ಕರ್ನಾಟಕ

karnataka

ETV Bharat / sports

ಇಂದಿನಿಂದ ಅರಬ್ಬರ ನಾಡಲ್ಲಿ ಮಹಿಳಾ ಟಿ20 ವಿಶ್ವಕಪ್​ ಕಲರವ: ಭಾರತದ ಮೊದಲ ಪಂದ್ಯ ಯಾರ ವಿರುದ್ಧ ಗೊತ್ತಾ? - Womens T20 World Cup

ಇಂದಿನಿಂದ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಗಳು ​ಆರಂಭಗೊಳ್ಳಲಿವೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್​ಲೆಂಡ್​ ತಂಡಗಳು ಮುಖಾಮುಖಿಯಾಗಲಿವೆ.

ಮಹಿಳಾ ಟಿ20 ವಿಶ್ವಕಪ್​
ಮಹಿಳಾ ಟಿ20 ವಿಶ್ವಕಪ್​ (IANS)

By ETV Bharat Sports Team

Published : Oct 3, 2024, 3:08 PM IST

ಹೈದರಾಬಾದ್​: ಮಹಿಳಾ ವಿಶ್ವಕಪ್ 2024ರ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಟಿ20 ಪಂದ್ಯ ಆರಂಭವಾಗಲಿದೆ. ದುಬೈನಲ್ಲಿ ನಡೆಯುತ್ತಿರುವ ವಿಶ್ವಸಮರದಲ್ಲಿ ಒಟ್ಟು 10 ತಂಡಗಳು ಸ್ಪರ್ಧಿಸುತ್ತಿವೆ. ಭಾರತ ಮಹಿಳಾ ತಂಡ ಈ ಬಾರಿಯೂ ಸಾಕಷ್ಟು ನಿರೀಕ್ಷೆಯೊಂದಿಗೆ ಅಖಾಡಕ್ಕಿಳಿಯುತ್ತಿದೆ. ಟೀಂ ಇಂಡಿಯಾ ಈಗಾಗಲೇ ಎರಡು ಬಾರಿ ಏಕದಿನ ಮತ್ತು ಟಿ20 ವಿಶ್ವಕಪ್‌ನಲ್ಲಿ ಫೈನಲ್ ತಲುಪಿದೆ, ಆದರೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಹರ್ಮನ್ ಪ್ರೀತ್​ ಪಡೆ ಹೇಗಾದರೂ ಮಾಡಿ ವಿಶ್ವ ಚಾಂಪಿಯನ್ ಆಗಬೇಕೆಂದು ಪಣತೋಟ್ಟು ಕಣಕ್ಕಿಳಿಯಲಿದೆ.

10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಪಂದ್ಯಗಳನ್ನು ನಡೆಸಲಾಗುತ್ತಿದೆ. ಎ ಗುಂಪಿನಲ್ಲಿ ಬಲಿಷ್ಠ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಭಾರತ ತಂಡ ಒಳಗೊಂಡಿವೆ. ಮತ್ತೊಂದೆಡೆ, ಬಾಂಗ್ಲಾದೇಶ, ಇಂಗ್ಲೆಂಡ್, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಬಿ ಗುಂಪಿನಲ್ಲಿವೆ. ಒಟ್ಟು 18 ದಿನಗಳ ನಡೆಯಲಿರುವ ಈ ಟೂರ್ನಿಯಲ್ಲಿ 23 ಪಂದ್ಯಗಳು ನಡೆಯಲಿವೆ.

ಇಂದು ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳು ಸೆಣಸಲಿವೆ. ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ. ಪ್ರತಿದಿನ ಎರಡು ಪಂದ್ಯಗಳು ನಡೆಯಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಶುಕ್ರವಾರ (ನಾಳೆ)ಯಂದು ಆಡಲಿದೆ. ಮೊದಲ ಕದನದಲ್ಲಿ ನ್ಯೂಜಿಲೆಂಡ್​ನೊಂದಿಗೆ ಸೆಣಸಲಿದೆ.

ಭಾರತದ ವೇಳಾಪಟ್ಟಿ

ಅಕ್ಟೋಬರ್ 04 ಭಾರತ - ನ್ಯೂಜಿಲೆಂಡ್ ಸಂಜೆ 7.30
ಅಕ್ಟೋಬರ್ 06 ಭಾರತ - ಪಾಕಿಸ್ತಾನ ಮಧ್ಯಾಹ್ನ 3.30
ಅಕ್ಟೋಬರ್ 09 ಭಾರತ - ಶ್ರೀಲಂಕಾ ಸಂಜೆ 7.30
ಅಕ್ಟೋಬರ್ 13 ಭಾರತ - ಆಸ್ಟ್ರೇಲಿಯಾ ಸಂಜೆ 7.30

ಲೈವ್ ಸ್ಟ್ರೀಮಿಂಗ್: ಸ್ಟಾರ್​ ಸ್ಪೋರ್ಟ್ಸ್​ ನೆಟ್​ವರ್ಕ್​, OTT ಪ್ಲಾಟ್‌ಫಾರ್ಮ್​ಗಳಾದ ಡಿಸ್ನಿ+ ಹಾಟ್‌ಸ್ಟಾರ್ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಎಲ್ಲಾ ಪಂದ್ಯಗಳನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಳನ್ ಹೇಮಲತಾ, ಆಶಾ ಶೋಭನಾ, ರಾಧಾಯಂಕ ಸಾಜೇಯಂಕ, ಸಜನ ಪಾಟೀಲ್

ಇದನ್ನೂ ಓದಿ:ಪದಾರ್ಪಣೆ ಪಂದ್ಯದಲ್ಲೇ 11 ವಿಕೆಟ್​ ಪಡೆದು ಸಂಚಲನ ಸೃಷ್ಟಿಸಿದ್ದ ಬೌಲರ್​ಗೆ ಕ್ರಿಕೆಟ್​ನಿಂದ 1 ವರ್ಷ ನಿಷೇಧ! - ICC has banned a cricketer

ABOUT THE AUTHOR

...view details