ಯನ ಕಿರಣದಿಂದ ಕಣ್ಣಿಗೆ ರಕ್ಷಣೆ ನೀಡಲು ಡ್ಯುಯಲ್-ಲೆನ್ಸ್ ತಂತ್ರಜ್ಞಾನದೊಂದಿಗೆ ಇದನ್ನು ತಯಾರಿಸಲಾಗಿದೆ. ರಾಡಾರ್ ಇವಿ ಪಾತ್ ಸನ್ ಗ್ಲಾಸ್‌ಗಳು ಸಾಮಾನ್ಯವಾಗಿ 200 ಡಾಲರ್ (ಸುಮಾರು ರೂ. 16,795)ನಿಂದ ಪ್ರಾರಂಭವಾಗುತ್ತವೆ. ಇದರಲ್ಲಿ ಇನ್ನು ಹೆಚ್ಚಿನ ವೈಶಿಷ್ಟ್ಯಗಳನ್ನು ಬಯಸಿದರೆ ಅವುಗಳ ಬೆಲೆ ಸುಮಾರು 300 ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿರಲಿದೆ. ಅದರಲ್ಲೂ ಕಸ್ಟಮ್ ವಿನ್ಯಾಸಗಳೊಂದಿಗೆ ಸ್ಪೇಷಲ್ ಎಡಿಷನ್ನಲ್ಲಿ ಬರುವ ಸನ್ ಗ್ಲಾಸ್ನ ಬೆಲೆ ಅಧಿಕವಾಗಿರಲಿವೆ.