ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾಗಿ 2024ರ ವೇಳೆಗೆ 17 ಆವೃತ್ತಿಗಳನ್ನು ಪೂರ್ಣಗೊಳಿಸಿದೆ. ಈ ವೇಳೆ, ಹಲವಾರು ದಾಖಲೆಗಳು ನಿರ್ಮಾಣಗೊಂಡಿವೆ. ಆದರೆ, ನಿಮಗೆ ಗೊತ್ತ 2008 ರಿಂದ 24ರ ವರೆಗೆ ನಡೆದ ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ 5 ತಂಡಗಳು ಯಾವವು ಎಂಬುದನ್ನು ಇದೀಗ ತಿಳಿಯೋಣ.
ಐಪಿಎಲ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಟಾಪ್ 5 ತಂಡಗಳು
ಮುಂಬೈ ಇಂಡಿಯನ್ಸ್ (MI):ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಅಗ್ರ ಸ್ಥಾನದಲ್ಲಿದೆ. 2008 ರಿಂದ 2024ರ ಅವಧಿಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ತಂಡ ಒಟ್ಟು 261 ಪಂದ್ಯಗಳನ್ನು ಆಡಿದೆ, ಇದರಲ್ಲಿ ಒಟ್ಟು 1,455 ವಿಕೆಟ್ಗಳನ್ನು ಪಡೆದ ಅಗ್ರ ಸ್ಥಾನದಲ್ಲಿದೆ.
ಮುಂಬೈ ಪರ ಲಸಿತ್ ಮಾಲಿಂಗ್ 195 ವಿಕೆಟ್ಗಳನ್ನು ಪಡೆದು ತಂಡದ ಪರ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. 13 ರನ್ಗಳಿಗೆ 5 ವಿಕೆಟ್ ಪಡೆದಿದ್ದು ಐಪಿಎಲ್ನ ಬೆಸ್ಟ್ ಇನ್ನಿಂಗ್ಸ್ ಆಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB):IPLನಲ್ಲಿ ಹಲವಾರು ಬಗೆಯ ದಾಖಲೆಗಳನ್ನು ಬರೆದಿರುವ ತಂಡಗಳಲ್ಲಿ ಆರ್ಸಿಬಿ ಕೂಡ ಒಂದು. ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಇದು ಬೆಸ್ಟ್ ಫ್ರಾಂಚೈಸಿ ಕೂಡ ಆಗಿದೆ. ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ತಂಡದ ಪಟ್ಟಿಯಲ್ಲಿ ಆರ್ಸಿಬಿ ಎರಡನೇ ಸ್ಥಾನದಲ್ಲಿದೆ.
2024ರ ವರೆಗೂ 256 ಪಂದ್ಯಗಳನ್ನು ಆಡಿರುವ ಆರ್ಸಿಬಿ ಒಟ್ಟು 1,361 ವಿಕೆಟ್ಗಳನ್ನು ಪಡೆದುಕೊಂಡಿದೆ. ಯುಜ್ವೇಂದ್ರ ಚಹಾಲ್ 205 ವಿಕೆಟ್ ಪಡೆದು RCB ಪರ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ:IPLನ ಪ್ರತೀ ಪಂದ್ಯದಿಂದ ಒಬ್ಬ ಆಟಗಾರ ಗಳಿಸುವ ಹಣ ಎಷ್ಟು? ಸಂಪೂರ್ಣ ವಿವರ