ಕರ್ನಾಟಕ

karnataka

ETV Bharat / sports

ಟಿ-20 ವಿಶ್ವಕಪ್ 2024: ಶ್ರೀಲಂಕಾ ವಿರುದ್ಧ 2 ವಿಕೆಟ್​ಗಳಿಂದ ರೋಚಕ ಜಯ ಗಳಿಸಿದ ಬಾಂಗ್ಲಾದೇಶ - SL vs BAN T20 World Cup 2024 - SL VS BAN T20 WORLD CUP 2024

ಡಲ್ಲಾಸ್ ನಡೆದ ಟಿ20 ವಿಶ್ವಕಪ್ 2024ರ ಡಿ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶವು 2 ವಿಕೆಟ್​ಗಳಿಂದ ರೋಚಕ ಜಯ ಗಳಿಸಿದೆ.

BAN VS SL T20 RESULT  NUWAN THUSHARA  MATHEESH PATHIRANA  DASUN SHANAK
ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ಗೆಲುವು: 2 ವಿಕೆಟ್​ಗಳಿಂದ ರೋಚಕ ಜಯ (ETV Bharat)

By ETV Bharat Karnataka Team

Published : Jun 8, 2024, 12:21 PM IST

ಡಲ್ಲಾಸ್‌ (ಅಮೆರಿಕ):ಡಲ್ಲಾಸ್‌ನ ಕ್ರೀಡಾಂಗಣದಲ್ಲಿ ನಡೆದ ICC T20 ವಿಶ್ವಕಪ್ 2024ರ ಡಿ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶವು 2 ವಿಕೆಟ್‌ಗಳಿಂದ ರೋಚಕ ಗೆಲುವು ದಾಖಲಿಸಿದೆ.

ಮೊದಲ ಪಂದ್ಯದಲ್ಲೇ ಬಾಂಗ್ಲಾಕ್ಕೆ ಜಯ:ಟೂರ್ನಿಯಲ್ಲಿ ಶ್ರೀಲಂಕಾಗೆ ಇದು ಸತತ ಎರಡನೇ ಸೋಲು, ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್‌ಗಳಿಂದ ಸೋತಿತ್ತು. ಈ ಸೋಲಿನ ನಂತರ ಶ್ರೀಲಂಕಾ ಈಗ ಟೂರ್ನಿಯಿಂದ ಹೊರ ಬೀಳುವ ಭೀತಿಯಲ್ಲಿದೆ. ಏಕೆಂದರೆ, ಶ್ರೀಲಂಕಾಗೆ ಒಂದೇ ಒಂದು ಮ್ಯಾಚ್​ ಸೋತರೂ ಕೂಡ ಪಂದ್ಯಾವಳಿಯಿಂದ ಹೊರಹೋಗಲಿದೆ. ಬಾಂಗ್ಲಾದೇಶವು ಡಿ ಗುಂಪಿನ ಮೊದಲ ಪಂದ್ಯದಲ್ಲೇ ವಿಜಯ ಸಾಧಿಸಿದೆ.

ಮ್ಯಾಚ್ ಮಾಹಿತಿ:ಈ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಆಡಿದ ಶ್ರೀಲಂಕಾ ತಂಡ 124/9 ರನ್​ ಗಳಿಸಿತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡವು 6 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್‌ಗಳಿಂದ ಟಾರ್ಗೆಟ್​ ತಲುಪಿತು. ಕೊನೆಯವರೆಗೂ ಉಳಿದುಕೊಂಡಿದ್ದ ಬಾಂಗ್ಲಾದೇಶ 16 ರನ್ ಗಳಿಸಿ ಪಂದ್ಯವನ್ನು ಅಂತ್ಯಗೊಳಿಸಿತು.

ಶ್ರೀಲಂಕಾ ಪರ ಪಾಥುಮ್ ನಿಶಾಂಕ 28 ಎಸೆತಗಳಲ್ಲಿ 47 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಬಾಂಗ್ಲಾದೇಶ ಪರ ಮುಸ್ತಫಿಜುರ್ ರೆಹಮಾನ್ 4 ಓವರ್‌ಗಳಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದರು. ರೆಹಮಾನ್ ಶ್ರೀಲಂಕಾದ ಅಗ್ರ ಕ್ರಮಾಂಕದ ಬ್ಯಾಟರ್​ಗಳನ್ನು ಪೆವಿಲಿಯನ್​ಗೆ ಕಳುಹಿಸಿದರು. ಮತ್ತೊಂದೆಡೆ, ರಿಶಾದ್ ಹುಸೇನ್ ಶ್ರೀಲಂಕಾ ತಂಡದ ಮೂರು ಬಲಿಷ್ಠ ವಿಕೆಟ್‌ಗಳನ್ನು ಕಬಳಿಸಿದರು.

ಬಾಂಗ್ಲಾದೇಶ, ಚೇಸಿಂಗ್ ಮಾಡುವಾಗ, 1ರಿಂದ 7 ಓವರ್‌ಗಳ ನಡುವೆ 37/3 ರನ್​ ಗಳಿಸಿತು. ತಂಡದ ರನ್ ರೇಟ್​ 5.29 ಆಗಿತ್ತು. ಇದಾದ ಬಳಿಕ 8 ರಿಂದ 12ರ ನಡುವೆ ಬಾಂಗ್ಲಾದೇಶ ತಂಡ ಪ್ರತಿ ಓವರ್‌ಗೆ 11 ರನ್‌ಗಳಂತೆ 55 ರನ್ ಗಳಿಸಿ, ಕೇವಲ ಒಂದು ವಿಕೆಟ್ ಕಳೆದುಕೊಂಡಿತು. ಆದರೆ 13ರಿಂದ 18 ಓವರ್‌ಗಳಲ್ಲಿ, ಶ್ರೀಲಂಕಾ ಮತ್ತೊಮ್ಮೆ ಪುನರಾಗಮನ ಮಾಡಿತು. ಬಾಂಗ್ಲಾದೇಶದ 22 ರನ್‌ಗಳ ಗಳಿಸುವುದರೊಳಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಿರುವಾಗ ಶ್ರೀಲಂಕಾ ತಂಡ ಈ ಪಂದ್ಯವನ್ನು ಗೆಲ್ಲಲಿದೆ ಎಂದು ಎಲ್ಲರೂ ಭಾವಿಸಿದ್ದರು. ಬಾಂಗ್ಲಾದೇಶ 19ನೇ ಓವರ್‌ನಲ್ಲಿ 11 ರನ್ ಗಳಿಸುವ ಮೂಲಕ ಪಂದ್ಯದ ಗೆಲುವಿನತ್ತ ಸಾಗಿತು. ವಿಶೇಷವೆಂದರೆ, 19ನೇ ಓವರ್‌ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿತು.

15ನೇ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ಚರಿತ್ ಅಸಲಂಕಾ (19) ಮತ್ತು ಶ್ರೀಲಂಕಾ ನಾಯಕ ವನಿಂದು ಹಸರಂಗ (0) ಅವರನ್ನು ಔಟ್ ಮಾಡುವ ಮೂಲಕ ರಿಷಾದ್ ಶ್ರೀಲಂಕಾವನ್ನು ಕಂಗೆಡಿಸಿದರು. ಅವರು ತಮ್ಮ ಮುಂದಿನ ಓವರ್‌ನಲ್ಲಿ ಧನಂಜಯ ಡಿ ಸಿಲ್ವಾ (21) ಅವರನ್ನು ಔಟ್ ಮಾಡಿದರು. ಧನಂಜಯ ಔಟಾದಾಗ ಶ್ರೀಲಂಕಾ ಸ್ಕೋರ್ 109/6 ಆಗಿತ್ತು. ಇದಾದ ನಂತರ ಶ್ರೀಲಂಕಾದ ವಿಕೆಟ್‌ಗಳು ಕುಸಿಯುತ್ತಲೇ ಇದ್ದವು ಮತ್ತು ಕೇವಲ 124 ರನ್ ಗಳಿಸಲಷ್ಟೇ ಶಕ್ತವಾಯಿತು.

ಮತ್ತೊಂದೆಡೆ, ಚೇಸಿಂಗ್ ವೇಳೆ ಬಾಂಗ್ಲಾದೇಶದ ಆರಂಭವೂ ಕೆಟ್ಟದಾಗಿತ್ತು. 28 ರನ್ ತಲುಪುವ ವೇಳೆಗೆ ಅವರ ಸೌಮ್ಯ ಸರ್ಕಾರ್ (0), ತಂಜಿದ್ ಹಸನ್ (3), ನಜ್ಮುಲ್ ಹಸನ್ ಶಾಂಟೊ (7) ಮೂರು ವಿಕೆಟ್‌ಗಳು ಪತನಗೊಂಡವು. ಆದರೆ, ಲಿಟನ್ ದಾಸ್ (36) ಮತ್ತು ತೌಹೀದ್ ಹೃದಯ್ (40) ಜೊತೆಯಾಟದಿಂದ 91 ರನ್‌ ಕಲೆ ಹಾಕಲು ಸಾಧ್ಯವಾಯಿತು. ಈ ಸ್ಕೋರ್‌ನಲ್ಲಿ ತೌಹೀದ್ ಔಟಾದರು. ನಂತರ 113 ರನ್ ತಲುಪುವ ವೇಳೆಗೆ ಬಾಂಗ್ಲಾದೇಶ 8 ವಿಕೆಟ್ ಕಳೆದುಕೊಂಡಿತ್ತು. ಮಹಮ್ಮದುಲ್ಲಾ ದೃಢವಾಗಿ ಉಳಿದು ತನ್ನ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಇದನ್ನೂ ಓದಿ:ಟಿ20 ವಿಶ್ವಕಪ್‌: ನ್ಯೂಜಿಲೆಂಡ್​ಗೆ ಶಾಕ್;​ 84 ರನ್​ಗಳ ಗೆಲುವು ದಾಖಲಿಸಿದ ಅಫ್ಘಾನಿಸ್ತಾನ - Afghanistan Defeats New Zealand

ABOUT THE AUTHOR

...view details