ETV Bharat / state

ಶೇ.60 ಕಮಿಷನ್ ಆರೋಪಕ್ಕೆ ಹೆಚ್​ಡಿಕೆ ದಾಖಲೆ ಕೊಡಲಿ, ಎಲ್ಲ ಸರ್ಕಾರಗಳ ಕಾಲದಲ್ಲೂ ಬಸ್ ದರ ಜಾಸ್ತಿ ಆಗಿದೆ: ಸಿಎಂ - CM SIDDARAMAIAH

ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಅವರು ಮಾಡಿರುವ ಶೇ.60 ಕಮಿಷನ್ ಆರೋಪ ಮತ್ತು ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Jan 5, 2025, 4:26 PM IST

ದಾವಣಗೆರೆ: ಕೇಂದ್ರ ಸಚಿವ ಹೆಚ್. ​​ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಮಾಡಿರುವ ಶೇ.60 ಕಮಿಷನ್ ಆರೋಪ ಸಾಬೀತು ಮಾಡಲಿ, ದಾಖಲೆಗಳು ಇದ್ದರೆ ಕೊಡಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

ವಿಧಾನಸೌಧದಲ್ಲಿ ಶೇ.60 ಕಮಿಷನ್ ದಂಧೆ ನಡೆಯುತ್ತಿದೆ ಎಂಬ ಹೆಚ್ ​ಡಿ ಕುಮಾರಸ್ವಾಮಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಅವರು ನಗರದಲ್ಲಿಂದು ಪ್ರತಿಕ್ರಿಯಿಸಿದರು. ದಾಖಲೆಗಳು ಇದ್ದರೆ ಕೊಡಲಿ, ಕುಮಾರಸ್ವಾಮಿಯವರು ಸಾಬೀತು ಮಾಡಲಿ. ವಿರೋಧ ಪಕ್ಷಗಳು ಕೇವಲ ಆರೋಪ ಮಾಡುವುದಲ್ಲ. ಅದಕ್ಕೆ ಪೂರಕ ದಾಖಲೆ ಇಟ್ಟುಕೊಂಡು ಆರೋಪ ಮಾಡಬೇಕು ಎಂದರು.

ಐದು ನಿಗಮಗಳು ತೊಂದರೆಯಲ್ಲಿರುವುದರಿಂದ ದರ ಏರಿಕೆ : ಸರ್ಕಾರ ಶೇ.15ರಷ್ಟು ಬಸ್ ದರ ಏರಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ , ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಬಸ್ ದರ ಜಾಸ್ತಿ ಆಗಿದೆ. ನೌಕರರ ಸಂಬಳ, ಸಾರಿಗೆ ವೆಚ್ಚ, ಬಸ್ ಖರೀದಿ ಜಾಸ್ತಿಯಾಗಿದೆ. ಹಣದುಬ್ಬರ ಕೂಡ ಇದೆ. 2000ನೇ ವರ್ಷದಲ್ಲಿ ಬಸ್ ದರ ಏರಿಕೆಯಾಗಿ ಐದು ವರ್ಷವಾಗಿದೆ. ಜೊತೆಗೆ ಐದು ನಿಗಮಗಳು ತೊಂದರೆಯಲ್ಲಿವೆ ಅಂತಾ ಹೇಳಿದ್ದರು. ಆದ್ದರಿಂದ ಬಹಳ ದಿನಗಳಿಂದ ಬೆಲೆ ಏರಿಕೆ ಬೇಡಿಕೆ ಇತ್ತು. ಅದಕ್ಕೆ ದರ ಏರಿಕೆ ಮಾಡಿದ್ದೇವೆ. 2005ರಲ್ಲಿ ಬೆಲೆ ಏರಿಕೆ ಆಗಿತ್ತು. ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಬಿಜೆಪಿ ಸರ್ಕಾರದ ಅವಧಿಯಲ್ಲೂ ಬೆಲೆ ಏರಿಕೆ ಆಗಿದೆ. ಕೇಂದ್ರ ಸರ್ಕಾರ ರೈಲ್ವೆ ದರ ಹೆಚ್ಚಿಸಿಲ್ವಾ ಎಂದು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ (ETV Bharat)

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು. ಸಚಿವ ಸಂಪುಟ ಸರ್ಜರಿ ಮಾಡಲ್ಲ, ಮಾಜಿ ಸಚಿವ ನಾಗೇಂದ್ರ ಸಚಿವ ಸ್ಥಾನ ಖಾಲಿ ಇದ್ದು, ಹೈಕಮಾಂಡ್ ಜೊತೆ ಮಾತನಾಡಿ ಭರ್ತಿ ಮಾಡುತ್ತೇನೆ ಎಂದು ಸಿಎಂ ಹೇಳಿದರು.‌

ನಾವು ಊಟಕ್ಕೆ ಸೇರೋದು ತಪ್ಪಾ..? ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಪಾರ್ಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ. ನಾವು ಊಟಕ್ಕೆ ಸೇರೋದು ತಪ್ಪಾ?, ನಾವು ಊಟಕ್ಕೆ ಸೇರುವುದರಲ್ಲಿ ಏನು ತಪ್ಪಿದೆ. ನಾವು ಸೇರಿಸಿದ್ರೆ ರಾಜಕೀಯ ಬಣ್ಣ ಕಟ್ಟಿತೀರಾ, ಬೇರೆಯವರು ಸೇರಿಸಿದ್ರೆ ಅದಕ್ಕೆ ರಾಜಕೀಯ ಬಣ್ಣ ಇಲ್ಲ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು.

ಹೆಚ್​ಡಿಕೆ ಆರೋಪ: ಇಂದು ಮೈಸೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದಲ್ಲಿ ಮನೆ ಹಂಚಿಕೆಯಲ್ಲಿಯೂ ಲಂಚ ಪಡೆಯಲಾಗುತ್ತಿದೆ. ಲಂಚದ ಪ್ರಮಾಣ ಶೇ. 60 ತಲುಪಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ ಸರ್ಕಾರದಲ್ಲಿ ಲಂಚದ ಪ್ರಮಾಣ ಶೇ. 60ಕ್ಕೆ ತಲುಪಿದೆ; ಹೆಚ್​ ಡಿ ಕುಮಾರಸ್ವಾಮಿ

ಇದನ್ನೂ ಓದಿ: ಬಸ್ ಟಿಕೆಟ್ ದರ ಏರಿಕೆ - ಮಧ್ಯರಾತ್ರಿಯಿಂದಲೇ ಜಾರಿ: ಎಲ್ಲಿಗೆ ಎಷ್ಟು ದರ ತಿಳಿಯಿರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.