ಕರ್ನಾಟಕ

karnataka

ETV Bharat / sports

ಟೆನಿಸ್​​ಗೆ ವಿದಾಯ ಹೇಳಿದ 22 ಬಾರಿಯ ಗ್ರ್ಯಾಂಡ್‌ಸ್ಲಾಮ್​ ಚಾಂಪಿಯನ್​ ರಾಫೆಲ್​ ನಡಾಲ್​ - RAFAEL NADAL ANNOUNCES RETIREMENT

ಚಾಂಪಿಯನ್ ಆಟಗಾರ​ ರಾಫೆಲ್​ ನಡಾಲ್ ಅವರು ಟೆನಿಸ್​ಗೆ ನಿವೃತ್ತಿ ಘೋಷಿಸಿದ್ದಾರೆ.​​

ರಾಫೆಲ್​ ನಡಾಲ್​
ರಾಫೆಲ್​ ನಡಾಲ್​ (AFP)

By ETV Bharat Sports Team

Published : Oct 10, 2024, 3:45 PM IST

Updated : Oct 10, 2024, 4:33 PM IST

Rafael Nadal Retirement: ಸ್ಪೇನ್‌ ದೇಶದ ದಿಗ್ಗಜ ಆಟಗಾರ ರಾಫೆಲ್ ನಡಾಲ್ ಅವರು ಇಂದು ಟೆನಿಸ್‌ಗೆ ನಿವೃತ್ತಿ ಘೋಷಿಸಿದರು. 22 ಬಾರಿ ಪ್ರತಿಷ್ಟಿತ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ನಡಾಲ್, ಈ ವರ್ಷದ ನವೆಂಬರ್‌ನಲ್ಲಿ ಮಲಗಾದಲ್ಲಿ ನಡೆಯಲಿರುವ ಡೇವಿಸ್ ಕಪ್ ತಮ್ಮ ಅಂತಿಮ ಟೆನಿಸ್ ಟೂರ್ನಿ ಎಂದು ತಿಳಿಸಿದ್ದಾರೆ. ನವೆಂಬರ್ 19ರಿಂದ 21ರವರೆಗೆ ನಡೆಯಲಿರುವ ಡೇವಿಸ್ ಕಪ್​ನ ಕ್ವಾರ್ಟರ್ ಫೈನಲ್‌ನಲ್ಲಿ ನಡಾಲ್​, ನೆದರ್ಲೆಂಡ್ಸ್ ಸ್ಪರ್ಧಿಯನ್ನು ಎದುರಿಸಲಿದ್ದಾರೆ.

ಈ ಕುರಿತು ತಮ್ಮ ಅಧಿಕೃತ 'ಎಕ್ಸ್'​ ಖಾತೆಯಲ್ಲಿ ವೀಡಿಯೊ ಹಂಚಿಕೊಂಡಿರುವ ಅವರು​, "ಜೀವನದಲ್ಲಿ ಪ್ರತಿಯೊಂದಕ್ಕೂ ಪ್ರಾರಂಭ ಮತ್ತು ಅಂತ್ಯವಿರುತ್ತದೆ. ಅದರಂತೆ ನನ್ನ ಟೆನಿಸ್​ ವೃತ್ತಿಜೀವನವನ್ನು ಕೊನೆಗೊಳಿಸಲು ಸರಿಯಾದ ಸಮಯ ಬಂದಿದೆ ಎಂದು ಭಾವಿಸಿದ್ದೇನೆ. ಡೇವಿಸ್ ಕಪ್ ಫೈನಲ್ ನನ್ನ ವೃತ್ತಿಜೀವನದ ಕೊನೆಯ ಪಂದ್ಯಾವಳಿಯಾಗಿದ್ದು, ಇದರಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲು ಉತ್ಸುಕನಾಗಿದ್ದೇನೆ" ಎಂದು ಹೇಳಿದ್ದಾರೆ.

ನಡಾಲ್ ಸಾಧನೆ:2005ರಲ್ಲಿ ನಡೆದ ಫ್ರೆಂಚ್ ಓಪನ್‌ ಮೂಲಕ ನಡಾಲ್‌ ಅವರ ಪ್ರಶಸ್ತಿ ಬೇಟೆ ಪ್ರಾರಂಭವಾಯಿತು. 2006, 2007, 2008, 2010, 2011, 2012, 2013, 2014, 2017, 2018, 2019, 2020, 2022ರಲ್ಲಿ ಫ್ರೆಂಚ್​ ಓಪನ್​ ಗ್ರ್ಯಾಂಡ್‌ಸ್ಲಾಮ್ ವಿಜೇತರಾಗಿ ಹೊರಹೊಮ್ಮಿದರು. ಇದಲ್ಲದೇ ಯುಎಸ್​ ಓಪನ್​ 4 ಬಾರಿ, ಆಸ್ಟ್ರೇಲಿಯಾ ಓಪನ್​ ಮತ್ತು ವಿಂಬಲ್ಡನ್​ ಎರಡೆರಡು ಬಾರಿ ಗೆದ್ದಿದ್ದಾರೆ.

ಫ್ರೆಂಚ್ ಓಪನ್ ಎಂದರೆ ನಡಾಲ್, ನಡಾಲ್ ಎಂದರೆ ಫ್ರೆಂಚ್ ಓಪನ್ ಎಂಬಷ್ಟು ಖ್ಯಾತಿ ಪಡೆದಿದ್ದಾರೆ. ಆದರೆ ಇತ್ತೀಚೆಗೆ ನಡೆದ ಫ್ರೆಂಚ್ ಓಪನ್‌ ಮೊದಲ ಸುತ್ತಿನಲ್ಲೇ ಜ್ವೆರೆವ್ ವಿರುದ್ಧ ಸೋಲು ಕಂಡು ಹೊರಬಿದ್ದಿದ್ದರು. ಕಳೆದ ಒಂದೂವರೆ ವರ್ಷದಿಂದ ​ಗಾಯದ ಸಮಸ್ಯೆ ಜೊತೆಗೆ ಫಿಟ್‌ನೆಸ್ ಕೊರತೆ ಎದುರಿಸುತ್ತಿದ್ದಾರೆ. ಸೊಂಟ ಮತ್ತು ಕಿಬ್ಬೊಟ್ಟೆಯ ಸ್ನಾಯುವಿನ ಗಾಯದಿಂದಾಗಿ ಜನವರಿ 2023ರಿಂದ ಈವರೆಗೆ ಕೇವಲ 15 ಪಂದ್ಯಗಳನ್ನು ಆಡಿದ್ದು, 8ರಲ್ಲಿ ಗೆಲುವು ಸಾಧಿಸಿದ್ದಾರೆ. ಬಹುಕಾಲದವರೆಗೆ ನಂಬರ್ ಒನ್ ಟೆನಿಸ್​ ಆಟಗಾರನಾಗಿದ್ದ ನಡಾಲ್​ ಇದೀಗ 275ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇದನ್ನೂ ಓದಿ:ಆ ದಿನ ಧೋನಿ ಮಾತುಗಳನ್ನು ಕಡೆಗಣಿಸಿ ಮೊದಲ ದ್ವಿಶತಕ ಸಿಡಿಸಿದ್ದ ಹಿಟ್​ಮ್ಯಾನ್: ಅಷ್ಟಕ್ಕೂ ಅವತ್ತು ಧೋನಿ ಹೇಳಿದ್ದೇನು?

Last Updated : Oct 10, 2024, 4:33 PM IST

ABOUT THE AUTHOR

...view details