ಪ್ಯಾರಿಸ್ (ಫ್ರಾನ್ಸ್): ದೀಪಿಕಾ ಕುಮಾರಿ, ಅಂಕಿತಾ ಬಕತ್ ಮತ್ತು ಭಜನ್ ಕೌರ್ ಅವರನ್ನು ಒಳಗೊಂಡ ಭಾರತ ಮಹಿಳಾ ಆರ್ಚರಿ ತಂಡ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ 2024 ಆರ್ಚರಿ ಟೀಮ್ ಈವೆಂಟ್‌ನ ಇಂದಿನ ರ‍್ಯಾಂಕಿಂಗ್ ಸುತ್ತಿನ ಪಂದ್ಯದ ಮೂಲಕ ಕ್ವಾರ್ಟರ್‌ಫೈನಲ್‌ಗೆ ನೇರ ಪ್ರವೇಶ ಪಡೆದುಕೊಂಡಿದೆ.
ತಂಡದ ಅಂಕಪಟ್ಟಿಯಲ್ಲಿ ಪ್ರಮುಖ ನಾಲ್ಕು ಆಟಗಾರರು ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಆದರೆ, ಐದರಿಂದ 12ನೇ ವರೆಗಿನ ಸ್ಥಾನಪಡೆದುಕೊಂಡವರು ರೌಂಡ್ ಆಫ್ 16 ಪಂದ್ಯಗಳಲ್ಲಿ ಆಡಬೇಕಾಗುತ್ತದೆ.
ದಕ್ಷಿಣ ಕೊರಿಯಾ (2046), ಚೀನಾ (1996), ಮತ್ತು ಮೆಕ್ಸಿಕೊ (1986) ಅಂಕಗಳನ್ನು ಪಡೆದಿದ್ದು, ಭಾರತ ತಂಡ ನಾಲ್ಕನೇ ಸ್ಥಾನದಲ್ಲಿ ಶ್ರೇಯಾಂಕದ ಈವೆಂಟ್ ಪೂರ್ಣಗೊಳಿಸಿದೆ. ಈ ಕೂಟದಲ್ಲಿ ಭಾರತ 1983 ಅಂಕಗಳನ್ನು ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿದೆ. 2046 ಅಂಕಗಳನ್ನು ಪಡೆದುಕೊಂಡಿರುವ ದಕ್ಷಿಣ ಕೊರಿಯಾ ಈ ಒಲಿಂಪಿಕ್ನಲ್ಲಿ ಹೊಸ ದಾಖಲೆ ಬರೆದಿದೆ. ಜಪಾನ್‌ನಲ್ಲಿ ನಡೆದ ಕೊನೆಯ ಬೇಸಿಗೆ ಕ್ರೀಡಾಕೂಟದಲ್ಲಿ ಅವರದೇ ದೇಶದ ಕ್ರೀಡಾಪಟುಗಳು ಮಾಡಿದ್ದ 2032 ಅಂಕಗಳ ದಾಖಲೆಯನ್ನು ಅಳಸಿಹಾಕಿದೆ.
ಪಂದ್ಯದ ಅಂತ್ಯಕ್ಕೂ ಮುನ್ನ ಎಂಟನೇ ಸ್ಥಾನದಲ್ಲಿದ್ದ ಅಂಕಿತಾ 11ನೇ ಸ್ಥಾನಕ್ಕೆ ಸೀಸನ್ ಬೆಸ್ಟ್ ನೀಡಿದರು. ಭಜನ್ ಮತ್ತು ದೀಪಿಕಾ ಕ್ರಮವಾಗಿ 22 ಮತ್ತು 23ನೇ ಸ್ಥಾನ ಪಡೆದರು. ಟೀಮ್ ಇಂಡಿಯಾ ಇಂದು 21 ಬುಲ್ಸೆಸ್ ಮತ್ತು 83 ಹತ್ತರ (10) ಗಳೊಂದಿಗೆ 1983 ಅಂಕಗಳನ್ನು ಗಳಿಸಿತು.