ಕರ್ನಾಟಕ

karnataka

ETV Bharat / sports

ತವರಿನಲ್ಲಿ ಹೈದರಾಬಾದ್​ಗೆ ಗೆಲುವಿನ ನಗೆ: ಅರ್ಧಶತಕ ಸಿಡಿಸಿ ಸಂಭ್ರಮಿಸಿದ ಮಾರ್ಕ್ರಾಮ್ - IPL 2024

ಚೆನ್ನೈ ಸೂಪರ್​ ಕಿಂಗ್ಸ್​ ಎದುರು ಸನ್ ರೈಸರ್ಸ್ ಹೈದರಾಬಾದ್ 6 ವಿಕೆಟ್​ಗಳ ​ಭರ್ಜರಿ ಗೆಲುವು ಸಾಧಿಸಿದೆ.

ಹೈದರಾಬಾದ್​ಗೆ ಗೆಲುವಿನ ನಗೆ
ಹೈದರಾಬಾದ್​ಗೆ ಗೆಲುವಿನ ನಗೆ

By ETV Bharat Karnataka Team

Published : Apr 6, 2024, 6:03 AM IST

ಹೈದರಾಬಾದ್​ :ತವರಿನ ಅಂಗಳದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡವನ್ನು​ ಮಣಿಸಿ ಸನ್ ರೈಸರ್ಸ್ ಹೈದರಾಬಾದ್ ಗೆಲುವಿನ ನಗೆ ಬೀರಿದೆ. ಸಿಎಸ್​ಕೆ ನೀಡಿದ 166 ರನ್​ಗಳ ಗುರಿಯನ್ನು ಕೇವಲ 18.1 ಓವರ್​ಗಳಲ್ಲಿ ಬೆನ್ನಟ್ಟಿದ ಹೈದರಾಬಾದ್​ ಅಮೋಘ ಜಯ ದಾಖಲಿಸಿದೆ. ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶನ ತೋರಿದ ಹೈದರಾಬಾದ್​​ ಬ್ಯಾಟರ್ಸ್​ ತಂಡದ ಗೆಲುವಿಗೆ ಶ್ರಮಿಸಿದರು. ಐಡೆನ್ ಮಾರ್ಕ್ರಾಮ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.

ಉತ್ತಮ ಆರಂಭ ಪಡೆದ ಹೈದರಾಬಾದ್​ 2.4 ಓವರ್​ಗಳಲ್ಲೇ ಮೊದಲ ವಿಕೆಟ್​ಗೆ 46 ರನ್​ಗಳನ್ನು ಕಲೆಹಾಕಿತು. ಆರಂಭಿಕರಾದ ಟ್ರಾವಿಸ್​ ಹೆಡ್​ ಅವರೊಂದಿಗೆ ಅಭಿಷೇಕ್ ಶರ್ಮಾ ಬೊಂಬಾಟ್​ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಕೇವಲ 12 ಎಸೆತಗಳಲ್ಲಿ 4 ಸಿಕ್ಸರ್​ ಮತ್ತು 3 ಬೌಂಡರಿಗಳೊಂದಿಗೆ 37 ರನ್​ಗಳಿಗೆ ಔಟ್​ ಆದರು. ನಂತರ ಬಂದ ​ಐಡೆನ್ ಮಾರ್ಕ್ರಾಮ್ ಅವರು ಟ್ರಾವಿಸ್​ ಹೆಡ್ ಜೊತೆ ಗೂಡಿ ತಂಡದ ಮೊತ್ತ ನೂರರ ಗಡಿ ದಾಟುವಂತೆ ನೋಡಿ ಕೊಂಡರು.

ಸಿಎಸ್​ಕೆ ಬೌಲರ್ಸ್​ ಮೇಲೆ ಸವಾರಿ ಮಾಡಿ ಹೆಡ್​ ಮತ್ತು ಮಾರ್ಕ್ರಾಮ್ ಜೋಡಿ ಸಿಕ್ಸರ್ ಮತ್ತು​ ಬೌಂಡರಿಗಳನ್ನು ಸಿಡಿಸಿದರು. ತಂಡವನ್ನು ಗೆಲುವಿನ ದಡದತ್ತ ಕರೆದೊಯ್ಯತ್ತಿದ್ದ ಈ ಜೋಡಿಯನ್ನು ಬೇರ್ಪಡಿಸಲು ಬಂದ ಮಹೇಶ್ ತೀಕ್ಷ್ಣ 31 ರನ್​ ಗಳಿಸಿದ ಹೆಡ್​ ವಿಕೆಟ್​ ಪಡೆದುಕೊಂಡರು. ಇತ್ತ ​ಅದ್ಭುತ ಇನ್ನಿಂಗ್ಸ್​ ಆಡಿ ಹೈದರಾಬಾದ್​ ತಂಡಕ್ಕೆ ಆಸರೆಯಾದ ಮಾರ್ಕ್ರಾಮ್ 36 ಎಸೆತಗಳಲ್ಲಿ 51 ರನ್​ಗಳಿಸಿ ಅರ್ಧಶತಕ ದಾಖಲಿಸಿ ವಿಕೆಟ್​ ನೀಡಿದರು.

ಮಾರ್ಕ್ರಾಮ್​ ಅವರ ಹಿಂದಯೇ 18 ರನ್​ಗಳ ಕೊಡುಗೆ ನೀಡಿದ ಆಲ್​ ರೌಂಡರ್​ ಶಹಬಾಜ್ ಅಹಮದ್ ಔಟ್​ ಆದರು. ಕೊನೆಯಲ್ಲಿ ಹೆನ್ರಿಕ್ ಕ್ಲಾಸೆನ್ ಮತ್ತು ನಿತೀಶ್ ರೆಡ್ಡಿ ತಾಳ್ಮೆಯಿಂದ ಬ್ಯಾಟ್​ ಬೀಸಿದರು. ಈ ಮೂಲಕ ವಿಕೆಟ್​ ಕಾಪಾಡಿಕೊಂಡು 10 ಎಸೆತಗಳು ಬಾಕಿ ಇರುವಂತೆಯೇ ಹೈದರಾಬಾದ್​ಗೆ ಗೆಲುವು ತಂದುಕೊಟ್ಟರು.

ಚೆನ್ನೈಗಾಗಿ ದೀಪಕ್​ ಚಹಾರ್​ ಮತ್ತು ಮಹೇಶ್​ ಚುರುಕಿನ ಒಂದು ವಿಕೆಟ್​ ಪಡೆದರೆ, ತನಗೆ ಸಿಕ್ಕ ಈ ಋತುವಿನ ಮೊದಲ ಪಂದ್ಯದಲ್ಲಿ ಮೊಯಿನ್ ಅಲಿ 2 ವಿಕೆಟ್​ ಕಬಳಿಸಿ ಮಿಂಚಿದರು.

ಇದನ್ನೂ ಓದಿ :IPL: ಹೈದರಾಬಾದ್‌ ಬಿಗು ಬೌಲಿಂಗ್ ದಾಳಿಗೆ ಮಂಕಾದ ಚೆನ್ನೈ; 166 ರನ್ ಟಾರ್ಗೆಟ್​ - IPL 2024

ABOUT THE AUTHOR

...view details