ಹೈದರಾಬಾದ್:ಹೈದರಾಬಾದ್‌ನ ಆರಂಭಿಕ ಆಟಗಾರ ತನ್ಮಯ್ ಅಗರ್ವಾಲ್ ಶುಕ್ರವಾರ ಇಲ್ಲಿ ನಡೆದ ಅರುಣಾಚಲ ಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪ್ಲೇಟ್ ಗ್ರೂಪ್ ಪಂದ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗದ ತ್ರಿಶತಕಗಳ ವಿಶ್ವದಾಖಲೆಯನ್ನು ಮುರಿದರು.
28ರ ಹರೆಯದ ತನ್ಮಯ್ ಅಗರ್ವಾಲ್ ಕೇವಲ 147 ಎಸೆತಗಳಲ್ಲಿ ಮೈಲಿಗಲ್ಲನ್ನು ತಲುಪಿದರು. ಬಾರ್ಡರ್ ಮತ್ತು ವೆಸ್ಟರ್ನ್ ಪ್ರಾವಿನ್ಸ್ ನಡುವಿನ ಪಂದ್ಯದಲ್ಲಿ 191 ಎಸೆತಗಳಲ್ಲಿ ಸಾಧನೆ ಮಾಡಿದ್ದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಮಾರ್ಕೊ ಮರೈಸ್ ಅವರ ಹಿಂದಿನ ದಾಖಲೆಯನ್ನು ಮುರಿದರು. ನಗರದ ಹೊರವಲಯದಲ್ಲಿರುವ 'ಜೆನ್-ನೆಕ್ಸ್ಟ್' ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ.
ಹೈದರಾಬಾದ್ 357 ರನ್‌ಗಳ ಮುನ್ನಡೆ:ಪ್ಲೇಟ್ ಗ್ರೂಪ್ ಪಂದ್ಯದಲ್ಲಿ ದಿನದಾಟದ ಅಂತ್ಯಕ್ಕೆ ಕೇವಲ 160 ಎಸೆತಗಳಲ್ಲಿ ಹೈದರಾಬಾದ್‌ನ ತನ್ಮಯ್ ಅವರ ಅಜೇಯ 323 ರನ್‌ಗಳ ನೆರವಿನಿಂದ ಕೇವಲ 48 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 529 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ಸಾಕ್ಷಿಯಾಯಿತು. ಮೊದಲ ಇನಿಂಗ್ಸ್ನಲ್ಲಿ ಅರುಣಾಚಲ 39.1 ಓವರ್‌ಗಳಲ್ಲಿ 172 ರನ್ ಗಳಿಸಿತ್ತು. ನಂತರ ಹೈದರಾಬಾದ್ ಎಡಗೈ ಆಟಗಾರ ತನ್ಮಯ್ ಇನ್ನಿಂಗ್ಸ್ 33 ಬೌಂಡರಿ ಮತ್ತು 21 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇನ್ನು ರಾಹುಲ್ ಸಿಂಗ್ ಕೇವಲ 105 ಎಸೆತಗಳಲ್ಲಿ 185 ರನ್ ಸಿಡಿಸಿದರು. ಒಂಬತ್ತು ವಿಕೆಟ್ ಬಾಕಿ ಉಳಿಸಿಕೊಂಡಿರುವ ಹೈದರಾಬಾದ್ 357 ರನ್‌ಗಳ ಮುನ್ನಡೆ ಸಾಧಿಸಿದೆ.