ನವದೆಹಲಿ:ಭಾರತವು ಇಂಗ್ಲೆಂಡ್‌ನೊಂದಿಗಿನ ಟೆಸ್ಟ್ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದೆ. ಬಹುತೇಕ ಯುವಕರನ್ನೇ ಒಳಗೊಂಡ ಟೀಂ ಇಂಡಿಯಾ ಬಲಿಷ್ಠ ಆಂಗ್ಲರ ತಂಡವನ್ನು ಸುಲಭವಾಗಿ ಮಣಿಸಿರುವುದು ಗಮನಾರ್ಹ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ರಹಾನೆ ಮತ್ತು ಕೆಎಲ್ ರಾಹುಲ್ (ಮೊದಲ ಟೆಸ್ಟ್ ಹೊರತುಪಡಿಸಿ) ಅನುಪಸ್ಥಿತಿಯ ಹೊರತಾಗಿಯೂ ಭಾರತ ಗೆದ್ದಿದೆ.
ಸರ್ಫರಾಜ್ ಖಾನ್, ರಜತ್ ಪಾಟಿದಾರ್, ಆಕಾಶ್ ದೀಪ್ ಮತ್ತು ಧ್ರುವ್ ಜುರೆಲ್ ಈ ಸರಣಿ ಮೂಲಕ ಟೆಸ್ಟ್ಗೆ ಪಾದಾರ್ಪಣೆ ಮಾಡಿದ ಯುವ ಪ್ರತಿಭೆಗಳು. ಈ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಪ್ರಮುಖ ಪ್ರತಿಕ್ರಿಯೆ ನೀಡಿದ್ದಾರೆ. ಈ ಗೆಲುವು ಕೆಲವರಿಗೆ ಎಚ್ಚರಿಕೆಯಾಗಬೇಕು ಎಂದು ಹೇಳಿದ್ದಾರೆ. ಅವರಿಲ್ಲದೇ ಭಾರತ ಗೆಲ್ಲುತ್ತಿರಲಿಲ್ಲ ಎಂದು ಭಾವಿಸುವವರಿಗೆ ಇದೊಂದು ಬಲವಾದ ಸಂದೇಶವಾಗಿದೆ ಎಂದಿದ್ದಾರೆ.
“ಮೂರು ವರ್ಷಗಳ ಹಿಂದೆ, ಕೆಲವು ಹಿರಿಯ ಕ್ರಿಕೆಟಿಗರು ಆಸೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡರು. ಆದರೆ, ಭಾರತ ಭರ್ಜರಿ ಜಯ ಸಾಧಿಸಿತು. ಕೇವಲ 36 ರನ್‌ಗಳಿಗೆ (ಅಡಿಲೇಡ್) ಔಟಾದ ನಂತರ ನಾವು ಮೆಲ್ಬೋರ್ನ್ ಟೆಸ್ಟ್ ಗೆದ್ದು ಸಿಡ್ನಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಸಿಡ್ನಿಯಲ್ಲಿಯೂ ರಿಷಬ್ ಪಂತ್ ಇನ್ನೂ ಅರ್ಧ ಗಂಟೆ ಕ್ರೀಸ್‌ನಲ್ಲಿ ನಿಂತಿದ್ದರೆ ಭಾರತ ಗೆಲ್ಲುತ್ತಿತ್ತು. ಆಗ ಯುವ ಕ್ರಿಕೆಟಿಗರು ತೋರಿದ ಕಾಟ.