ಕರ್ನಾಟಕ

karnataka

ETV Bharat / sports

ವಿರಾಟ್​ ಕೊಹ್ಲಿ, ಸಚಿನ್​ ತೆಂಡೂಲ್ಕರ್ ಅಲ್ಲವೇ ಅಲ್ಲ; 27 ವರ್ಷದ ಈ ಆಟಗಾರನೇ ವಿಶ್ವದ ಶ್ರೀಮಂತ ಕ್ರಿಕೆಟರ್​, ಯಾರೆಂದು ಗೊ್ತಾ? - Richest Cricketer In World - RICHEST CRICKETER IN WORLD

ವಿಶ್ವದ ಶ್ರೀಮಂತ ಕ್ರಿಕೆಟರ್​ ಯಾರು ಎಂದು ನಿಮಗೆ ಗೊತ್ತಾ, ವಿರಾಟ್​ ಕೊಹ್ಲಿ, ಧೋನಿ, ತೆಂಡೂಲ್ಕರ್​ಗಿಂತಲೂ ಈ 27 ವರ್ಷದ ದೇಶಿಯ ಕ್ರಿಕೆಟರ್​ ಅತೀ ಹೆಚ್ಚು ಸಂಪತನ್ನು ಹೊಂದಿದ್ದು, ಶ್ರೀಮಂತ ಆಟಗಾರ ಎನಿಸಿಕೊಂಡಿದ್ದಾರೆ. ಯಾರು ಆ ಕ್ರಿಕೆಟರ್​, ಎಷ್ಟು ಆಸ್ತಿಯ ಒಡೆಯ ಎಂಬುದರ ಬಗ್ಗೆ ಈ ಕೆಳಗಿದೆ ಮಾಹಿತಿ.​

ಸಚಿನ್​ ತೆಂಡೂಲ್ಕರ್​ ಮತ್ತು ವಿರಾಟ್​ ಕೊಹ್ಲಿ
ಸಚಿನ್​ ತೆಂಡೂಲ್ಕರ್​ ಮತ್ತು ವಿರಾಟ್​ ಕೊಹ್ಲಿ ((IANS))

By ETV Bharat Sports Team

Published : Sep 6, 2024, 2:56 PM IST

ನವದೆಹಲಿ: ಶ್ರೀಮಂತ ಕ್ರಿಕೆಟರ್​ ಯಾರು ಎಂದು ಕೇಳಿದರೇ ಥಟ್​ಅಂತಾ ವಿರಾಟ್​ ಕೊಹ್ಲಿ, ಸಚಿನ್​ ತೆಂಡೂಲ್ಕರ್​, ಎಂ ಎಸ್​ ಧೋನಿ ಎಂದು ಹೇಳುತ್ತಾರೆ. ಆದರೆ, ಇವರಿಗೂ ಮೀರಿದ ಸಂಪತ್ತನ್ನು ಈ 27 ವರ್ಷದ ಕ್ರಿಕೆಟರ್​ ಹೊಂದಿದ್ದಾರೆ. ಹೌದು ಈ ಆಟಗಾರ ಹೆಚ್ಚಾಗಿ ಕ್ರಿಕೆಟ್​ ಪಂದ್ಯಗಳನ್ನು ಆಡಿಲ್ಲವಾದರೂ ಅವರಲ್ಲಿರುವ ಸಂಪತ್ತು ವಿಶ್ವದ ಶ್ರೀಮಂತ ಕ್ರಿಕೆಟರನ್ನಾಗಿಸಿದೆ.

ಹೌದು, ವಿಶ್ವದಲ್ಲಿ ದಿನದಿಂದ ದಿನಕ್ಕೆ ಕ್ರಿಕೆಟ್ ಕ್ರೇಜ್ ಹೆಚ್ಚಾಗುತ್ತಿದಂತೆ ಆಟಗಾರರಿಗೆ ಫ್ಯಾನ್ ಫಾಲೋಯಿಂಗ್​ ಕೂಡ ಬೆಳೆಯುತ್ತಿದೆ. ಇದರಿಂದ ಅವರ ಬ್ರಾಂಡ್​ ಮೌಲ್ಯ ಮತ್ತು ಗಳಿಕೆಯೂ ಹೆಚ್ಚುತ್ತಿದೆ. ಈ ಹಿಂದೆ ಕ್ರಿಕೆಟರ್​ಗಳು ಸಾಮಾನ್ಯ ಮೊತ್ತದಲ್ಲಿ ಗಳಿಕೆ ಮಾಡುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ರಿಕೆಟಿಗರು ಕೋಟ್ಯಂತರ ಹಣ ಸಂಪಾದಿಸುತ್ತಿದ್ದಾರೆ. ಅದರಲ್ಲೂ ಭಾರತೀಯ ಕ್ರಿಕೆಟಿಗರು ವಿದೇಶಿ ಕ್ರಿಕೆಟಿಗರಿಗಿಂತ ಹೆಚ್ಚಿನ ಆದಾಯ ಗಳಿಸುತ್ತಾರೆ. ಸಚಿನ್ ತೆಂಡೂಲ್ಕರ್‌ ಅವರಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ ಅನೇಕ ಕ್ರಿಕೆಟಿಗರು ಸಾವಿರಾರೂ ಕೋಟಿ ರೂಪಾಯಿಗಳ ಒಡೆಯರಾಗಿದ್ದಾರೆ. ಆದರೆ ಇವರೆಲ್ಲರಿಗೂ ಮೀರಿಸುವಷ್ಟು ಸಂಪತನ್ನು ಯುವ ಕ್ರಿಕೆಟರ್​ ಆರ್ಯಮನ್ ಬಿರ್ಲಾ ಹೊಂದಿದ್ದಾರೆ.

ಮುಂಬೈ ಮೂಲದ 27 ವರ್ಷದ ಆರ್ಯಮನ್​ ಭಾರತದ ಪರ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದೇ ಕೇವಲ ದೇಶಿಯ ಕ್ರಿಕೆಟ್​ನಲ್ಲಿ ಮಿಂಚಿರುವ ಬಿರ್ಲಾ 70 ಸಾವಿರ ಕೋಟಿಯ ವಡೆಯನಾಗಿದ್ದಾರೆ. ಕೇವಲ ಭಾರತಕ್ಕೆ ಮಾತ್ರವಲ್ಲದೇ ವಿಶ್ವದ ಶ್ರೀಮಂತ ಕ್ರಿಕೆಟರ್​ ಆಗಿದ್ದಾರೆ.

ವಾಸ್ತವವಾಗಿ, ಆರ್ಯಮನ್ ಬಿರ್ಲಾ ಭಾರತದ ಹಿರಿಯ ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರರಾಗಿದ್ದಾರೆ. ಕುಮಾರ್ ಮಂಗಳಂ ಬಿರ್ಲಾ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಆರ್ಯಮನ್‌ ಉದ್ಯಮಿ ಕುಟುಂಬದಲ್ಲಿ ಜನಿಸಿದರೂ, ಬಾಲ್ಯದಿಂದಲೂ ಕ್ರಿಕೆಟ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಇದಕ್ಕಾಗಿ ಕಠಿಣ ಪರಿಶ್ರಮ ನಡೆಸಿ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದರು. ಮಧ್ಯಪ್ರದೇಶ ಪರ ದೇಶೀಯ ಕ್ರಿಕೆಟ್ ಆಡಿದ ಆರ್ಯಮನ್ ಬಿರ್ಲಾ 2019ರಲ್ಲಿ ಕ್ರಿಕೆಟ್‌ನಿಂದ ದೂರ ಉಳಿದರು. ಮಾನಸಿಕ ಆರೋಗ್ಯದ ಕಾರಣದಿಂದಾಗಿ 22ನೇ ವಯಸ್ಸಿನಲ್ಲಿ ಕ್ರಿಕೆಟ್​ನಿಂದ ವಿರಾಮ ಕೂಡಾ ಪಡೆದುಕೊಂಡರು.

ಇದನ್ನೂ ಓದಿ:ಪ್ರೈವೇಟ್​ ಜೆಟ್​ ಹೊಂದಿರುವ ಭಾರತೀಯ ಕ್ರಿಕೆಟರ್​ಗಳು: ಯಾರ ಬಳಿ ಎಷ್ಟು ಬೆಲೆಯ ಜೆಟ್​ ಇವೆ ಗೊತ್ತಾ? - Indian cricketer owns a private jet

ಆರ್ಯಮನ್ ಬಿರ್ಲಾ ಕ್ರಿಕೆಟ್ ವೃತ್ತಿಜೀವನ:ಆರ್ಯಮಾನ್ ಬಿರ್ಲಾ ಅವರು 2017 ರಂದು ರಣಜಿ ಟ್ರೋಫಿ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಮಧ್ಯಪ್ರದೇಶವನ್ನು ಪ್ರತಿನಿಧಿಸಿದ್ದರು. 2018 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕವನ್ನು ದಾಖಲಿಸಿದರು. 2018ರ ಐಪಿಎಲ್ ವೇಳೆ ನಡೆದ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಆರ್ಯಮನ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಐಪಿಎಲ್‌ನಲ್ಲಿ ಮಿಂಚಲು ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. 2019ರಲ್ಲಿ ಮಾನಸಿಕ ಆರೋಗ್ಯದ ಕಾರಣ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡರು. ಇದರ ನಂತರ, ರಾಜಸ್ಥಾನ್ ರಾಯಲ್ಸ್ 2020ರ ಐಪಿಎಲ್ ಹರಾಜಿಗೆ ಮೊದಲೇ ಬಿರ್ಲಾ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ:ವಿರಾಟ್​ ಕೊಹ್ಲಿ ಬಳಿ ಇವೆ 10 ದುಬಾರಿ ವಾಚ್​ಗಳು: ಒಂದೊಂದರ ಬೆಲೆ ಕೇಳಿದರೆ ಶಾಕ್​ ಆಗ್ತೀರಾ! - Virat Kohli Expensive Watches

ABOUT THE AUTHOR

...view details