ಜೈಪುರ (ರಾಜಸ್ಥಾನ) :ಬುಧವಾರ ಗುಜರಾತ್ ಟೈಟನ್ಸ್ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ.
ರಾಜಸ್ಥಾನ ರಾಯಲ್ಸ್ ಪರ ಈವರೆಗೆ ಅತಿ ಹೆಚ್ಚು ಫಿಫ್ಟಿ ಪ್ಲಸ್ ಸ್ಕೋರ್ ದಾಖಲಿಸಿರುವ ಆಟಗಾರ ಎಂಬ ಹೆಗ್ಗಳಿಕೆ ಸಂಜು ಸಾಮ್ಸನ್ ಪಾತ್ರರಾಗಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ತಮ್ಮ ಉತ್ತಮ ಆಟ ಮುಂದುವರೆಸಿರುವ ಸಂಜು ಸಾಮ್ಸನ್, ಆಂಗ್ಲ ಬ್ಯಾಟರ್ ಜೋಸ್ ಬಟ್ಲರ್ ಅವರನ್ನು ಹಿಂದಿಕ್ಕಿದ್ದಾರೆ. ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಎದುರು ಸಂಜು ಕೇವಲ 38 ಎಸೆತಗಳಲ್ಲಿ ಏಳು ಬೌಂಡರಿ ಮತ್ತು 2 ಭರ್ಜರಿ ಹೊಡೆದು 68* ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಒಂದು ಇನ್ನಿಂಗ್ಸ್ನಿಂದ ಸಂಜು ಹೊಸ ಮೈಲಿಗಲ್ಲು ತಲುಪಲು ಸಾಧ್ಯವಾಯಿತು.
ಇದುವರೆಗೆ ರಾಜಸ್ಥಾನ ಪರ 131 ಪಂದ್ಯಗಳನ್ನು ಆಡಿರುವ ಸಂಜು 31.45 ಸರಾಸರಿಯಲ್ಲಿ ಮತ್ತು 139.86 ಸ್ಟ್ರೈಕ್ ರೇಟ್‌ನಲ್ಲಿ 3 ಶತಕ ಮತ್ತು 23 ಅರ್ಧಶತಕಗಳೊಂದಿಗೆ 3,649 ರನ್ ಗಳಿಸಿದ್ದಾರೆ. ಈ ಅಂಕಿ - ಅಂಶಗಳನ್ನು ಪರಿಗಣಿಸಿದಾಗ ಫಿಫ್ಟಿ ಪ್ಲಸ್ ಸ್ಕೋರ್ ದಾಖಲಿಸಿರುವ ಪಟ್ಟಿಯಲ್ಲಿ ಸಂಜು ಮೊದಲಿಗರಾಗಿದ್ದಾರೆ. ಮತ್ತೊಂದೆಡೆ, ಬಟ್ಲರ್ ಆರ್ಆರ್ ಗಾಗಿ 25 ಫಿಫ್ಟಿ ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಆರು ಶತಕಗಳು ಮತ್ತು 18 ಅರ್ಧಶತಕಗಳು ಸೇರಿವೆ. ಹಾಗಾಗಿ ನಂತರ ಎರಡನೇ ಸ್ಥಾನದಲ್ಲಿ ಬಟ್ಲರ್ ಮುಂದುವರೆಲಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಸಂಜು ಐದು ಪಂದ್ಯಗಳಿಂದ 246 ರನ್ ಗಳಿಸಿದ್ದು, ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಬ್ಯಾಟರ್ ವಿರಾಟ್ ಕೊಹ್ಲಿ ಐದು ಪಂದ್ಯಗಳಲ್ಲಿ 105.33 ಸರಾಸರಿಯಲ್ಲಿ 316 ರನ್ ಕಲೆಹಾಕಿದ್ದು, ಅಗ್ರಸ್ಥಾನದಲ್ಲಿದ್ದಾರೆ. ಒಂದು ಶತಕ ಮತ್ತು ಮೂರು ಅರ್ಧಶತಕಗಳು ಕೊಹ್ಲಿ ಹೆಸರಿನಲ್ಲಿವೆ. ಅತ್ಯುತ್ತಮ ಸ್ಕೋರ್ ಔಟಗಾದೇ 113*.
ಇದನ್ನೂ ಓದಿ :'ಬ್ಯಾಟಿಂಗ್, ಫೀಲ್ಡಿಂಗ್ ಎರಡರಲ್ಲೂ ಅದ್ಭುತ': ನಿತೀಶ್ ರೆಡ್ಡಿ ಆಟಕ್ಕೆ ಪ್ಯಾಟ್ ಕಮಿನ್ಸ್ ಶ್ಲಾಘನೆ - Nitish Reddy