ಪ್ಯಾರಿಸ್ (ಫ್ರಾನ್ಸ್):ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ 50 ಮೀಟರ್ ಏರ್ ರೈಫಲ್ 3 ಪೊಸಿಶನ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡರು. ಇದರೊಂದಿಗೆ ಭಾರತ ಶೂಟಿಂಗ್ ಸ್ಪರ್ಧೆಯಲ್ಲಿ ಮೂರನೇ ಪದಕ ಜಯಿಸಿದೆ. ಅವರು 451.4 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಪ್ಯಾರಿಸ್ ಒಲಿಂಪಿಕ್ಸ್‌ನ ಆರನೇ ದಿನವಾದ ಇಂದು ಭಾರತದ ಏಕೈಕ ಪದಕದ ಭರವಸೆ ಅವರ ಮೇಲಿತ್ತು. ಅದರಂತೆ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ವಪ್ನೀಲ್ ತನ್ನ ಮೊದಲ ಶಾಟ್‌ನಲ್ಲಿ 9.6 ಅಂಕಗಳನ್ನು ಕಲೆಹಾಕಿಉತ್ತಮ ಆರಂಭವನ್ನು ಪಡೆದರು. ನಂತರ ಮೊಣಕಾಲಿನ ಭಂಗಿಯ ಹಂತದ ಮೊದಲ ಸರಣಿಯ ಸುತ್ತುಗಳಲ್ಲಿ 10 ಕ್ಕೂ ಹೆಚ್ಚು ಹೊಡೆತಗಳನ್ನು ಹೊಡೆದರು. ಎರಡನೇ ಸರಣಿಯನ್ನು 10.1 ಪಾಯಿಂಟರ್‌ನೊಂದಿಗೆ ಪ್ರಾರಂಭಿಸಿದರು, ಆದರೆ ಇದೇ ವೇಗವನ್ನು ಕಾಯ್ದುಕೊಳ್ಳಲು ವಿಫಲರಾದ ಅವರು ಮುಂದಿನ ಹಂತದಲ್ಲಿ 9.9-ಪಾಯಿಂಟ್ ಅಂಕ ಗಳಿಸಿದರು. ಆದಾಗ್ಯೂ, ಮಂಡಿಯೂರಿ ಹಂತದ ಮೂರನೇ ಮತ್ತು ಅಂತಿಮ ಸರಣಿಯಲ್ಲಿ ಅವರು ಕಮ್ ಬ್ಯಾಕ್ ಮಾಡಿದರು. ಈ ಸುತ್ತಿನ ಬಳಿಕ 153.3 ಅಂಕಗಳೊಂದಿಗೆ ಆರನೇ ಸ್ಥಾನಕ್ಕೇರಿ ಅರ್ಹತಾ ಹಂತದಲ್ಲೂ ಸ್ಥಾನ ಪಡೆದರು.
ಆಟ ಮುಂದುವರೆದಂತೆ, ಅವರ ಹೊಡೆತಗಳ ನಿಖರತೆ ಸುಧಾರಿಸಿತು. ಮುಂದಿನ 15 ಪ್ರಯತ್ನಗಳಲ್ಲಿ ಸತತವಾಗಿ 10+ ಪಾಯಿಂಟ್ ಶಾಟ್‌ಗಳನ್ನು ಗಳಿಸಿ 310.1 ಅಂಕಗಳೊಂದಿಗೆ ಪ್ರೋನ್ ಹಂತಕ್ಕೆ ಎಂಟ್ರಿ ಪಡೆದರು. ಇದರಲ್ಲಿ ಮೊದಲ ಸುತ್ತಿನಲ್ಲಿ 52.7 ಅಂಕಗಳನ್ನು ಗಳಿಸಿ, ಎರಡನೇಯ ಸುತ್ತಿನಲ್ಲಿ 52.2 ಮತ್ತು ಮೂರನೇ ಸುತ್ತಿನಲ್ಲಿ 51.9 ಅಂಕಗಳನ್ನು ಗಳಿಸಿದರು, ಇದರಲ್ಲಿ ಅವರ ಅತ್ಯುತ್ತಮ ಹೊಡೆತ 10.8 ಆಗಿತ್ತು.