ETV Bharat / state

ಅಮಿತ್ ಶಾ ಹೇಳಿಕೆ ಖಂಡಿಸಿ ಜ. 9 ರಂದು ಹುಬ್ಬಳ್ಳಿ-ಧಾರವಾಡ ಬಂದ್ ; ದಲಿತ ಸಂಘಟನೆಗಳಿಂದ ಕರೆ - HUBBALLI DHARWAD BANDH

ಸಂಸತ್​ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಡಾ. ಬಿ ಆರ್​ ಅಂಬೇಡ್ಕರ್​ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಬಂದ್​ ಮಾಡಲು ಡಿಎಸ್​ಎಸ್​ ಮುಂದಾಗಿದೆ.

ಹುಬ್ಬಳ್ಳಿ-ಧಾರವಾಡ ಬಂದ್ ಕರೆ
ಹುಬ್ಬಳ್ಳಿ-ಧಾರವಾಡ ಬಂದ್ ಕರೆ (ETV Bharat)
author img

By ETV Bharat Karnataka Team

Published : Jan 6, 2025, 4:16 PM IST

ಹುಬ್ಬಳ್ಳಿ; ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಹಾಗೂ ಅವರ ರಾಜೀನಾಮೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಜ‌. 9ರಂದು ಗುರುವಾರ ಹುಬ್ಬಳ್ಳಿ - ಧಾರವಾಡ ಅವಳಿನಗರ ಬಂದ್‌ಗೆ ಕರೆ ನೀಡಿವೆ.

ಈ ಕುರಿತು ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಸ್ವಾಭಿಮಾನಿ ಅಭಿಮಾನಿ ಅನುಯಾಯಿಗಳ ಬಳಗದ ಮುಖಂಡ ಗುರುನಾಥ ಉಳ್ಳಿಕಾಶಿ ಹೇಳಿದರು. ಈ ಬಂದ್ ಗೆ ಸುಮಾರು 100ಕ್ಕೂ ಅಧಿಕ ಸಕಲ ಸಮಾಜದ ಪ್ರಮುಖ ಸಂಘ ಸಂಸ್ಥೆಗಳು ದಿ. 4 ಮತ್ತು 5ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದು, ಅವಳಿನಗರ ಸ್ತಬ್ಧಗಳೊಳ್ಳುವುದು ಖಚಿತ ಎಂದರು.

ಅಮಿತ್ ಶಾ ಹೇಳಿಕೆ ಖಂಡಿಸಿ ಜ. 9 ರಂದು ಹುಬ್ಬಳ್ಳಿ-ಧಾರವಾಡ ಬಂದ್ ; ದಲಿತ ಸಂಘಟನೆಗಳಿಂದ ಕರೆ (ETV Bharat)

ಅವಳಿ ನಗರದ ಬಂದ್ ನಿಮಿತ್ತ ಶಾಂತಿ ಸದ್ಭಾವನೆಯೊಂದಿಗೆ ಬಡಾವಣೆಗಳಿಂದ ಮೆರವಣಿಗೆ ಮೂಲಕ ತಮ್ಮ ವ್ಯಾಪ್ತಿಯ ಬಂದ್ ನೊಂದಿಗೆ ಹುಬ್ಬಳ್ಳಿಯ ಚನ್ನಮ್ಮ ವೃತ್ತ ಮತ್ತು ಧಾರವಾಡದ ಜುಬಿಲಿ ವೃತ್ತದಲ್ಲಿ ಸಮಾವೇಶಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಬಂದ್ ನ.9 ರಂದು ಗುರುವಾರ ಮುಂಜಾನೆ 06 ರಿಂದ ಸಂಜೆ 06ರ ವರೆಗೆ ನಡೆಯಲಿದ್ದು, ಸಾರ್ವಜನಿಕರು ಅಂದಿನ ಬಂದ್ ಬೆಂಬಲಿಸಲು ಮನವಿ ಮಾಡಲಾಗಿದೆ. ಸದರಿ ಬಂದ್ ಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ಪತ್ರೆಗಳು- ಔಷಧ ಮಳಿಗೆಗಳು, ವಾಣಿಜ್ಯ ವ್ಯವಹಾರ ಹೋಟೆಲ್ ಸಿನಿಮಾ ಆಟೋ, ಶಾಲಾ ಕಾಲೇಜು, ಸರ್ಕಾರಿ ಕಚೇರಿ/ವಾಹನ ಸಹಿತ ಸಕಲ ಚಟುವಟಿಕೆ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಉಳ್ಳಿಕಾಶಿ ಮಾಹಿತಿ ನೀಡಿದರು.

ಮಾಧ್ಯಮಗೋಷ್ಟಿಯಲ್ಲಿ ಅನುಯಾಯಿ ಬಳಗದ ಎಮ್. ಅರವಿಂದ್, ಶ್ಯಾಮ ಜಾಧವ್, ಮಾರುತಿ ದೊಡ್ಡಮನಿ, ದೊರೆರಾಜ ಮನಿಕುಂಟ್ಲ್, ಸುರೇಶ ಕನ್ನಮಕ್ಕಲ್​, ನಾಗೇಶ ಕತ್ರಿಮಲ್ಲ, ಶ್ರೀನಿವಾಸ ಬೆಳದಡಿ, ದೇವಣ್ಣ ಇಟಗಿ ಮುಂತಾದವರು ಇದ್ದರು.

ಹಿನ್ನೆಲೆ; ಡಿಸೆಂಬರ್​ 18 ರಂದು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ "ಸಂವಿಧಾನ ಶಿಲ್ಪಿ ಡಾ. ಬಿ.ಆರ್​ . ಅಂಬೇಡ್ಕರ್​ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು, ಜೊತೆಗೆ ದೇಶದ ಕ್ಷಮೆ ಕೋರಬೇಕು" ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಆಗ್ರಹಿಸಿದ್ದರು.

ಇದೇ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್​ ದೇಶಾದ್ಯಂತ ಬಂದ್​ಗೆ ಕರೆ ನೀಡಿತ್ತು. ದಲಿತ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದವು.

ಸ್ಪಷ್ಟನೆ ನೀಡಿದ್ದ ಶಾ; ಆದ್ರೆ ತಮ್ಮ ಹೇಳಿಕೆಯನ್ನು ಕಾಂಗ್ರೆಸ್​ ತಿರುಚಿದೆ. ತಮ್ಮ ಮೇಲೆ ಗುರುತರ ಆರೋಪ ಮಾಡುತ್ತಿರುವ ಕಾಂಗ್ರೆಸ್​ ವಿರುದ್ಧ ಗೃಹ ಸಚಿವ ಅಮಿತ್​ ಶಾ ಕಿಡಿಕಾರಿದ್ದರು. ನಾನು ನೀಡಿದ ಹೇಳಿಕೆಯನ್ನು ತಿರುಚಲಾಗುತ್ತಿದೆ. ಅಂಬೇಡ್ಕರ್​ ಅವರನ್ನು ಎಂದಿಗೂ ಅವಮಾನ ಮಾಡದ ಪಕ್ಷದಿಂದ ನಾನು ಬಂದಿದ್ದೇನೆ ಎಂದು ಹೇಳಿದ್ದರು.

ಇದನ್ನೂ ಓದಿ:ಅಂಬೇಡ್ಕರ್​ ಕುರಿತ ಹೇಳಿಕೆ ವಿವಾದ: ರಾಜೀನಾಮೆ ನೀಡಿ, ಕ್ಷಮೆ ಕೇಳಿ - ಖರ್ಗೆ; 15 ವರ್ಷ ವಿಪಕ್ಷದಲ್ಲೇ ಕಾಂಗ್ರೆಸ್- ಅಮಿತ್ ಶಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.