Cricketers Who Retired In 2024:ಈ ವರ್ಷ ಒಂದೆಡೆ ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿ ಹಿಡಿದರೆ ಮತ್ತೊಂದಡೆ, ಪ್ರಮುಖ ಆಟಗಾರರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಡೇವಿಡ್ ವಾರ್ನರ್(ಆಸ್ಟ್ರೇಲಿಯಾ):ಈ ವರ್ಷ ನಿವೃತ್ತಿ ಘೋಷಿಸಿದ ಮೊದಲ ಕ್ರಿಕೆಟಿಗ ಡೇವಿಡ್ ವಾರ್ನರ್. ಸಿಡ್ನಿಯಲ್ಲಿ ಪಾಕಿಸ್ತಾನದ ವಿರುದ್ಧದ ಕೊನೆಯ ಟೆಸ್ಟ್ ಆಡಿದ ವಾರ್ನರ್, ಭಾರತ ವಿರುದ್ಧದ ಟಿ20 ವಿಶ್ವಕಪ್ ಮೂಲಕ ಚುಟುಕು ಪಂದ್ಯಗಳಿಗೂ ವಿದಾಯ ಹೇಳಿದರು. ಏಕದಿನದಲ್ಲಿ 6,932, ಟಿ20ಯಲ್ಲಿ 3,277 ಮತ್ತು ಟೆಸ್ಟ್‌ನಲ್ಲಿ 8,786 ಸೇರಿದಂತೆ ಒಟ್ಟು 18,995 ರನ್ ಗಳಿಸಿದ್ದಾರೆ. ಎಲ್ಲಾ ಕ್ರಿಕೆಟ್ ಸ್ವರೂಪಗಳಲ್ಲಿ ಆಸ್ಟ್ರೇಲಿಯಾದ ಎರಡನೇ ಅತೀ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ನಿವೃತ್ತಿ ಪಡೆದರು.
ರೋಹಿತ್ ಶರ್ಮಾ(ಭಾರತ):ಸದ್ಯ ಟೆಸ್ಟ್ ಮತ್ತು ಏಕದಿನ ತಂಡದ ನಾಯಕರಾಗಿರುವ ರೋಹಿತ್ ಶರ್ಮಾ, 2024ರ ಟಿ20 ವಿಶ್ವಕಪ್ ಗೆದ್ದ ನಂತರ ಟಿ20 ಸ್ವರೂಪಕ್ಕೆ ನಿವೃತ್ತಿ ಘೋಷಿಸಿದರು. 159 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ರೋಹಿತ್ 4,231 ರನ್ ಗಳಿಸಿದ್ದಾರೆ. ಭಾರತದ ಪರ ಈ ಮಾದರಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ರೋಹಿತ್ ಹೆಸರಲ್ಲಿದೆ.
ವಿರಾಟ್ ಕೊಹ್ಲಿ(ಭಾರತ):ಟಿ20 ವಿಶ್ವಕಪ್2024 ಗೆದ್ದ ನಂತರ ವಿರಾಟ್ ಕೊಹ್ಲಿ ಕೂಡ ನಿವೃತ್ತಿ ಘೋಷಿಸಿದರು. ಇದೀಗ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ. ಕೊಹ್ಲಿ ಈವರೆಗೂ 125 ಟಿ20 ಪಂದ್ಯಗಳನ್ನು ಆಡಿ 4,188 ರನ್ ಗಳಿಸಿದ್ದಾರೆ.
ದಿನೇಶ್ ಕಾರ್ತಿಕ್(ಭಾರತ):ದಿನೇಶ್ ಕಾರ್ತಿಕ್ ಜೂನ್ 1, 2024ರಂದು ಎಲ್ಲಾ ಫಾರ್ಮ್ಯಾಟ್‌ಗಳಿಂದ ನಿವೃತ್ತರಾದರು. ಸುಮಾರು ಎರಡು ದಶಕಗಳ ವೃತ್ತಿಜೀವನದಲ್ಲಿ 26 ಟೆಸ್ಟ್, 94 ODI ಮತ್ತು 60 T20I ಆಡಿದ್ದಾರೆ. ಮೂರು ಮಾದರಿಗಳಲ್ಲಿ ಕ್ರಮವಾಗಿ 1025, 1752 ಮತ್ತು 686 ರನ್ ಗಳಿಸಿದ್ದಾರೆ.
ಹೆನ್ರಿಕ್ ಕ್ಲಾಸೆನ್:ದಕ್ಷಿಣ ಆಫ್ರಿಕಾದ ಸ್ಪೋಟಕ ಹಿಟ್ಟರ್ ಜನವರಿ 2024ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ವಿಕೆಟ್ ಕೀಪರ್ ಮತ್ತು ಬ್ಯಾಟರ್ ಆಗಿರುವ ಕ್ಲಾಸೆನ್ ತಮ್ಮ ವೃತ್ತಿಜೀವನದಲ್ಲಿ ಕೇವಲ ನಾಲ್ಕು ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಈ ಅವಧಿಯಲ್ಲಿ 104 ರನ್ ಗಳಿಸಿದ್ದಾರೆ. ಏಕದಿನ ಹಾಗೂ ಟಿ20ಯಲ್ಲಿ ಮುಂದುವರಿದಿದ್ದಾರೆ.