Pant Breaks 129 Years old Record: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಸಿಡ್ನಿ ಮೈದಾನದಲ್ಲಿ ನಡೆದ 2ನೇ ದಿನದಾಟದಂದು ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ಮತ್ತೊಮ್ಮೆ ಆರಂಭಿಕ ಆಘಾತ ಎದುರಿಸಿತು. 59 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಬ್ಯಾಟರ್ಗಳಾದ ಜೈಸ್ವಾಲ್ (22), ರಾಹುಲ್ (13), ವಿರಾಟ್ ಕೊಹ್ಲಿ (6) ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದರು. ಈ ವೇಳೆ ಕ್ರೀಸ್ಗೆ ಎಂಟ್ರಿಕೊಟ್ಟ ಪಂತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದರು.
ಬಿರುಸಿನ ಬ್ಯಾಟಿಂಗ್ ಮಾಡಿದ ಪಂತ್ ಕೇವಲ 33 ಎಸೆತಗಳಲ್ಲಿ 61ರನ್ ಗಳಿಸಿದರು. ಇದರಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗ ಸೇರಿವೆ. ಇದಲ್ಲದೇ ಪಂತ್ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿ 129 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ.
All boundaries of Rishabh Pant today 🔥
— Abhishek (@vicharabhio) January 4, 2025
Exquisite batting!pic.twitter.com/ngD1xC9VjA
ಆಸ್ಟ್ರೇಲಿಯನ್ ನೆಲದಲ್ಲಿ ಟೆಸ್ಟ್ನಲ್ಲಿ ಕಡಿಮೆ ಎಸೆತದಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ಮೊದಲ ಅತಿಥಿ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಒಟ್ಟಾರೆ ಮೂರನೇ ಬ್ಯಾಟರ್ ಆಗಿದ್ದಾರೆ. ಇವರಿಗಿಂತ ಮೊದಲು, ಇಂಗ್ಲೆಂಡ್‌ನ ಜಾನ್ ಬ್ರೌನ್ ಮತ್ತು ವೆಸ್ಟ್ ಇಂಡೀಸ್‌ನ ರಾಯ್ ಫ್ರೆಡೆರಿಕ್ಸ್ ಈ ಸಾಧನೆ ಮಾಡಿದ್ದರು. ಬ್ರೌನ್ 1895ರಲ್ಲಿ ಮೆಲ್ಬೋರ್ನ್‌ನಲ್ಲಿ 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರೇ, ಫ್ರೆಡೆರಿಕ್ಸ್ 1975ರಲ್ಲಿ ಪರ್ತ್‌ನಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಪಂತ್ ಈ ಇಬ್ಬರ ದಾಖಲೆಯನ್ನು ಮುರಿದಿದ್ದಾರೆ.
ಅಲ್ಲದೇ ಟೆಸ್ಟ್ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟರ್ ಆಗಿಯೂ ದಾಖಲೆ ಬರೆದಿದ್ದಾರೆ. ಪಂತ್, ಟೆಸ್ಟ್ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ಭಾರತದ ಬ್ಯಾಟರ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆಯೂ 2022 ರಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಟೆಸ್ಟ್ನಲ್ಲಿ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟರ್
- ರಿಷಭ್ ಪಂತ್ - 28 ಎಸೆತ, (ಶ್ರೀಲಂಕಾ, 2022)
- ರಿಷಭ್ ಪಂತ್ - 29 ಎಸೆತ, (ಆಸ್ಟ್ರೇಲಿಯಾ, 2025)
- ಕಪಿಲ್ ದೇವ್ - 30 ಎಸೆತ (ಪಾಕಿಸ್ತಾನ, 1992)
- ಶಾರ್ದೂಲ್ ಠಾಕೂರ್ - 31 ಎಸೆತ (ಇಂಗ್ಲೆಂಡ್, 2021)
- ಯಶಸ್ವಿ ಜೈಸ್ವಾಲ್ - 31 ಎಸೆತ (ಬಾಂಗ್ಲಾದೇಶ, 2024)
ಇದನ್ನೂ ಓದಿ: 47 ವರ್ಷದ ಹಳೆ ದಾಖಲೆ ಬ್ರೇಕ್ ಮಾಡಿದ ಯಾರ್ಕರ್ ಕಿಂಗ್ ಬುಮ್ರಾ!