IND vs IRE: ಜನವರಿ 10 ರಿಂದ ಆರಂಭವಾಗಲಿರುವ ಐರ್ಲೆಂಡ್ ಜೊತೆಗಿನ ಏಕದಿನ ಸರಣಿಗಾಗಿ 15 ಆಟಗಾರ್ತಿಯರನ್ನು ಒಳಗೊಂಡ ಭಾರತ ಮಹಿಳಾ ತಂಡವನ್ನು ಬಿಸಿಸಿಐ ಸೋಮವಾರ (ಇಂದು) ಪ್ರಕಟಿಸಿದೆ.
ಸ್ಮೃತಿ ಮಂಧಾನ ನಾಯಕತ್ವದಲ್ಲಿ ಈ ಸರಣಿಗೆ ತಂಡವನ್ನು ಆಯ್ಕೆ ಮಾಡಲಾಗಿದ್ದು. ದೀಪ್ತಿ ಶರ್ಮಾ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಭಾರತ ಮತ್ತು ಐರ್ಲೆಂಡ್ ನಡುವಿನ ಈ ಸರಣಿ ಜನವರಿ 10 ರಿಂದ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಬಳಿಕ ಜ.12 ಎರಡು ಮತ್ತು ಜ.15 ರಂದು ಅಂತಿಮ ಪಂದ್ಯ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಎಲ್ಲಾ ಪಂದ್ಯಗಳು ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯಲಿವೆ. ಟೀಂ ಇಂಡಿಯಾದ ನಿಯಮಿತ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಟಾರ್ ಬೌಲರ್ ರೇಣುಕಾ ಸಿಂಗ್ ಠಾಕೂರ್ಗೆ ವಿಶ್ರಾಂತಿ ನೀಡಲಾಗಿದ್ದು, ಈ ಸರಣಿಯಿಂದ ಹೊರಗುಳಿದಿದ್ದಾರೆ.
ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದ ಏಕದಿನ ಮತ್ತು ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿತ್ತು. ಹರ್ಮನ್‌ಪ್ರೀತ್ ಮತ್ತು ರೇಣುಕಾ ಇಬ್ಬರೂ ಉತ್ತಮ ಪ್ರದರ್ಶನ ನೀಡಿದ್ದರು. ಇದೀಗ ಇವರ ಸ್ಥಾನಕ್ಕೆ ಸಯಾಲಿ ಸಯಾಲಿ ಸತ್ಘರೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿದೆ. ರೂಪದಲ್ಲಿ ಟೀಂ ಇಂಡಿಯಾ ಹೊಸ ಮುಖವನ್ನು ಸೇರಿಸಿದೆ. ಮುಂಬೈನ ಮೂಲದ ಈ ಆಲ್ ರೌಂಡರ್ ಕಳೆದ ವರ್ಷ ಭಾರತ ಎ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ಸಯಾಲಿ ಜೊತೆಗೆ ರಾಘವಿ ಬಿಷ್ತ್ ಕೂಡ ಆಯ್ಕೆಯಾಗಿದ್ದು, ಈ ಸರಣಿ ಮೂಲಕ ಈ ಇಬ್ಬರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ.
SMRITI MANDHANA WILL LEAD INDIA IN THE ODI SERIES AGAINST IRELAND...!!!! 🇮🇳
— Johns. (@CricCrazyJohns) January 6, 2025
- Harmanpreet Kaur rested. pic.twitter.com/R5RlizG7RS
ತಂಡಗಳು-ಭಾರತ: ಸ್ಮೃತಿ ಮಂಧಾನ (ನಾಯಕಿ), ದೀಪ್ತಿ ಶರ್ಮಾ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ಉಮಾ ಛೆಟ್ರಿ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ತೇಜಲ್ ಹಸಾಬ್ನಿಸ್, ರಾಘ್ವಿ ಬಿಸ್ತ್, ಪ್ರಿಯಾ ಮಿಶ್ರಾ, ತನುಜಾ, ತನುಜಾ ಸಾಧು, ಸೈಮಾ ಠಾಕೂರ್, ಸಯಾಲಿ ಸತ್ಘರೆ
3️⃣ Royal Challengers in the 🇮🇳 Women’s squad with Smriti Mandhana 🫡 at the helm for the 🇮🇪 ODIs ⚔
— Royal Challengers Bengaluru (@RCBTweets) January 6, 2025
This team’s ready to serve some major slay 🆚 Ireland! 💥#PlayBold #ನಮ್ಮRCB #INDvIRE pic.twitter.com/BoOv0Tbtgf
ಐರ್ಲೆಂಡ್: ಗ್ಯಾಬಿ ಲೆವಿಸ್ (ನಾಯಕಿ), ಅವಾ ಕ್ಯಾನಿಂಗ್, ಕ್ರಿಸ್ಟಿನಾ ಕೌಲ್ಟರ್-ರೈಲಿ, ಅಲಾನಾ ಡಾಲ್ಜೆಲ್, ಜಾರ್ಜಿನಾ ಡೆಂಪ್ಸೆ, ಸಾರಾ ಫೋರ್ಬ್ಸ್, ಜೊವಾನ್ನಾ ಲಾಘರಾನ್, ನೈಮಿ ಮ್ಯಾಗೈರ್, ಲೀ ಪಾಲ್, ಓರ್ಲಾ ಪ್ರೆಂಡರ್‌ಗಾಸ್ಟ್, ಉನಾ ರೇಮಂಡ್, ಫ್ರೇಯಾ ಸರ್ಜೆಟ್, ರೆಬೆಕಾ ಸ್ಟಾಕ್‌ಲ್
ಪಂದ್ಯಗಳ ವಿವರ
- ಮೊದಲ ODI: ಜನವರಿ 10, 11 am
- ಎರಡನೇ ODI: ಜನವರಿ 12, 11 am
- ಮೂರನೇ ODI: ಜನವರಿ 15, 11 am
ಇದನ್ನೂ ಓದಿ: ಏಕದಿನ, ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್