ನವದಹೆಲಿ: ಅಮೆರಿಕನ್ ಶಾಟ್ ಪುಟ್ ಅಥ್ಲೀಟ್ ರೇಯಾನ್ ಕ್ರೂಗರ್ ಪ್ಯಾರಿಸ್ ಒಲಿಂಪಿಕ್ನಲ್ಲಿ ಗೆದ್ದ ಚಿನ್ನದ ಪದಕವನ್ನು ತನ್ನ ನಾಯಿಗೆ ತೊಡಿಸುವ ಮೂಲಕ ಮುಂದಿನ ಲಾಸ್ ಏಂಜಲೀಸ್ ಒಲಿಂಪಿಕ್ಗೆ ತಯಾರಿ ಆರಂಭಿಸಿದ್ದಾರೆ.
3 ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಮೆರಿಕನ್ ಅಥ್ಲೀಟ್ ರೇಯಾನ್ ಕ್ರೌಸರ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಮುಂದಿನ ತಯಾರಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಾವು ಅಭ್ಯಾಸದಲ್ಲಿ ತೊಡಗಿದ್ದು, ಮುಂಭಾಗದಲ್ಲಿ ಅವರು ಸಾಕು ನಾಯಿ ಚಿನ್ನದ ಪದಕ ಧರಿಸಿಕೊಂಡು ತನ್ನ ಮಾಲೀಕನ ಅಭ್ಯಾಸವನ್ನು ವೀಕ್ಷಿಸುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಅದಕ್ಕೆ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.