ಕರ್ನಾಟಕ

karnataka

ETV Bharat / sports

ಬಾರ್ಡರ್​-ಗವಾಸ್ಕರ್ ಟ್ರೋಫಿ: ಟೂರ್ನಿ ಆರಂಭಕ್ಕೂ ಇದುವೇ ವಿಜೇತ ತಂಡ ಎಂದ ಪಾಂಟಿಂಗ್​! - Ricky Ponting Prediction - RICKY PONTING PREDICTION

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನವೆಂಬರ್ ತಿಂಗಳಲ್ಲಿ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್​ ಟ್ರೋಫಿ ಕ್ರಿಕೆಟ್‌ ಸರಣಿಯಲ್ಲಿ ಯಾವ ತಂಡ ಗೆಲ್ಲಲಿದೆ ಎಂದು ಆಸಿಸ್​ ಮಾಜಿ ನಾಯಕ ಭವಿಷ್ಯ ನುಡಿದಿದ್ದಾರೆ.

ರೋಹಿತ್ ಶರ್ಮಾ ಮತ್ತು ಪ್ಯಾಟ್ ಕಮ್ಮಿನ್ಸ್
ರೋಹಿತ್ ಶರ್ಮಾ ಮತ್ತು ಪ್ಯಾಟ್ ಕಮ್ಮಿನ್ಸ್ (IANS)

By ETV Bharat Sports Team

Published : Aug 13, 2024, 7:06 PM IST

ನವದೆಹಲಿ: ಭಾರತ-ಆಸ್ಟ್ರೇಲಿಯಾ ನಡುವೆ ಪ್ರತಿವರ್ಷ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಯೋಜಿಸಲಾಗುತ್ತದೆ. ಈ ಬಾರಿಯ ಸರಣಿ ನವೆಂಬರ್‌ನಿಂದ ಆರಂಭಗೊಳ್ಳಲಿದೆ. ಸರಣಿ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಟ್ರೋಫಿ ಗೆಲ್ಲುವ ತಂಡ ಯಾವುದು ಎಂದು ಭವಿಷ್ಯ ನುಡಿದಿದ್ದಾರೆ.

ಈ ಕುರಿತು ಇಎಸ್​ಪಿಎನ್​ ಕ್ರಿಕ್​ ಇನ್ಫೋ ಜೊತೆ ಮಾತನಾಡಿದ ಅವರು, ಇದೊಂದು ರೋಚಕ ಸರಣಿಯಾಗಿರಲಿದೆ. ಕಳೆದ ಎರಡು ಟೆಸ್ಟ್​ ಸರಣಿಗಳಲ್ಲಿನ ಬೆಳವಣಿಗೆಗಳನ್ನು ಗಮನಿಸಿದರೆ ಆಸ್ಟ್ರೇಲಿಯಾ ತವರಿನಲ್ಲಿ ಪುಟಿದೇಳುವ ಸಾಧ್ಯತೆ ಇದೆ ಎಂದಿದ್ದಾರೆ.

ಐದು ಪಂದ್ಯಗಳ ಟೆಸ್ಟ್ ಸರಣಿ ಈ ಬಾರಿ ನಡೆಯಲಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಕೇವಲ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿಸಲಾಗಿತ್ತು. ಹಾಗಾಗಿ ಪ್ರತಿಯೊಬ್ಬ ಆಟಗಾರರೂ ಐದು ಟೆಸ್ಟ್ ಪಂದ್ಯಗಳನ್ನು ಆಡಲು ಉತ್ಸುಕರಾಗಿದ್ದಾರೆ.

ಅಲ್ಲದೇ ಐದು ಪಂದ್ಯಗಳಿರುವುದರಿಂದ ಕೆಲ ಪಂದ್ಯ ಡ್ರಾ ಆಗುವ ಸಾಧ್ಯತೆ ಇದೆ. ಆದರೆ ಅಂತಿಮವಾಗಿ ಆಸ್ಟ್ರೇಲಿಯಾ 3-1 ಅಂತರದಿಂದ ಸರಣಿ ಗೆಲ್ಲಲಿದೆ ಎಂದು ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ. ಪಾಂಟಿಂಗ್ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಕೇವಲ 1 ಪಂದ್ಯವನ್ನು ಮಾತ್ರ ಗೆಲ್ಲುಲಿದ್ದು, 3 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸುತ್ತದೆ ಮತ್ತು ಒಂದು ಪಂದ್ಯ ಡ್ರಾಗೊಳ್ಳುವುದರೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಆಸ್ಟ್ರೇಲಿಯಾ ಎತ್ತಿ ಹಿಡಿಯುತ್ತದೆ ಎಂಬುದಾಗಿದೆ.

ಆಸ್ಟ್ರೇಲಿಯಾ ಕೊನೆಯ ಬಾರಿಗೆ 2014-15ರಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದಿತ್ತು. ಆ ಬಳಿಕ ಟೀಂ ಇಂಡಿಯಾ ಸತತ ಮೂರು ಬಾರಿ ಸರಣಿ ಗೆದ್ದುಕೊಂಡಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಕೊನೆಯ ಎರಡು ಸರಣಿಗಳಲ್ಲೂ ಟೀಂ ಇಂಡಿಯಾ 2-1 ಅಂತರದಿಂದ ಜಯಭೇರಿ ಬಾರಿಸಿರುವುದು ಗಮನಾರ್ಹ.

ವೇಳಾಪಟ್ಟಿ:ಬಾರ್ಡರ್​-ಗವಾಸ್ಕತ್​ ಟ್ರೋಫಿನವೆಂಬರ್ 22ರಿಂದ ಜನವರಿ 7ರ ವರೆಗೆ ನಡೆಯಲಿದೆ. 5 ಟೆಸ್ಟ್ ಪಂದ್ಯಗಳು ನಡೆಯಲಿವೆ. ಈ ಹಿಂದೆ ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ನಡೆಸಲಾಗುತ್ತಿತ್ತು. ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದೆ. ಜಿಯೋಸಿನಿಮಾದಲ್ಲಿ ಪಂದ್ಯಗಳು ಪ್ರಸಾರವಾಗಲಿದೆ.

ಇದನ್ನೂ ಓದಿ:ಒಲಿಂಪಿಕ್ಸ್​ ತಯಾರಿಗೆ ₹1.5 ಕೋಟಿ ಹಣ ಯಾರಿಂದ ಪಡೆದಿದ್ದೇವೆ?: ಅಶ್ವಿನಿ ಪೊನ್ನಪ್ಪ ಕಿಡಿ - Ashwini Ponnappa

ABOUT THE AUTHOR

...view details