ಕರ್ನಾಟಕ

karnataka

ETV Bharat / sports

ಅಚ್ಚರಿ..! ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ವೇಗದ ಬೌಲರ್! - SIDDHARTH KAUL

ಟೀಂ ಇಂಡಿಯಾದ ವೇಗದ ಬೌಲರ್​ ಮತ್ತು RCBಯ ಮಾಜಿ ಆಟಗಾರ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

FAST BOWLER RETIREMENT  BOWLER SIDDHARTH KAUL RETIREMENT  TEAM INDIA BOWLER RETIREMENT  ಸಿದ್ಧಾರ್ಥ್​ ಕೌಲ್​
Indian bowler retirement (IANS)

By ETV Bharat Sports Team

Published : Nov 29, 2024, 5:02 PM IST

Indian bowler retirement: ಟೀಂ ಇಂಡಿಯಾದ ವೇಗದ ಬೌಲರ್​ ಮತ್ತು ವಿರಾಟ್​ ಕೊಹ್ಲಿಯ ಸಹ ಆಟಗಾರ ಕ್ರಿಕೆಟ್​ಗೆ ನಿವೃತ್ತ ಘೋಷಿಸಿದ್ದಾರೆ. ಟೀಂ ಇಂಡಿಯಾ ಪರ ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಿದ್ದ ಇವರು 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಇದಷ್ಟೇ ಅಲ್ಲದೇ 55ಕ್ಕೂ ಹೆಚ್ಚು ಐಪಿಎಲ್​ ಪಂದ್ಯಗಳನ್ನು ಆಡಿದ್ದರು.

ಯಾರಿವರು ಟೀಂ ಇಂಡಿಯಾದ ವೇಗದ ಬೌಲರ್​ :ಈ ಹಿಂದೆ ಆರ್​ಸಿಬಿಯ ಸ್ಟಾರ್​ ಬೌಲರ್​ ಆಗಿದ್ದ ಇವರು ಬಳಿಕ ಸನ್​ ರೈಸರ್ಸ್​ ಹೈದರಾಬಾದ್​ ಪರ ಆಡಿದ್ದರು. ಒಟ್ಟು 55 ಐಪಿಎಲ್​ ಪಂದ್ಯಗಳನ್ನು ಆಡಿ 58 ವಿಕೆಟ್​ಗಳನ್ನು ಉರುಳಿಸಿದ್ದರು. 29 ರನ್​ಗಳಿಗೆ 4 ವಿಕೆಟ್​ ಪಡೆದಿದ್ದು ಐಪಿಎಲ್​ನಲ್ಲಿ ಇವರ ಬೆಸ್ಟ್​ ಇನ್ನಿಂಗ್ಸ್​ ಆಗಿತ್ತು. ಮೇ 19 2022ರಂದು ಇವರು ಗುಜರಾತ್​ ಟೈಟಾನ್ಸ್​ ಪರ ಕೊನೆಯ ಐಪಿಎಲ್​ ಪಂದ್ಯವನ್ನಾಡಿದ್ದರು.

ಹೌದು ನಾವು ಹೇಳುತ್ತಿರುವು ವಿರಾಟ್​ ಕೊಹ್ಲಿಯ ಸಹ ಆಟಗಾರ ಟೀಂ ಇಂಡಿಯಾದ ವೇಗದ ಬೌಲರ್​ ಸಿದ್ದಾರ್ಥ್​ ಕೌಲ್ ಕುರಿತು​. ಹೌದು, ಟೀಂ ಇಂಡಿಯಾದ ವೇಗದ ಬೌಲರ್​ ಆಗಿದ್ದ ಸಿದ್ದಾರ್ಥ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. 2018ರಲ್ಲಿ ಇಂಗ್ಲೆಂಡ್​ ವಿರುದ್ಧ ODI ಪಂದ್ಯದೊಂದಿಗೆ ಅಂತರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಇವರು ಅದೇ ವರ್ಷ ಸೆಪ್ಟೆಂಬರ್​ 25 ರಂದು ಅಫ್ಘಾನಿಸ್ತಾನ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. ಇದಾದ ಬಳಿಕ ಕೊನೆಯ ಬಾರಿಗೆ 2019ರಂದು ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯವನ್ನಾಡಿದ್ದರು. ಇದು ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.

ಐಪಿಎಲ್​​ನಲ್ಲಿ ಆಡಿದ್ದ ಸಿದ್ದಾರ್ಥ ಕೌಲ್​ಬಳಿಕ ಐಪಿಎಲ್​ ನಲ್ಲಿ ಮುಂದುವರೆದ ಅವರು ತಮ್ಮ ​ಡೆಲ್ಲಿ ಕ್ಯಾಪಿಟಲ್ಸ್​, ಸನ್​ ರೈಸರ್ಸ್​ ಹೈದರಾಬಾದ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಗುಜರಾತ್​ ಟೈಟಾನ್ಸ್​ ಪರ ಆಡಿದ್ದರು. ಇದರಲ್ಲದೆ ಕೌಲ್​ 88 ಪ್ರಥಮ ದರ್ಜೆ ಕ್ರಿಕೆಟ್​ಗಳನ್ನು ಆಡಿ 297 ವಿಕೆಟ್​ಳನ್ನು ಉರುಳಿಸಿದ್ದಾರೆ. 2023-24ರ ಸೈಯದ್​ ಅಲಿ ಮುಷ್ತಾಕ್​ ಟ್ರೋಫಿಯಲ್ಲೂ 10 ಪಂದ್ಯಗಳನ್ನು ಆಡಿದ್ದ ಅವರು 16 ವಿಕೆಟ್​ ಪಡೆದಿದ್ದಾರೆ. ವಿಜಯ ಹಜಾರೇ ಟ್ರೋಫಿಯಲ್ಲೂ 6 ಪಂದ್ಯಗಳನ್ನು ಆಡಿ 19 ವಿಕೆಟ್​ ಕಿತ್ತಿದ್ದಾರೆ.

ಐಪಿಎಲ್​ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದ ಕೌಲ್:2023ರಲ್ಲಿ ನಡೆದಿದ್ದ ಐಪಿಎಲ್​ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದ ಕೌಲ್​, ಇತ್ತೀಚೆಗೆ ಮುಕ್ತಾಯಗೊಂಡ 2025ರ ಹರಾಜಿನಲ್ಲೂ ಅನ್​ಸೋಲ್ಡ್​ ಆಟಗಾರರ ಪಟ್ಟಿಗೆ ಸೇರಿದ್ದರು. 2008ರಲ್ಲಿ ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಅಂಡರ್​ -19ರ ವಿಶ್ವಕಪ್​ ಗೆದ್ದ ತಂಡದ ಭಾಗವಾಗಿದ್ದ ಕೌಲ್​ ಗಾಯದ ಸಮಸ್ಯೆಯಿಂದಾಗಿ 5 ವರ್ಷಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಇದಾದ ಬಳಿಕ ಅವರಿಗೆ ಕ್ರಿಕೆಟ್​ನಲ್ಲಿ ಹೆಚ್ಚಿನ ಅವಕಾಶಗಳು ಸಿಗದೇ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್​ ನಿಂದ ಕಣ್ಮರೆಯಾದರು. ಇದೀಗ ಅವರು ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

ಇದನ್ನೂ ಓದಿ:ಮಹಾ ದುರಂತ!; ಕ್ರಿಕೆಟ್​ ಆಡುವಾಗಲೇ ಕುಸಿದು ಬಿದ್ದು ಆಲ್​ರೌಂಡರ್​ ಸಾವು: ಶೋಕ ಸಾಗರದಲ್ಲಿ ಕ್ರೀಡಾಲೋಕ!

ABOUT THE AUTHOR

...view details