ಕರ್ನಾಟಕ

karnataka

ETV Bharat / sports

ಪಾಕಿಸ್ತಾನ ಕ್ರಿಕೆಟ್‌ನಲ್ಲೀಗ ಪ್ರತಿಭಾವಂತ ಆಟಗಾರರ ಕೊರತೆಯಿದೆ: ಸೌರವ್ ಗಂಗೂಲಿ ಹೀಗೆ ಹೇಳಿದ್ದೇಕೆ? - SOURAV GANGULY - SOURAV GANGULY

Sourav Ganguly on Pakistan Cricket team ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತು ಅದರ ಆಟಗಾರರ ಬಗ್ಗೆ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಪಾಕ್​ ತಂಡದ ಅವನತಿಗೆ ಕಾರಣವನ್ನೂ ಅವರು ವಿವರಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ನಲ್ಲೀಗ ಪ್ರತಿಭಾವಂತ ಆಟಗಾರರ ಕೊರತೆಯಿದೆ: ಸೌರವ್ ಗಂಗೂಲಿ ಹೀಗೆ ಹೇಳಿದ್ದೇಕೆ?
ಪಾಕಿಸ್ತಾನ ಕ್ರಿಕೆಟ್‌ನಲ್ಲೀಗ ಪ್ರತಿಭಾವಂತ ಆಟಗಾರರ ಕೊರತೆಯಿದೆ: ಸೌರವ್ ಗಂಗೂಲಿ ಹೀಗೆ ಹೇಳಿದ್ದೇಕೆ? (IANS PHOTOS)

By ETV Bharat Sports Team

Published : Sep 11, 2024, 3:24 PM IST

ನವದೆಹಲಿ:ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಅನುಭವಿ ಎಡಗೈ ಬ್ಯಾಟ್ಸ್ ಮನ್ ಸೌರವ್ ಗಂಗೂಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಈಗಿನ ಆಟಗಾರರು ಮತ್ತು ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ. ಕೆಲ ದಿನಗಳಿಂದ ಪಾಕಿಸ್ತಾನ ಕ್ರಿಕೆಟ್‌ನ ಸ್ಥಿತಿ ಹದಗೆಟ್ಟಿದೆ. ಅನೇಕ ದೊಡ್ಡ ಆಟಗಾರರನ್ನು ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಆದರೆ ಅವರಿಂದ ತಂಡವನ್ನು ಗೆಲ್ಲಿಸುವಂತ ಯಾವುದೇ ಆಟ ಕಂಡು ಬರಲಿಲ್ಲ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್​ ವಿಶ್ವಕಪ್ 2023 ರಿಂದ ಪಾಕಿಸ್ತಾನದ ಕ್ರಿಕೆಟ್‌ನ ಕೆಟ್ಟ ಪ್ರವಾಸ ಮುಂದುವರಿದಿದೆ ಎಂದು ದಾದಾ ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ಅವರು ಪಾಕ್ ಆಟಗಾರರಿಗೆ ದೊಡ್ಡ ಸಂದೇಶವನ್ನೇ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಕ್ಕೆ ಮಾತನಾಡಿದ ಸೌರವ್ ಗಂಗೂಲಿ, 'ನಾನು ಪಾಕಿಸ್ತಾನದಲ್ಲಿ ಪ್ರತಿಭೆ ಮತ್ತು ಭರವಸೆಯ ಆಟಗಾರರ ಕೊರತೆಯನ್ನು ನೋಡುತ್ತಿದ್ದೇನೆ. ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ನಾವು ಜಾವೇದ್ ಮಿಯಾಂದಾದ್, ಸಯೀದ್ ಅನ್ವರ್, ವಾಸಿಂ ಅಕ್ರಮ್, ವಕಾರ್ ಯೂನಿಸ್ ಮತ್ತು ಮೊಹಮ್ಮದ್ ಯೂಸುಫ್ ಮತ್ತು ಯೂನಿಸ್ ಖಾನ್ ಅವರಂತಹ ಆಟಗಾರರನ್ನು ನೋಡುತ್ತಿದ್ದ ಆ ದಿನಗಳು ಈಗ ನನಗೆ ನೆನಪಿಗೆ ಬರುತ್ತಿದೆ. ಈ ಆಟಗಾರರು ತಂಡದ ಬೆನ್ನೆಲುಬಾಗಿದ್ದರು. ಪಂದ್ಯವನ್ನು ಗೆಲ್ಲಲು, ಪ್ರತಿ ಪೀಳಿಗೆಯು ಅತ್ಯುತ್ತಮ ಪ್ರದರ್ಶನ ನೀಡಬೇಕು. ಪಾಕಿಸ್ತಾನದಲ್ಲಿ ಉತ್ತಮ ಮತ್ತು ಉತ್ತಮ ಆಟಗಾರರು ಸೃಷ್ಟಿಯಾಗಬೇಕಿದೆ. 2024 ರ ಟಿ 20 ವಿಶ್ವಕಪ್​ನಲ್ಲಿ ಪಾಕಿಸ್ತಾನವು ಬಾಂಗ್ಲಾದೇಶ ವಿರುದ್ಧ ಸೋತಿರುವುದನ್ನು ನಾವು ಕಂಡಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಪಾಕಿಸ್ತಾನ ತಂಡ ಮತ್ತು ಅವರ ವೇಗದ ಬೌಲರ್‌ಗಳಿಂದಾಗಿ ಎದುರಾಳಿಗಳು ಮೈದಾನದಲ್ಲಿ ತೊಂದರೆ ಅನುಭವಿಸುತ್ತಿದ್ದ ಸಮಯವಿತ್ತು. ಈಗ ಪಾಕಿಸ್ತಾನ ತಂಡವು ತನ್ನ ಗುಂಪುಗಾರಿಕೆ ಮತ್ತು ಅದರ ನಿರಾಶಾದಾಯಕ ಆಟಕ್ಕೆ ಹೆಸರುವಾಸಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ಗಂಗೂಲಿ ಎಚ್ಚರಿಕೆ ನೀಡಿದ್ದು, ಉತ್ತಮ ಆಟಗಾರರನ್ನು ರೂಪಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದಂತಿದೆ.

ಇದನ್ನು ಓದಿ:ಜಾವೆಲಿನ್​ನಲ್ಲಿ ಬೆಳ್ಳಿ ಗೆದ್ದಿದ್ದ ಬೆಂಗಳೂರು ಐಟಿ ಇನ್ಸ್​ಪೆಕ್ಟರ್​ಗೆ ಒಲಿದ ಚಿನ್ನ;​ ಪ್ಯಾರಾಲಿಂಪಿಕ್​​ನಲ್ಲಿ ಭಾರತಕ್ಕೆ ಮತ್ತೊಂದು ಬಂಗಾರ - Paris Paralympics

ABOUT THE AUTHOR

...view details