ETV Bharat / entertainment

ನ್ಯಾಯಾಲಯಕ್ಕೆ ಹಾಜರಾದ ನಟಿ ರಮ್ಯಾ: ಏನಿದು ಪ್ರಕರಣ? - RAMYA

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಕೇಸ್​ಗೆ ಸಂಬಂಧಿಸಿದಂತೆ ನಟಿ ರಮ್ಯಾ ಇಂದು ನಗರದ ವಾಣಿಜ್ಯ ಸಂಕೀರ್ಣ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾದರು.

Actress Ramya
ನಟಿ ರಮ್ಯಾ (Photo: ETV Bharat)
author img

By ETV Bharat Entertainment Team

Published : Jan 7, 2025, 4:08 PM IST

ಬೆಂಗಳೂರು: ರಂಗಭೂಮಿ ಕಲಾವಿದರು ಅಭಿನಯಿಸಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತೆರೆಕಂಡ ದಿನವೇ ಕಾನೂನು ಅಡೆತಡೆ ಎದುರಿಸಿತ್ತು‌. ಈ ಚಿತ್ರ ರಿಲೀಸ್​ ಆಗಬಾರದೆಂದು ಮೋಹಕತಾರೆ ರಮ್ಯಾ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು‌. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​ ಕ್ವೀನ್​​ ಇಂದು ಕೋರ್ಟ್​​ಗೆ ಹಾಜರಾದರು.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ವಿರುದ್ಧ ಕೇಸ್​ ಹಾಕಿದ್ದ ಚಂದನವನದ ತಾರೆ ನಗರದ ವಾಣಿಜ್ಯ ಸಂಕೀರ್ಣ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದರು. 2024ರ ಜುಲೈನಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ನಿರ್ಮಾಪಕರ ಮೇಲೆ ಕೇಸ್ ಹಾಕಿದ್ದರು. ಸಿನಿಮಾ ರಿಲೀಸ್​ಗೆ ತಡೆಯಾಜ್ಞೆ ಕೋರುವುದರ ಜೊತೆಗೆ ಒಂದು ಕೋಟಿ ರೂ. ಪರಿಹಾರ ನೀಡುವಂತೆ ಪ್ರಕರಣ ದಾಖಲಿಸಿದ್ದರು.

ನ್ಯಾಯಾಲಯಕ್ಕೆ ಹಾಜರಾದ ನಟಿ ರಮ್ಯಾ (ETV Bharat)

ತಮ್ಮ ಅನುಮತಿ ಪಡೆಯದೇ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದ ಟ್ರೇಲರ್​ ಹಾಗೂ ಸಿನಿಮಾದಲ್ಲಿ ತಮ್ಮ ದೃಶ್ಯಗಳ ಬಳಕೆ ಮಾಡಿರುವುದಾಗಿ ಆರೋಪ ಹೊರಿಸಿದ್ದರು. ದೃಶ್ಯಗಳನ್ನು ತೆಗೆದುಹಾಕುವಂತೆ ದಾವೆ ಹೂಡಿದ್ದರು. ಕೇವಲ ಸಿನಿಮಾದ ಪ್ರೋಮೋ ಶೂಟ್​ಗಾಗಿ ಅಷ್ಟೇ ಚಿತ್ರೀಕರಿಸಲು ರಮ್ಯಾ ಅನುಮತಿ ಕೊಟ್ಟಿರುವುದಾಗಿ ತಿಳಿಸಿದ್ದರು. ಆದ್ರೆ ಚಿತ್ರತಂಡ ಟ್ರೇಲರ್ ಹಾಗೂ ಸಿನಿಮಾದಲ್ಲಿ ದೃಶ್ಯಗಳನ್ನು ಬಳಸಿಕೊಂಡಿದೆ ಎಂದು ದೂರಿದ್ದರು.

ಲೆಕ್ಚರರ್ ಪಾತ್ರದಲ್ಲಿ ಮೋಹಕತಾರೆ ರಮ್ಯಾ ಕಾಣಿಸಿಕೊಂಡಿದ್ದರು. ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರವನ್ನು ವರುಣ್ ಹಾಗೂ ಪ್ರಜ್ವಲ್ ಬಿ. ಪಿ ನಿರ್ಮಾಣ ಮಾಡಿದ್ದು, ಜುಲೈ 21ರಂದು ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರದಲ್ಲಿ ಡಿವೈನ್​ ಸ್ಟಾರ್ ರಿಷಬ್ ಶೆಟ್ಟಿ, ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ, ದಿಗಂತ್, ರಮ್ಯಾ ಸೇರಿ ಹಲವು ಸ್ಟಾರ್ಸ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಒಂದಿಷ್ಟು ದೃಶ್ಯಗಳಲ್ಲಿ ಮೋಹಕತಾರೆ ರಮ್ಯಾ ಅಭಿನಯಿಸಿದ್ದ ಹಿನ್ನೆಲೆ ಅವರ ದೃಶ್ಯಗಳನ್ನು ಚಿತ್ರತಂಡ ಪ್ರಚಾರಕ್ಕೆ ಬಳಸಿಕೊಂಡಿತ್ತು. ಹಾಗಾಗಿ ರಮ್ಯಾ ಚಿತ್ರತಂಡದ ವಿರುದ್ಧ ನೋಟಿಸ್​​ ಜಾರಿಗೊಳಿಸಿದ್ದರು.

ಇದನ್ನೂ ಓದಿ: ಬಾಕ್ಸ್​​ ಆಫೀಸ್​ನಲ್ಲಿ ಮುಗ್ಗರಿಸಿದ್ರೂ ಆಸ್ಕರ್​​ಗೆ ಎಂಟ್ರಿ; ಇದು ಸೂರ್ಯ ನಟನೆಯ 'ಕಂಗುವ' ಸಾಧನೆ

ಯೂತ್​ ಸಬ್ಜೆಕ್ಟ್​ ಸಿನಿಮಾವನ್ನು ಪರಂವಃ ಪಿಕ್ಚರ್ಸ್ ಮೂಲಕ ರಕ್ಷಿತ್​ ಶೆಟ್ಟಿ ಅವರು ಪ್ರಸ್ತುತ ಪಡಿಸಿದ್ದರು. ಅಜನೀಶ್ ಲೋಕನಾಥ್ ಅವರ ಸಂಗೀತ ಈ ಸಿನಿಮಾದ ಆಕರ್ಷಣೆಯಾಗಿತ್ತು. ಅರವಿಂದ್ ಅವರ ಕ್ಯಾಮರಾ ಕೈಚಳಕವಿದ್ದ ಸಿನಿಮಾಗೆ ಸುರೇಶ್ ಸಂಕಲನವಿತ್ತು. ಜುಲೈ 21ಕ್ಕೆ ತೆರೆಕಂಡ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಇದನ್ನೂ ಓದಿ: ಸಂಧ್ಯಾ ಥಿಯೇಟರ್​ ಕಾಲ್ತುಳಿತ: ಆಸ್ಪತ್ರೆಗೆ ತೆರಳಿ ಗಾಯಾಳು ಬಾಲಕನ ಆರೋಗ್ಯ ವಿಚಾರಿಸಿದ ಅಲ್ಲು ಅರ್ಜುನ್​​

ಇನ್ನು, ರಮ್ಯಾ ಅವರ ಸಿನಿಮಾ ವಿಚಾರ ಗಮನಿಸೋದಾದ್ರೆ, 16 ವರ್ಷಗಳ ಹಿಂದೆಯೇ ಚಿತ್ರೀಕರಣ ಪೂರ್ಣಗೊಳಿಸಿದ್ದ 'ರಕ್ತ ಕಾಶ್ಮೀರ' ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದೆ. ರಿಯಲ್​ ಸ್ಟಾರ್ ಉಪೇಂದ್ರ ಅವರ ಜೊತೆಗೆ ತೆರೆ ಹಂಚಿಕೊಂಡಿರುವ ಸಿನಿಮಾವಿದು. ಕೆಲ ಕಾರಣಗಳಿಂದ ಸಿನಿಮಾ ವಿಳಂಬ ಎದುರಿಸುತ್ತಾ ಬಂದಿದ್ದು, ಶೀಘ್ರದಲ್ಲೇ ತೆರೆಕಾಣಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.