ETV Bharat / state

ಕೋಲಾರದಲ್ಲಿ ಆರ್​ಎಸ್​ಎಸ್ ಪಥ ಸಂಚಲನಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ - RSS MARCH PAST

ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ಆರ್​ಎಸ್​ಎಸ್ ಪಥ ಸಂಚಲನಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿ ಆದೇಶಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Jan 5, 2025, 3:52 PM IST

ಬೆಂಗಳೂರು: ವಕ್ಕಲೇರಿ ಗ್ರಾಮದಿಂದ ಪ್ರಾರಂಭವಾಗಿ ಕೋಲಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನವರೆಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಶತಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ದೀರ್ಘ ಪಥ ಸಂಚಲನಕ್ಕೆ ಮಾರ್ಗ ಬದಲಾಯಿಸಿದ್ದ ಕೋಲಾರ ಜಿಲ್ಲಾಡಳಿತ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ನಿಗದಿತ ಮಾರ್ಗದಲ್ಲಿಯೇ ಪಥ ಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ.

ಪಥ ಸಂಚಲನದ ಮಾರ್ಗ ಬದಲಾಯಿಸುವಂತೆ ಸೂಚನೆ ನೀಡಿದ ಜಿಲ್ಲಾಡಳಿ ಕ್ರಮ ಪ್ರಶ್ನಿಸಿ ಸಂಘದ ಜಿಲ್ಲಾ ಕಾರ್ಯವಾಹ ಶ್ರೀನಿವಾಸಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಭಾನುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚ್ಚಿನ್ ಶಂಕರ್ ಮಗದಂ ಅವರಿದ್ದ ವಿಶೇಷ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಪಥ ಸಂಚಲನದ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಜಿಲ್ಲಾಡಳಿತದ ಜವಾಬ್ದಾರಿ ಎಂದು ತಿಳಿಸಿದೆ.

ಅರ್ಜಿದಾರರು ದೀರ್ಘ ಸಂಚಲನದ ಸಂದರ್ಭದಲ್ಲಿ ಜಿಲ್ಲಾಡಳಿತ ವಿಧಿಸುವ ಎಲ್ಲ ನಿಯಮಗಳನ್ನು ಪಾಲಿಸಬೇಕು. ಯಾವುದೇ ರೀತಿಯ ಕೋಮು ಸೌಹಾರ್ಧತೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಹಾಗೂ ಶಾಂತಿಯುತವಾಗಿ ಪಥ ಸಂಚಲನ ನಡೆಸಬೇಕು. ಪೊಲೀಸ್ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಷರತ್ತುಗಳನ್ನು ವಿಧಿಸಿದೆ.

ಪಥ ಸಂಚಲನ ನಡೆಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸಬೇಕು. ಜೊತೆಗೆ, ಈ ಮಾರ್ಗದಲ್ಲಿ ಈಗಾಗಲೇ ವಿಧಿಸಿರುವ ನಿಷೇಧಾಜ್ಞೆಯನ್ನು ಮೆರವಣಿಗೆ ಸಂದರ್ಭದಲ್ಲಿ ಜಾರಿ ಮಾಡಬಾರದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಅರ್ಜಿದಾರರ ದೀರ್ಘ ಸಂಚಲನಕ್ಕೆ ಕೋರಿರುವ ಮಾರ್ಗದಲ್ಲಿ ಅನ್ಯ ಸಮುದಾಯದವರು ನೆಲೆಸಿದ್ದಾರೆ. ಈ ಮಾರ್ಗದಲ್ಲಿ ಸಂಚಲನಕ್ಕೆ ಅವಕಾಶ ನೀಡಿದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿರಲಿದೆ. ಈ ನಿಟ್ಟಿನಲ್ಲಿ ಶಾಂತಿ ಕಾಪಾಡಬೇಕಾಗಿದ್ದು, ಮತ್ತೊಂದು ಮಾರ್ಗದಲ್ಲಿ ಸಂಚಲನಕ್ಕೆ ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.

ಅಲ್ಲದೆ, ಅರ್ಜಿದಾರರು 15 ಕಿಲೋಮೀಟರ್ ಪಥ ಸಂಚಲನ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಆದರೆ, ಒಂದು ಕಿಲೋಮೀಟರ್ ಪ್ರದೇಶದಲ್ಲಿ ಮಾತ್ರ ಅಂದರೆ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಮೆರವಣಿಗೆ ಮಾಡದಂತೆ ಸೂಚನೆ ನೀಡಲಾಗಿದೆ ಎಂದು ಪೀಠಕ್ಕೆ ವಿವರಿಸಿದರು.

ಇದಕ್ಕೆ ಪೀಠ, ಇದೊಂದು ಮೆರವಣಿಗೆ ಮಾತ್ರವಲ್ಲದೇ ಒಂದು ರೀತಿಯ ಆಚರಣೆಯಂತೆ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ದೂರದ ನಡಿಗೆಯನ್ನು ಪರಿಗಣಿಸಲಾಗದು ಎಂದು ತಿಳಿಸಿತು.

ವಾದ ಮುಂದುವರೆಸಿದ ಸರ್ಕಾರಿ ವಕೀಲರು, ಅರ್ಜಿದಾರರಿಗೆ ಯಾವುದೇ ರೀತಿಯಲ್ಲಿಯೂ ನಿರ್ಬಂಧ ವಿಧಿಸಿಲ್ಲ. ಆದರೆ, ಸೂಕ್ಷ್ಮ ಪ್ರದೇಶವಾಗಿದ್ದರಿಂದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿದೆ. ಹೀಗಾಗಿ ಒಂದು ಕಿಲೋಮೀಟರ್ ಮಾತ್ರ ಹೆಚ್ಚಾಗಿ ಸಂಚಲನ ಮಾಡದಿರಲು ಕೋರಲಾಗಿದೆ. ತಕ್ಷಣ ಅನುಮತಿ ನೀಡಿದರೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವುದು ಕಷ್ಟ ಸಾಧ್ಯವಾಗಲಿದೆ ಎಂದು ಪೀಠಕ್ಕೆ ವಿವರಿಸಿದರು.

ಅರ್ಜಿದಾರರ ಕೋಲಾರದ ವಕ್ಕಲೇರಿ ಗ್ರಾಮದಿಂದ ಮಂಗಸಂದ್ರ, ಅಮ್ಮೈರಹಳ್ಳಿ, ಎಪಿಎಂಸಿ ಮೈದಾನ, ಶಾರದಾ ಚಿತ್ರಮಂದಿರ ಹಾಗೂ ದೊಡ್ಡಪೇಟೆ ಮಾರ್ಗವಾಗಿ ದೀರ್ಘ ಪಥ ಸಂಚಲನ ಮಾಡುವುದಕ್ಕೆ ಅನುಮತಿ ಕೋರಲಾಗಿತ್ತು. ಈ ಕುರಿತಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸ್ಥಳೀಯರೊಂದಿಗೆ ಶಾಂತಿ ಸಭೆಯನ್ನು ನಡೆಸಿದ್ದರು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಅರ್ಜಿದಾರರು ಕೇಳಿರುವ ಮಾರ್ಗದ ಬದಲಿಗೆ ಮತ್ತೊಂದು ಮಾರ್ಗದಲ್ಲಿ ಪಥ ಸಂಚಲನ ಮಾಡುವುದಕ್ಕೆ ಸೂಚನೆ ನೀಡಲಾಗಿತ್ತು. ಅರ್ಜಿದಾರರು ಕೋರಿರುವ ಮಾರ್ಗ ಸೂಕ್ಷ್ಮ ಪ್ರದೇಶವಾಗಿದೆ. ಹೀಗಾಗಿ ಅನುಮತಿ ನೀಡುವುದಕ್ಕಾಗಿ ಅವಕಾಶ ನಿರಾಕರಿಸಿ ಉಪವಿಭಾಗಾಧಿಕಾರಿಗಳು ಸೂಚನೆ ನೀಡಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ದೀರ್ಘ ಪಥ ಸಂಚಲನಕ್ಕೆ ಅವಕಾಶ ನೀಡುವ ಸಂಬಂಧ ಕಾನೂನು ಹೋರಾಟಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ: '1940 ರಲ್ಲಿ ಆರ್​ಎಸ್​ಎಸ್​​ ಶಾಖೆಗೆ ಡಾ. ಬಿ ಆರ್​ ಅಂಬೇಡ್ಕರ್ ಭೇಟಿ ನೀಡಿದ್ದರು'

ಇದನ್ನೂ ಓದಿ: ಆರ್​ಎಸ್​ಎಸ್​ ಬಿಜೆಪಿ ಬಗ್ಗೆ ಚಿಂತಿಸುತ್ತಿದೆಯಾ?: ಮೋಹನ್​ ಭಾಗವತ್​​ಗೆ ಕೇಜ್ರಿವಾಲ್​ ಪತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.