ಹೈದರಾಬಾದ್:ಭಾರತದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಕೇವಲ ದಾಖಲೆಗಳಲ್ಲಿ ಮಾತ್ರವಲ್ಲದೇ ಫಿಟ್ನೆಸ್ನಲ್ಲೂ ಮುಂಚೂಣಿಯಲ್ಲಿದ್ದಾರೆ. ಇವರಿಗೆ 35 ವರ್ಷವಾದರೂ ಯುವ ಆಟಗಾರರನ್ನು ಸರಿಗಟ್ಟುವಷ್ಟು ಫಿಟ್ನೆಸ್ ಹೊಂದಿದ್ದಾರೆ. ಇದಕ್ಕೆ ಮುಖ್ಯ ಕಾರಣ ನಿಯಮಿತ ಪ್ರಮಾಣದ ವ್ಯಾಯಾಮ ಮತ್ತು ಆಹಾರ ಸೇವನೆ.
ಮೈದಾನದಲ್ಲಿ ಜಿಂಕೆಯಂತೆ ಓಡುವ ಕೊಹ್ಲಿ ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ತಮ್ಮ ಫಿಟ್ನೆಸ್ನ ರಹಸ್ಯವನ್ನು ಬಹಿರಂಗಪಡಿಸಿದ್ದರು. ದಿನದ ಡಯಟ್ ಪ್ಲಾನ್ ಬಗ್ಗೆಯೂ ತಿಳಿಸಿದ್ದರು.
ಇದು ಕೊಹ್ಲಿ ಡಯಟ್ ಪ್ಲಾನ್:ಕ್ರಿಕೆಟ್ ವಿವರಣೆಗಾರ ಜತಿನ್ ನಡೆಸಿದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ತಮ್ಮ ಆಹಾರ ಕ್ರಮದ ಕೆಲವು ರಹಸ್ಯಗಳನ್ನು ಹಂಚಿಕೊಂಡರು. ಬೆಳಗಿನ ಉಪಹಾರದಲ್ಲಿ ಎಗ್ ಆಮ್ಲೆಟ್, 3 ಎಗ್ ವೈಟ್ ಮತ್ತು ಒಂದು ಪೂರ್ಣಪ್ರಮಾಣ ಮೊಟ್ಟೆ, ಪಾಲಕ್, ಬೇಯಿಸಿದ ಹಂದಿ ಮಾಂಸ ಮತ್ತು ಮೀನು, ಪಪ್ಪಾಯ, ಡ್ರ್ಯಾಗನ್ ಫ್ರೂಟ್, ಕಲ್ಲಂಗಡಿ, ನಿಯಮಿತ ಪ್ರಮಾಣದಲ್ಲಿ ಚೀಸ್, ಬ್ರೆಡ್ ಜೊತೆ ನಟ್ ಬಟ್ಟರ್ ಅನ್ನು ಕೊಹ್ಲಿ ಸೇವಿಸುತ್ತಾರೆ. ಇದಲ್ಲದೇ ದಿನಕ್ಕೆ ಮೂರರಿಂದ ನಾಲ್ಕು ಕಪ್ ಗ್ರೀನ್ ಟಿ ಕುಡಿಯುತ್ತಾರಂತೆ.