ಪ್ಯಾರಿಸ್ (ಫ್ರಾನ್ಸ್):ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಮತ್ತೊಂದು ಪದಕ ಜಯಿಸಿದೆ. ಮಹಿಳೆಯರ 100 ಮೀಟರ್ ಟಿ35 ಓಟದ ಸ್ಪರ್ಧೆಯಲ್ಲಿ ಪ್ರೀತಿ ಪಾಲ್ ಕಂಚಿನ ಪದಕ ಗೆದ್ದಿದ್ದಾರೆ. 23 ವರ್ಷದ ಪ್ರೀತಿ 100 ಮೀಟರ್ ದೂರವನ್ನು 14.31 ಸೆಕೆಂಡುಗಳಲ್ಲಿ ಕ್ರಮಿಸಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಈ ಸ್ಪರ್ಧೆಯಲ್ಲಿ ಚೀನಾದ ಝೌ ಜಿಯಾ ಚಿನ್ನದ ಪದಕ ಗೆದ್ದುಕೊಂಡರೇ, ಚೀನಾದ ಮತ್ತೊಬ್ಬ ಅಥ್ಲೀಟ್ ಗುವೊ ಕಿಯಾನ್ಕಿಯಾನ್ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಝೌ ಕೇವಲ 13.58 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿದರೇ, ಗುವೊ ಕಿಯಾನ್ಕಿಯಾನ್ 13.74 ಸೆಕೆಂಡುಗಳ ಗುರಿ ತಲುಪಿದ್ದಾರೆ. ಪಂದ್ಯಾವಳಿಯ ಮೂರನೇ ದಿನ ಕಂಚಿನ ಪದಕ ಗೆಲ್ಲುವ ಮೂಲಕ ಪ್ರೀತಿ ಪಾಲ್ ದೇಶಕ್ಕೆ ಮೂರನೇ ಪದಕ ಕೊಡುಗೆಯಾಗಿ ನೀಡಿದ್ದಾರೆ.
ಇದಕ್ಕೂ ಮೊದಲು ಶೂಟಿಂಗ್‌ನಲ್ಲಿ ಅವನಿ ಲೆಖರಾ ಮತ್ತು ಮೋನಾ ಅಗರ್ವಾಲ್ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು. ಇವರಿಬ್ಬರೂ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕದ ಖಾತೆ ತೆರೆದಿದ್ದಾರೆ. ಒಂದೇ ಈವೆಂಟ್ನಲ್ಲಿ ಚಿನ್ನ ಮತ್ತು ಕಂಚು ಪದಕಗಳನ್ನು ಗೆಲ್ಲುವ ಮೂಲಕ ಪ್ಯಾರಾ ಮಹಿಳಾ ಶೂಟರ್ಗಳು ವಿಶೇಷ ಸಾಧನೆ ಮಾಡಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಪ್ಯಾರಾ ಶೂಟರ್ ಅವನಿ ಲೆಖರಾ ಚಿನ್ನದ ಪದಕ ಗೆದ್ದರೇ, ಮೋನಾ ಅಗರ್ವಾಲ್ ಕಂಚಿನ ಪದಕಕ್ಕೆ ಕೊರಳೊಡಿದ್ದಾರೆ.
ಇದನ್ನೂ ಓದಿ:ಪ್ಯಾರಾಲಿಂಪಿಕ್ಸ್ 2024: 10ಮೀ ಏರ್ ರೈಫಲ್ ಶೂಟಿಂಗ್‌ನಲ್ಲಿ ಚಿನ್ನ, ಕಂಚು ಗೆದ್ದ ಭಾರತದ ಮಹಿಳಾ ಶೂಟರ್ಸ್ - Indian wins gold in Paralympics