ಹೈದರಾಬಾದ್:ಟಿ20 ಫಾರ್ಮೆಟ್ ಬಂದ ನಂತರ ಕ್ರಿಕೆಟ್‌ನಲ್ಲಿ ದೊಡ್ಡ ಬದಲಾವಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಟೆಸ್ಟ್‌ನಲ್ಲಿಯೂ ಬ್ಯಾಟ್ಸ್‌ಮನ್‌ಗಳು ಬೌಂಡರಿ ಸಿಕ್ಸರ್ ಸಿಡಿಸುವ ಮೂಲಕ ವೇಗವಾಗಿ ರನ್ ಗಳಿಸಲು ಆರಂಭಿಸಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ಭಯವಿಲ್ಲದೆ ಸಿಕ್ಸರ್ ಸಿಡಿಸುತ್ತಿದ್ದಾರೆ. ಎಂತಹ ಶ್ರೇಷ್ಠ ಬೌಲರ್ ಎನಿಸಿಕೊಂಡಿದ್ದರೂ ತಮ್ಮ ವೃತ್ತಿ ಜೀವನದಲ್ಲಿ ಸಿಕ್ಸರ್ ಹೊಡಿಸಿಕೊಂಡಿರುತ್ತಾರೆ.
1. ಡೆರೆಕ್ ಪ್ರಿಂಗಲ್ (ಇಂಗ್ಲೆಂಡ್)
ಇಂಗ್ಲೆಂಡ್ನ ಬೌಲರ್ ಡೆರೆಕ್ ಪ್ರಿಂಗಲ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಒಟ್ಟು 30 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 5,287 ಎಸೆತಗಳನ್ನು ಬೌಲ್ ಮಾಡಿ 70 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಅವರು 35.70ರ ಸರಾಸರಿಯಲ್ಲಿ ಬೌಲಿಂಗ್ ಮಾಡಿ 70 ವಿಕೆಟ್ಗಳನ್ನು ಪಡೆದಿದ್ದಾರೆ. ಆದರೆ ಡೆರೆಕ್ ತನ್ನ ಟೆಸ್ಟ್ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್ ಹೊಡೆಸಿಕೊಂಡಿಲ್ಲ.
2. ಮುದಸ್ಸರ್ ನಾಜರ್ (ಪಾಕಿಸ್ತಾನ)
1976 ರಿಂದ 1989ರ ವರೆಗೆ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದ ಮುದಸ್ಸರ್ ನಾಜರ್ ಒಟ್ಟು 76 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 5867 ಎಸೆತಗಳನ್ನು ಬೌಲ್ ಮಾಡಿ 66 ವಿಕೆಟ್ಗಳನ್ನು ಪಡೆದಿದ್ದಾರೆ. ಇವರೂ ಕೂಡ ತಮ್ಮ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೂ ಸಿಕ್ಸರ್ಗೆ ಅವಕಾಶ ನೀಡಿಲ್ಲ.
3. ಮೊಹಮ್ಮದ್ ಹುಸೇನ್ (ಪಾಕಿಸ್ತಾನ)