ಮುಂಬೈ(ಮಹಾರಾಷ್ಟ್ರ): ಪ್ಯಾರಿಸ್ ಒಲಿಂಪಿಕ್ಸ್ 2024ರ ಅಧಿಕೃತ ಪ್ರಸಾರ ಮತ್ತು ಡಿಜಿಟಲ್ ಪಾಲುದಾರ ವಯಾಕಾಮ್ 18 ತನ್ನ ಕ್ಯಾಂಪೇನ್ ಫಿಲ್ಮ್ (ಅಭಿಯಾನ ಚಿತ್ರ) 'ದಮ್ ಲಗಾ ಕೆ... ಹೈಶಾ' ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ 20 ಏಕಕಾಲೀನ ಫೀಡ್‌ಗಳು ಮತ್ತು ಒಲಿಂಪಿಯನ್‌ಗಳ ರೋಸ್ಟರ್‌ನೊಂದಿಗೆ ಅತಿದೊಡ್ಡ ಮತ್ತು ಅತ್ಯಂತ ತಲ್ಲೀನಗೊಳಿಸುವ ಒಲಿಂಪಿಕ್ಸ್ ಪ್ರಸ್ತುತಿ ಎಂದು ಘೋಷಿಸಿದೆ.
ಒಲಿಂಪಿಕ್ಸ್‌ನ ಫಿಲಾಸಪಿಯನ್ನು ಹಿಂದೆಂದೂ ಕಂಡಿರದ್ದಕ್ಕಿಂತ ಭಿನ್ನವಾಗಿ ಕ್ಯಾಂಪೇನ್ ಫಿಲ್ಮ್ ತೋರಿಸಿದೆ. ಭಾರತೀಯ ಮಾರುಕಟ್ಟೆಗೆ ಹಿಂದಿನ ಜಾಗತಿಕ ಕ್ರೀಡಾಕೂಟಗಳು ಬಳಸಿದ ಸಾಂಪ್ರದಾಯಿಕ ಜಾಹೀರಾತು ಟೆಂಪ್ಲೇಟ್‌ನಿಂದ ಹೊರಬಂದು, ಗಂಭೀರವಾಗಿ ಕಾಣುವ ಅಥ್ಲೀಟ್‌ಗಳ ಟ್ರೋಪ್‌ಗಳನ್ನು ತೋರಿಸಿದೆ. ಈ ಚಿತ್ರವು ಒಲಿಂಪಿಕ್ಸ್‌ನ ಉತ್ಸಾಹ ಮತ್ತು ಶಕ್ತಿಯನ್ನು ದೈನಂದಿನ ಭಾರತೀಯ ಜೀವನದೊಂದಿಗೆ ಸಂಯೋಜಿಸುತ್ತದೆ. ಅತ್ಯಂತ ಸಮಗ್ರ ಒಲಿಂಪಿಕ್ಸ್ ಪ್ರಸ್ತುತಿ ಪಡಿಸಲು ಅನೇಕ ಕ್ರೀಡಾ ವಿಭಾಗಗಳಲ್ಲಿ ಮಾಜಿ ಚಾಂಪಿಯನ್ಗಳನ್ನು ತೋರಿಸಲಾಗಿದೆ.
ಮೊದಲ ಬಾರಿಗೆ, ಭಾರತದಲ್ಲಿ ಒಲಿಂಪಿಕ್ಸ್ ಕವರೇಜ್ ಅನ್ನು 20 ಏಕಕಾಲೀನ ಫೀಡ್‌ಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಇದು ಒಲಂಪಿಕ್ ಗೇಮ್ಸ್‌ನಲ್ಲಿ ಅಭಿಮಾನಿಗಳು ತಮ್ಮ ಆದ್ಯತೆಯ ಆ್ಯಕ್ಷನ್ ಮತ್ತು ಭಾರತೀಯರ ಪ್ರದರ್ಶನ ನೋಡಲು ಅನುವು ಮಾಡಿಕೊಡುತ್ತದೆ. ಕ್ಯುರೇಟೆಡ್ ಫೀಡ್‌ಗಳು ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಇಂಡಿಯಾ ಫೀಡ್ ಒಳಗೊಂಡಿರುತ್ತದೆ. ಇದು ವೀಕ್ಷಕರಿಗೆ ಭಾರತೀಯ ತಂಡದ ಎಲ್ಲ ಆಟಗಳನ್ನು ನೆಚ್ಚಿನ ಭಾಷೆಯೊಂದಿಗೆ ನೋಡಲು ಸಹಕಾರಿಯಾಗಿದೆ.
ಹಿಂದೆಂದೂ ನೋಡಿರದಂತೆ ಒಲಿಂಪಿಕ್ಸ್ನಲ್ಲಿ ಈ ಬಾರಿ ಮಹಿಳಾ ಕ್ರೀಡಾಪಟುಗಳ ಪ್ರಯಾಣವನ್ನು ಪ್ರತ್ಯೇಕವಾಗಿ ಸೆರೆಹಿಡಿಯಲಾಗುತ್ತಿದೆ. ಕ್ಯುರೇಟೆಡ್ ಫೀಡ್‌ಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಜಾಗತಿಕ ಆಕ್ಷನ್ ಫೀಡ್ ಅನ್ನು ಸಹ ಒಳಗೊಂಡಿರುತ್ತವೆ. ಹೀಗಾಗಿ ಪ್ಯಾರಿಸ್ 2024 ರಲ್ಲಿ ವಿಶ್ವದ ಅತ್ಯುತ್ತಮ ಕ್ರೀಡಾಪಟುಗಳನ್ನು ಟ್ರ್ಯಾಕ್ ಮಾಡಲು ವೀಕ್ಷಕರಿಗೆ ಅವಕಾಶ ನೀಡುತ್ತದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.