ಕರ್ನಾಟಕ

karnataka

ETV Bharat / sports

'ಭಾರತ ಗೆಲ್ಲಲಿಲ್ಲ, ಪಾಕಿಸ್ತಾನ ಸೋತಿತು': ಪಾಕ್ ಮಾಜಿ ನಾಯಕ ಮುಷ್ತಾಕ್ ಮೊಹಮ್ಮದ್ - Mushtaq Mohammad - MUSHTAQ MOHAMMAD

ನಿನ್ನೆಯ ಪಂದ್ಯದಲ್ಲಿ ಭಾರತ ಗೆಲ್ಲಲಿಲ್ಲ, ಬದಲಿಗೆ ಪಾಕಿಸ್ತಾನ ಸೋತಿತು ಎಂದು ಮುಷ್ತಾಕ್ ಮೊಹಮ್ಮದ್ ಹೇಳಿದ್ದಾರೆ.

T20 World Cup | India didn't win it...Pakistan lost it: former skipper-coach Mushtaq Mohammad
ಭಾರತ ಪಾಕಿಸ್ತಾನ ಟಿ20 ವಿಶ್ವಕಪ್‌ ಪಂದ್ಯ (IANS)

By ETV Bharat Karnataka Team

Published : Jun 10, 2024, 6:47 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಅಮೆರಿಕದ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತೋರಿದ ಕಳಪೆ ಪ್ರದರ್ಶನಕ್ಕೆ ಪಾಕ್​ನ ಮಾಜಿ ನಾಯಕ ಮತ್ತು ಕೋಚ್ ಮುಷ್ತಾಕ್ ಮೊಹಮ್ಮದ್ ಟೀಕಾಪ್ರಹಾರ ನಡೆಸಿದ್ದಾರೆ.

ಭಾರತೀಯ ಕ್ರಿಕೆಟ್​ ತಂಡವನ್ನು (119 ರನ್) ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರೂ, ಈ ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಸೋಲು ಕಂಡಿತು. ಪಾಕಿಸ್ತಾನದ ಕಾರ್ಯತಂತ್ರದ ಬಗ್ಗೆ ಇದೀಗ ಮುಷ್ತಾಕ್ ಮೊಹಮ್ಮದ್ ಪ್ರತಿಕ್ರಿಯಿಸಿದ್ದಾರೆ.

ಈ ಪಂದ್ಯದಲ್ಲಿ ಭಾರತ ಗೆಲ್ಲಲಿಲ್ಲ ಬದಲಾಗಿ ಪಾಕಿಸ್ತಾನವೇ ಸೋತಿತು. ಅದೂ ತೀರಾ ಕೆಟ್ಟದಾಗಿ. ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಸೋಮವಾರ ಬೆಳಿಗ್ಗೆ 'ಈಟಿವಿ ಭಾರತ'ಕ್ಕೆ ನೀಡಿದ ವಿಶೇಷ ಸಂವಾದದಲ್ಲಿ ಹೇಳಿದರು.

ಎರಡೂ ತಂಡಗಳು ಗುಣಮಟ್ಟದ ಆಟ ಆಡದಿರುವುದು ಮತ್ತೊಂದು ಅವಮಾನಕರ ಸಂಗತಿ. ಪಂದ್ಯದುದ್ದಕ್ಕೂ ನೀರಸ ಪ್ರದರ್ಶನ ತೋರಿದರು. ಭಾರತ ಬೌಲಿಂಗ್​ನಲ್ಲಿ ಸ್ವಲ್ಪಮಟ್ಟಿಗೆ ಉತ್ತಮ ಪ್ರದರ್ಶನ ತೋರಿದ್ದರಿಂದ ಪಂದ್ಯ ಅವರ ಪಾಲಾಯಿತು. ಆದರೆ, ಇಂಥ ಹೈವೋಲ್ಟೇಜ್​ ಪಂದ್ಯದಲ್ಲಿ ಬಲಿಷ್ಟ ತಂಡಗಳೆರಡು ಬಲ ಕಳೆದುಕೊಂಡಂತೆ ಆಡಿದರು. ಎರಡೂ ತಂಡಗಳ ಕಳಪೆ ಪ್ರದರ್ಶನದಲ್ಲಿ ಪಾಕಿಸ್ತಾನ ಎರಡರಲ್ಲಿ ಎರಡನೇ ಸ್ಥಾನ ಗಳಿಸಿತು ಎಂದು ಮುಷ್ತಾಕ್ ವಿಶ್ಲೇಷಿಸಿದರು.

ಇದೇ ವೇಳೆ ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಶಾದಾಬ್ ಖಾನ್ ಅವರ ಬ್ಯಾಟಿಂಗ್ ವೈಖರಿ ಬಗ್ಗೆ ಕಿಡಿಕಾರಿರುವ ಮುಷ್ತಾಕ್, ಇವರ ಬೇಜವಾಬ್ದಾರಿಯುತ ಹೊಡೆತಗಳು ಕೂಡ ತಂಡಕ್ಕೆ ಮುಳುವಾದವು. ಇಂತಹ ನಾಚಿಕೆಗೇಡಿನ ಪ್ರದರ್ಶನವನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದರು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ರೋಹಿತ್ ಶರ್ಮಾ ನೇತೃತ್ವದ ಭಾರತ, 19 ಓವರ್‌ಗಳಲ್ಲಿ 119 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ ಪಾಕಿಸ್ತಾನ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಸೋಲುಂಡಿತು. ತಾನಾಡಿರುವ ಎರಡೂ ಪಂದ್ಯಗಳನ್ನು ಕಳೆದುಕೊಂಡಿರುವ ಪಾಕಿಸ್ತಾನ ಗ್ರೂಪ್​ ಹಂತದಲ್ಲೇ ಲೀಗ್​​ನಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಈಗ ಸೂಪರ್ 8ಗೆ ಅರ್ಹತೆ ಪಡೆಯಲು ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಲೇಬೇಕಿದೆ.

ಇದನ್ನೂ ಓದಿ:ಭಾರತದ ವಿರುದ್ಧ ಸೋಲು: ಕಣ್ಣೀರು ಹಾಕುತ್ತಾ ಮೈದಾನದಿಂದ ಹೊರಬಂದ ಪಾಕ್​ ವೇಗಿ ನಸೀಮ್ ಶಾ - Naseem Shah

ABOUT THE AUTHOR

...view details