ETV Bharat / state

ಚಿಕ್ಕಬಳ್ಳಾಪುರ: ಜೆಡಿಎಸ್ ಮುಖಂಡನ ಹತ್ಯೆ ಪ್ರಕರಣ, 48 ಗಂಟೆಗಳಲ್ಲೇ ಇಬ್ಬರು ಆರೋಪಿಗಳು ಸೆರೆ - TWO MURDER CASE ACCUSED ARRESTED

ಜೆಡಿಎಸ್ ಮುಖಂಡ ಎನ್. ವೆಂಕಟೇಶಪ್ಪ ಬರ್ಬರ ಹತ್ಯೆ ಪ್ರಕರಣವನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಕೇವಲ 48 ಗಂಟೆಗಳಲ್ಲೇ ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು (ETV Bharat)
author img

By ETV Bharat Karnataka Team

Published : Jan 6, 2025, 6:24 PM IST

ಚಿಕ್ಕಬಳ್ಳಾಪುರ: ಜೆಡಿಎಸ್ ಮುಖಂಡ ಎನ್. ವೆಂಕಟೇಶಪ್ಪ ಬರ್ಬರ ಹತ್ಯೆ ಪ್ರಕರಣದ ಆರೋಪಿಗಳನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು 48 ಗಂಟೆಗಳಲ್ಲೇ ಬಂಧಿಸಿದ್ದಾರೆ. ಧನರಾಜ್ ಹಾಗೂ ಸತೀಶ್ ಬಂಧಿತ ಆರೋಪಿಗಳು.

ಚಿಕ್ಕಬಳ್ಳಾಪುರ ತಾಲೂಕಿನ ತಮ್ಮನಾಯಕನಹಳ್ಳಿ ಗ್ರಾಮದ ಗೇಟು ಬಳಿ ಜ.3ರ ರಾತ್ರಿ 9:15 ಗಂಟೆಗೆ ಜೆಡಿಎಸ್ ಮುಖಂಡ ಎನ್. ವೆಂಕಟೇಶಪ್ಪ(54) ತಮ್ಮ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಮಾರಕಾಸ್ತ್ರಗಳಿಂದ ಮುಖ, ಹೊಟ್ಟೆ ಮತ್ತು ಭುಜದ ಭಾಗಕ್ಕೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಘಟನೆ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 02/2025 ಕಲಂ 103(1) ಬಿ.ಎನ್.ಎಸ್-2023 ಅಡಿ ದೂರು ದಾಖಲಾಗಿತ್ತು.

ಎಸ್​ಪಿ ಕುಶಾಲ್ ಚೌಕ್ಸೆ ಪ್ರತಿಕ್ರಿಯೆ (ETV Bharat)

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಕಾಸಿಮ್ ಮತ್ತು ಪೊಲೀಸ್ ಉಪಾಧೀಕ್ಷಕ ಎಸ್. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ರಚಿಸಲಾದ ವಿಶೇಷ ತನಿಖಾ ತಂಡ, ಆರೋಪಿಗಳಾದ ಧನರಾಜ್ ಮತ್ತು ಸತೀಶ್​ ಅವರನ್ನು ಕೇವಲ 48 ಗಂಟೆಗಳಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ತನಿಖೆಯ ಪ್ರಕಾರ, ಐದು ತಿಂಗಳ ಹಿಂದೆ ಗಲಾಟೆಯೊಂದರ ಸಂಬಂಧ ವೆಂಕಟೇಶಪ್ಪ ಅವರು ಧನರಾಜ್‌ಗೆ ಬುದ್ಧಿವಾದ ಹೇಳಿದ್ದರು. ಇದರಿಂದ ಕೋಪಗೊಂಡಿದ್ದ ಧನರಾಜ್ ವೆಂಕಟೇಶಪ್ಪ ಮೇಲೆ ದ್ವೇಷ ಬೆಳೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಧನರಾಜ್ ಮತ್ತು ಸತೀಶ್ ಸೇರಿಕೊಂಡು ಪೂರ್ವ ನಿಯೋಜಿತವಾಗಿ ಕೊಲೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ವೃತ್ತದ ಸಿಪಿಐ ಮಂಜುನಾಥ್ ತನಿಖಾ ತಂಡದ ನೇತೃತ್ವದ ವಹಿಸಿದ್ದರು. ತಂಡದಲ್ಲಿ ಪಿಎಸ್ಐ ಶರಣಪ್ಪ, ಹರೀಶ್ ಕುಮಾರ್, ರವಿಕುಮಾರ್, ವಿಜಯ್ ಕುಮಾರ್, ವೆಂಕಟೇಶ್ ಮೂರ್ತಿ ಸೇರಿದಂತೆ ತಾಂತ್ರಿಕ ಸಿಬ್ಬಂದಿಗಳಾದ ರವೀಂದ್ರ ಕುಮಾರ್ ಮತ್ತು ಮುನಿಕೃಷ್ಣ ಇದ್ದರು.

ಇದನ್ನೂ ಓದಿ: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್​: ಪತ್ನಿ, ಸಂಬಂಧಿಕರ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.