ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಬಹುನಿರೀಕ್ಷಿತ ಚಿತ್ರ 'ಯು ಐ' ಇಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. 9 ವರ್ಷಗಳ ಬಳಿಕ ಉಪೇಂದ್ರ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿರುವ ಹಿನ್ನೆಲೆ, ಯು ಐ ಸಾಕಷ್ಟು ಸದ್ದು ಮಾಡಿತ್ತು. ಅದೇ ಸದ್ದಿನೊಂದಿಗೆ ಇಂದು ಸಿನಿಮಾ ಗ್ರ್ಯಾಂಡ್ ವೆಲ್ಕಮ್ ಪಡೆದುಕೊಂಡಿದೆ.
ಮೊದಲ ದಿನ ಕಲೆಕ್ಷನ್ ಅಂದಾಜು: ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆ.ವಿ.ಎನ್ ಪ್ರೊಡಕ್ಷನ್ಸ್ ವಿತರಣೆ ಮಾಡಿರುವ 'ಯುಐ' ತನ್ನ ಮೊದಲ ದಿನ ಎಷ್ಟು ವ್ಯವಹಾರ ನಡೆಸಬಹುದು ಎಂದು ಜನಸಾಮಾನ್ಯರಿಂದ ಹಿಡಿದು ಚಿತ್ರರಂಗದ ಗಣ್ಯರು ಕೂಡಾ ಕುತೂಹಲ ವ್ಯಕ್ತಪಡಿಸಿದ್ದಾರೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಉಪೇಂದ್ರ ಸಾರಥ್ಯದ 'ಯು ಐ' ಭಾರತದಲ್ಲಿ ತನ್ನ ಮೊದಲ ದಿನ 1.11 ಕೋಟಿ ರೂ. ಕಲೆಕ್ಷನ್ ಮಾಡಬಹುದು. ಈ ಅಂಕಿ - ಅಂಶ ಏರುವ ಸಾಧ್ಯತೆಗಳಿವೆ.
What a movie, sir! Mind blown! Syk movie! Rating 4.5/5 #UiTheMovie #UiTheMovieOnDEC20th #Upendra pic.twitter.com/g77laTIpcG
— kiran (@abburi_999) December 20, 2024
ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ, ಬಹುತೇಕ ಮೆಚ್ಚುಗೆಯೇ ವ್ಯಕ್ತ: ಆರಂಭಿಕವಾಗಿ ಸಿನಿಮಾಗೆ ಬಹುತೇಕ ಮೆಚ್ಚುಗೆಯೇ ವ್ಯಕ್ತವಾಗಿದೆ. ಎಕ್ಸ್ (ಟ್ವಿಟರ್) ಬಳಕೆದಾರರೋರ್ವರು ಪ್ರತಿಕ್ರಿಯಿಸಿ, ''ಎಂಥಾ ಸಿನಿಮಾ ಸರ್! ಮೈಂಡ್ಬ್ಲೋಯಿಂಗ್! ರೇಟಿಂಗ್ 4.5/5'' ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವರು ಕಾಮೆಂಟ್ ಮಾಡಿ, 'ಎಂಥ ಅದ್ಭುತ ಚಿತ್ರ ಸರ್! ಆ್ಯಬ್ಸುಲೂಟ್ಲಿ ಬ್ರೀಥ್ಟೇಕಿಂಗ್! ಎ ಥ್ರಿಲ್ಲಿಂಗ್ ಮಾಸ್ಟರ್ಪೀಸ್!' ಎಂದು ಗುಣಗಾನ ಮಾಡಿದ್ದಾರೆ.
ಅಭಿಮಾನಿಯೋರ್ವರು ಸಿನಿಮಾವನ್ನು ಐಕಾನಿಕ್ ಎಂದಿದ್ದಾರೆ. ''ದಿ ಮೋಸ್ಟ್ ಐಕಾನಿಕ್ ಆ್ಯಂಡ್ ಇಂಟಲಿಜೆಂಟ್ ಶೋ ಆಫ್ ದ ಇಯರ್'' ಎಂದು ಪ್ರಶಂಸಿಸಿದ್ದಾರೆ.
What an incredible film, sir! Absolutely breathtaking! A thrilling masterpiece!
— Vamsi 𝙰𝙰 (@AlwaysVamsi13) December 20, 2024
Rating 4.5/5 #UiTheMovie #UiTheMovieOnDEC20th #Upendra pic.twitter.com/KRQCG41z2f
ಇನ್ನೂ ನೀವು ಇಂಟಲಿಜೆಂಟ್ ಆಗಿದ್ದರೆ ನೀವು ಈಗಲೇ ಥಿಯೇಟರ್ನಿಂದ ಹೊರಡಿ ಎಂದು ಸ್ಕ್ರೀನ್ ಮೇಲೆ ಬರೆದಿರುವ ಫೋಟೋಗಳು ವ್ಯಾಪಕವಾಗಿ ವೈರಲ್ ಆಗಿದೆ. ಇದು ಸಿನಿಪ್ರಿಯರ ತಲೆಗೆ ಹುಳ ಬಿಟ್ಟಿದೆ.
ಈ ಸಿನಿಮಾ ನೋಡಿ ನಾವು ರಿವ್ಯೂವ್ ಮಾಡೋದಲ್ಲ, ಈ ಸಿನಿಮಾ ನಮ್ಮನ್ನು ನೋಡಿ ವಿಮರ್ಶೆ ಮಾಡುತ್ತೆ, ಯುಐ ಕೇವಲ ಒಂದು ಚಲನಚಿತ್ರವಲ್ಲ ಇದು ಮಾನವರ ಚಿಂತನೆಯಾಗಿದ್ದು, ಪ್ರತೀ ವಿಷಯಗಳನ್ನು ಡೀಕೋಡ್ ಮಾಡಲು ಉನ್ನತ ಮಟ್ಟದ ಯುನಿವರ್ಸಲ್ ಇಂಟೆಲಿಜೆನ್ಸ್ನ ಅಗತ್ಯವಿದೆ ಎಂದು ಸಾಮಾಜಿಕ ಜಾಲತಾನ ಬಳಕೆದಾರರೋರ್ವರು ಬರೆದುಕೊಂಡಿದ್ದಾರೆ.
The Most Iconic and Intelligent shou of the Year ✨✨#UiTheMovieOnDEC20th #UiTheMovie
— ᴍɪᴄʜᴀᴇʟ ₹ᴇᴅᴅʏ ᴅᴇsʜᴍᴜᴋʜ™ 🥃 (@BottleCot93883) December 20, 2024
Respect @nimmaupendra Sir 🫡🫡 pic.twitter.com/YDOH3i3gPw
ಅದಾಗ್ಯೂ, ಸಿನಿಮಾ ಸ್ವೀಕರಿಸಿರುವ ಎಲ್ಲಾ ಪ್ರತಿಕ್ರಿಯೆಗಳು ಸಕಾರಾತ್ಮಕವಾಗಿಲ್ಲ. ಕೆಲ ವೀಕ್ಷಕರು ಚಿತ್ರ ಕನ್ಫ್ಯೂಸಿಂಗ್ ಸ್ಕ್ರೀನ್ಪ್ಲೇ ಮತ್ತು ನಿಧಾನಗತಿಯನ್ನು ಟೀಕಿಸಿದ್ದಾರೆ. "ಸಿನಿಮಾ ಸಕತ್ ಸ್ಟ್ರಾಂಗ್ ಆಗೇ ಶುರುವಾಯಿತು, ಆದ್ರೆ ದ್ವಿತೀಯಾರ್ಧದಲ್ಲಿ ನಿರೂಪಣೆ ತನ್ನ ಹಿಡಿತ ಕಳೆದುಕೊಂಡಿದೆ" ಎಂದು ಓರ್ವರು ತಿಳಿಸಿದ್ದಾರೆ.
ಮತ್ತೊಂದು ವಿಮರ್ಶೆಯಲ್ಲಿ "ಉಪೇಂದ್ರ ಅವರ ಬ್ರಿಲಿಯನ್ಸ್ ಸ್ಪಷ್ಟವಾಗಿದೆ, ಆದ್ರೆ ಈ ಚಿತ್ರ ಕಾರ್ಯಗತಗೊಳಿಸುವಲ್ಲಿ ಎಡವಿದೆ. ಚಿತ್ರಕಥೆ ಹೇಳುವಷ್ಟೇನು ಇಲ್ಲ'' ಎಂದು ಬರೆದುಕೊಂಡಿದ್ದಾರೆ.
Godfather is coming back after 9 years💥
— Pruthviiiii🗿 (@pruthviprk20) December 19, 2024
Hype is real🥵#UiTheMovieOnDEC20th #UITheFilm #Upendra #DrPuneethRajkumar pic.twitter.com/5qy7XyUWYz
ಇದನ್ನೂ ಓದಿ: ಇಂದು 'ಯುಐ' ರಿಲೀಸ್: ಉಪ್ಪಿ ಸಿನಿಮಾ ಏಕೆ ನೋಡಬೇಕು? ಇಲ್ಲಿದೆ ಬಹುನಿರೀಕ್ಷಿತ ಚಿತ್ರದ ವಿಶೇಷತೆಗಳು
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ ಚಿತ್ರ ಇಂದು ಪ್ರಪಂಚದಾದ್ಯಂತ 2,000ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಬಿಡುಗಡೆ ಆಗಿದೆ. ಒಂಬತ್ತು ವರ್ಷಗಳ ನಂತರ ರಿಯಲ್ ಸ್ಟಾರ್ ನಿರ್ದೇಶಿಸಿರುವ ಸಿನಿಮಾ ಇದಾಗಿದ್ದು, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ಪೋಸ್ಟರ್, ಹಾಡು, ಟೀಸರ್ ಹಾಗೂ ವಾರ್ನರ್ ಮೂಲಕ ಈಗಾಗಲೇ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ನೋಡಲು ಉಪೇಂದ್ರ ಅವರ ಅಭಿಮಾನಿಗಳು, ಸಿನಿಪ್ರಿಯರು ಬಹಳ ಕಾತರ ವ್ಯಕ್ತಪಡಿಸಿದ್ದರು. ಏಕೆಂದರೆ ಉಪೇಂದ್ರ ಅವರ ಸಿನಿಮಾಗಳು ವಿಭಿನ್ನತೆಯಿಂದ ಕೂಡಿರುತ್ತವೆ.
ಈ ಸಿನಿಮಾ ನೋಡಿ ನಾವು Review ಮಾಡೋದಲ್ಲ
— 𝗦𝗵𝗿𝗲𝘆𝗶 ᵀᵒˣᶦᶜ (@NameIsShreyash) December 20, 2024
ಈ ಸಿನಿಮಾ ನಮ್ಮನ್ನ ನೋಡಿ Review ಮಾಡುತ್ತೆ
UI is not a Movie
It's a thought of Humans
Need high level Universal Intelligence to decode each and every things #UITheMovie #UiTheMovieReview @nimmaupendra pic.twitter.com/wiDEQwvW0W
ಇದನ್ನೂ ಓದಿ: 'UI' ರಿಲೀಸ್ ಬೆನ್ನಲ್ಲೇ ಪ್ರೇಕ್ಷಕರಿಗೆ ಉಪೇಂದ್ರ ಸವಾಲ್: ಈ ಚಾಲೆಂಜ್ ಸ್ವೀಕರಿಸುತ್ತೀರಾ?
#UI was the most expected movie because it was directed by #Upendra but, he failed in every way. Iam sorry to say this, but this was one of the worst movie #Upendra has directed. I can watch #Martin again in theater but not #UI.My rating 2/10 for 1st 5 minutes and last 5 minutes.
— Vinod Chandrashekar (@chandrashekarpp) December 20, 2024
ಲಹರಿ ಫಿಲ್ಮ್ಸ್ ಹಾಗೂ ವೀನಸ್ ಎಂಟರ್ಪ್ರೈಸಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಸಿನಿಮಾಗಿದೆ. ಹಾಗೆಯೇ, ತುಳಸಿರಾಮ ನಾಯ್ಡು(ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಚಿತ್ರದ ಭಾಗವಾಗಿದ್ದಾರೆ. ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಹೆಸರಾಂತ ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡಿದೆ.