ಕರ್ನಾಟಕ

karnataka

ETV Bharat / sports

14 ತಿಂಗಳುಗಳ ಬಳಿಕ ವೃತ್ತಿಪರ ಕ್ರಿಕೆಟ್‌ಗೆ ಮರಳಲಿರುವ ರಿಷಭ್ ಪಂತ್; ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಘೋಷಣೆ

ರಿಷಭ್ ಪಂತ್ ಅವರನ್ನು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ​ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಡಿಸೆಂಬರ್ 2022 ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಪಂತ್, 14 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು. ಇದೀಗ ಮತ್ತೆ ಕಮ್​ ಬ್ಯಾಕ್​ ಮಾಡಿದ್ದಾರೆ. ಅವರನ್ನು ತಂಡ ಸ್ವಾಗತ ಮಾಡಿದೆ.

IPL 2024
IPL 2024

By ETV Bharat Karnataka Team

Published : Mar 19, 2024, 11:04 PM IST

ನವದೆಹಲಿ/ಬೆಂಗಳೂರು:ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ರಿಷಭ್​​ ಪಂತ್ ಆಯ್ಕೆಯಾಗಿದ್ದಾರೆ. ವಿಕೆಟ್‌ ಕೀಪರ್ ಕಂ ಬ್ಯಾಟರ್ ಆಗಿರುವ ಪಂತ್, 14 ತಿಂಗಳುಗಳ ಬಳಿಕ ವೃತ್ತಿಪರ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ವೈಜಾಗ್‌ನಲ್ಲಿ ಪೂರ್ವಸಿದ್ಧತಾ ಶಿಬಿರದಲ್ಲಿ ಅವರು ಭಾಗಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಡೆಲ್ಲಿ‌ ಕ್ಯಾಪಿಟಲ್ಸ್ ಅಧ್ಯಕ್ಷ ಮತ್ತು ಸಹ-ಮಾಲೀಕ ಪಾರ್ಥ್ ಜಿಂದಾಲ್, “ರಿಷಭ್ ಪಂತ್​ ಅವರನ್ನು ಮತ್ತೆ ನಮ್ಮ ಕ್ಯಾಪ್ಟನ್ ಆಗಿ ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ಅವರ ಕೆಚ್ಚೆದೆಯೇ ಅವರ ಬ್ರಾಂಡ್​ ಆಗಿದೆ. ಹೊಸ ಹುರುಪು, ಉತ್ಸಾಹ ಮತ್ತು ಚೈತನ್ಯದ ಮೂಲಕ ಅವರನ್ನು ತಂಡದಲ್ಲಿ ಕಾಣಲು ನಾನು ಇಷ್ಟಪಡುವೆ. ಡೆಲ್ಲಿ ತಂಡವನ್ನು ಮುನ್ನಡೆಸುವುದನ್ನು ನೋಡಲು ಉತ್ಸಾಹಭರಿತನಾಗಿದ್ದೇನೆ'' ಎಂದಿದ್ದಾರೆ.

ತಂಡದ ಸಹ-ಮಾಲೀಕ ಕಿರಣ್ ಕುಮಾರ್ ಗ್ರಾಂಧಿ ಮಾತನಾಡಿ “ರಿಷಭ್ ತಮ್ಮ ಜೀವನದ ಅತ್ಯಂತ ಸವಾಲಿನ ಹಂತಗಳಲ್ಲಿ ನಂಬಲಾಗದಷ್ಟು ಶ್ರಮಿಸಿದ್ದಾರೆ. ತಂಡದ ಸಹ ಆಟಗಾರರು ಅದರಿಂದ ಅಪಾರವಾದ ಸ್ಫೂರ್ತಿ ತೆಗೆದುಕೊಳ್ಳುತ್ತಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ನಾಯಕ ರಿಷಭ್ ಮತ್ತು ತಂಡಕ್ಕೆ ನನ್ನ ಶುಭ ಹಾರೈಕೆಗಳು'' ಎಂದರು.

ಮಾರ್ಚ್ 23 ರಂದು ಚಂಡೀಗಢದಲ್ಲಿ ನಡೆಯಲಿರುವ IPL 2024ರ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಸೆಣಸಲಿದೆ. ಕಳೆದ ವರ್ಷ ಆಸ್ಟ್ರೇಲಿಯಾದ ಅನುಭವಿ ಆಟಗಾರ ಡೇವಿಡ್ ವಾರ್ನರ್ ಕ್ಯಾಪಿಟಲ್ಸ್ ಅನ್ನು ಮುನ್ನಡೆಸಿದ್ದರು. ಕಾರು ಅಪಘಾತದ ಬಳಿಕ ಅವರು ಮತ್ತೆ ಮೈದಾನಕ್ಕೆ ಇಳಿದಿದ್ದು ಫಿಟ್​ ಆಗಿದ್ದಾರೆ ಎಂದು ಬಿಸಿಸಿಐ ಈ ಹಿಂದೆ ಹೇಳಿತ್ತು.

ಇದನ್ನೂ ಓದಿ:ಬೆಂಗಳೂರು ಆಗಿ ಬದಲಾದ ಬ್ಯಾಂಗಲೂರ್​ ಟೀಂ: ಈಗಲಾದರೂ ಚೇಂಜ್​ ಆಗುತ್ತಾ ಆರ್​​ಸಿಬಿ ಲಕ್

For All Latest Updates

ABOUT THE AUTHOR

...view details