ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಜನರು ಕ್ರೀಡಾ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಕ್ರೀಡೆಗಳನ್ನು ನೋಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಭಾರತ ಸೇರಿ ಹಲವಾರು ದೇಶಗಳು ಟಿ20 ಕ್ರಿಕೆಟ್ ಲೀಗ್, ಫುಟ್ಬಾಲ್ ಲೀಗ್ನಂತಹ ವಿವಿಧ ಬಗೆಯ ಪಂದ್ಯಾವಳಿಗಳನ್ನು ಆಯೋಜಿಸಿ ಜನರನ್ನು ಮನರಂಜಿಸುತ್ತಿವೆ. ಇದರಿಂದಾಗಿ ಕ್ರೀಡಾ ಕ್ಷೇತ್ರದ ಜನಪ್ರಿಯತೆ ಜತೆಗೆ ಆದಾಯವೂ ಹೆಚ್ಚುತ್ತಿದೆ. ಹಾಗಾದರೆ ಬನ್ನಿ ವಿಶ್ವದಲ್ಲಿ ಆಯೋಜಿಸಲಾಗುತ್ತಿರುವ 6 ಶ್ರೀಮಂತ ಕ್ರೀಡಾ ಲೀಗ್‌ಗಳು ಯಾವುವು ಮತ್ತು ಈ ಪಟ್ಟಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಷ್ಟನೇ ಸ್ಥಾನದಲ್ಲಿದೆ ಎಂದು ತಿಳಿಯೋಣ.
ವಿಶ್ವದ ಟಾಪ್ 6 ಶ್ರೀಮಂತ್ ಲೀಗ್‌ಗಳು
- 1. ನ್ಯಾಷನಲ್ ಫುಟ್ಬಾಲ್ ಲೀಗ್ (NFL):2023ರಲ್ಲಿ, ಅಮೇರಿಕನ್ ಫುಟ್ಬಾಲ್ ಲೀಗ್ NFL 13 ಶತಕೋಟಿ ಡಾಲರ್ (1 ಲಕ್ಷ ಕೋಟಿ) ಆದಾಯದೊಂದಿಗೆ ಶ್ರೀಮಂತ ಕ್ರೀಡಾ ಲೀಗ್ ಆಗಿ ಅಗ್ರಸ್ಥಾನದಲ್ಲಿದೆ. ಈ ಲೀಗ್ 1920 ರಲ್ಲಿ ಪ್ರಾರಂಭವಾಗಿದ್ದು, ಇದರಲ್ಲಿ ಒಟ್ಟು 32 ತಂಡಗಳು ಸ್ಪರ್ಧಿಸುತ್ತವೆ. ಇದು 2027ರ ವೇಳೆಗೆ $25 ಶತಕೋಟಿ ಆದಾಯದ ಗುರಿಯನ್ನು ಹೊಂದಿದೆ.
- 2 ಮೇಜರ್ ಲೀಗ್ ಬೇಸ್‌ಬಾಲ್ (MLB):ಮೇಜರ್ ಲೀಗ್ ಬೇಸ್‌ಬಾಲ್ ಅನ್ನು 1876 ರಲ್ಲಿ ಪ್ರಾರಂಭಿಸಲಾಯಿತು. 2023ರಲ್ಲಿ, ಇದು 11.34 ಬಿಲಿಯನ್ ಡಾಲರ್ (94 ಸಾವಿರ ಕೋಟಿ) ಆದಾಯದೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಲೀಗ್ನಲ್ಲಿ ಪ್ರತಿ ಋತುವಿನಲ್ಲಿ 30 ತಂಡಗಳು ಭಾಗವಹಿಸುತ್ತವೆ. ಈ ಪ್ರಮುಖ ಬೇಸ್‌ಬಾಲ್ ಪಂದ್ಯಾವಳಿಯಲ್ಲಿ 162 ಪಂದ್ಯಗಳನ್ನು ಆಡಲಾಗುತ್ತದೆ.
- 3 ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ (NBA):2022-23 ಋತುವಿನಲ್ಲಿ, ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ $10.58 ಶತಕೋಟಿ ಡಾಲರ್ (88 ಸಾವಿರ ಕೋಟಿ) ಆದಾಯದೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಲೀಗ್ 1946 ರಲ್ಲಿ ಪ್ರಾರಂಭವಾಯಿಗಿದೆ.
- 4 ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್):2008ರಲ್ಲಿ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅತೀ ಕಡಿಮೆ ಸಮಯದಲ್ಲಿ ಶ್ರೀಮಂತ ಕ್ರಿಕೆಟ್ ಲೀಗ್ ಎಂದು ಗುರುತಿಸಿಕೊಂಡಿದೆ. 2023 ರ ಋತುವಿನಲ್ಲಿ ಇದರ ಆದಾರ $9.5 ಬಿಲಿಯನ್ ಡಾಲರ್ (79 ಸಾವಿರ ಕೋಟಿ) ಆಗಿದೆ. ಇದು ವಿಶ್ವದ ನಾಲ್ಕನೇ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿದೆ.
- 5 ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್):ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್) ಕೂಡ ಜನಪ್ರಿಯ ಪಡೆದಿದೆ. ಈ ಫುಟ್ಬಾಲ್ ಲೀಗ್ 1992ರಲ್ಲಿ ಪ್ರಾರಂಭವಾಗಿದ್ದು, 2022-23ರ ವೇಳೆಗೆ ಒಟ್ಟಾರೆಯಾಗಿ £7 ಬಿಲಿಯನ್ ಫೌಂಡ್ ಆದಾಯವನ್ನು ಗಳಿಸಿದ್ದುಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.