ಕೋಲ್ಕತ್ತಾ :ಇಲ್ಲಿನ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ಗೆ 209 ರನ್ಗಳ ಬೃಹತ್ ಟಾರ್ಗೆಟ್ ಅನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ನೀಡಿದೆ. ಆಂಡ್ರೆ ರಸೆಲ್ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಕೋಲ್ಕತ್ತಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಬಂದ ಕೆಕೆಆರ್ ಗೆ ಉತ್ತಮ ಆರಂಭ ಸಿಗಲಿಲ್ಲ. ಫಿಲ್ ಸಾಲ್ಟ್ ಜೊತೆಗೆ ಓಪನಿಂಗ್ ಮಾಡಲು ಬಂದ ಸುನಿಲ್ ನರೈನ್ (2) ಬೇಗನೆ ರನ್ ಔಟ್ ಆದರು. ಇದರ ಹಿಂದೆಯೇ ವೆಂಕಟೇಶ್ ಅಯ್ಯರ್ (7), ನಾಯಕ ಶ್ರೇಯಸ್ ಅಯ್ಯರ್ (0) ಮತ್ತು ನಿತೀಶ್ ರಾಣಾ (9) ವಿಕೆಟ್ ಕಳೆದುಕೊಂಡು ಮಧ್ಯಮ ಕ್ರಮಾಂಕ ಕುಸಿತ ಕಂಡಿತ್ತು.
ಪ್ರಮುಖ 4 ವಿಕೆಟ್ಗಳನ್ನು ಕಳೆದುಕೊಂಡು 51 ರನ್ಗಳಿಸಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆರಂಭಿಕ ಫಿಲ್ ಸಾಲ್ಟ್ ಹಾಗು ರಮಣದೀಪ್ ಸಿಂಗ್ ಆಸರೆಯಾದರು. ಆದರೇ ಹೈದಾರಬಾದ್ ನಾಯಕ ಪ್ಯಾಟ್ ಕಮಿನ್ಸ್, ರಮಣದೀಪ್ (35) ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಐದನೇ ವಿಕೆಟ್‌ಗೆ ಒಂದಾದ ಫಿಲ್ ಸಾಲ್ಟ್ ಹಾಗು ರಮಣದೀಪ್ ಸಿಂಗ್ ಜೋಡಿ 29 ಎಸೆತಗಳಲ್ಲಿ 54 ರನ್ ಗಳಿಸಿತ್ತು.
ತಮ್ಮ ಹೊಡಿ ಬಡಿ ಆಟಕ್ಕೆ ಹೆಸರು ವಾಸಿಯಾಗಿರುವ ಫಿಲ್ ಸಾಲ್ಟ್ ನಿರಾಳವಾಗಿ ಬ್ಯಾಟಿಂಗ್ ಮಾಡಿದರು. 40 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 54 ರನ್ ಬಾರಿಸಿ ಫ್ರಾಂಚೈಸಿ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡರು. ಮಯಾಂಕ್ ಮಾರ್ಕಾಂಡೆ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು.