ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರ ಎರಡನೇ ದಿನದಂದು ಭಾರತದ ಕ್ರೀಡಾಪಟುಗಳು ಶೂಟಿಂಗ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಟೇಬಲ್ ಟೆನ್ನಿಸ್ ಮತ್ತು ಬಿಲ್ಲುಗಾರಿಕೆ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಭಾನುವಾರ ಭಾರತದಿಂದ ಯಾವ ಆಟಗಾರರು ಯಾವ ಕ್ರೀಡೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಇಲ್ಲಿ ತಿಳಿಯಿರಿ.
ಭಾರತದ ಸ್ಪರ್ಧೆಗಳು
ರೋಯಿಂಗ್: ರೋಯಿಂಗ್ ಸ್ಪರ್ಧೆಯಲ್ಲಿ ಇಂದು ನಾಲ್ಕನೇ ಸ್ಥಾನ ಪಡೆದಿರುವ ಬಲರಾಜ್ ಪನ್ವಾರ್ ನಾಳೆಯ ಈವೆಂಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಯಿಂಗ್‌ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ರೆಪಿಚೇಜ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇಂದು ನಡೆದ ಸ್ಫರ್ಧೆಯಲ್ಲಿ ಬಾಲರಾಜ್ 7:07.11 ನಿಮಿಷದಲ್ಲಿ ಗುರಿ ತಲುಪಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಇದೀಗ ಅವರು ಕಂಚಿನ ಪದಕಕ್ಕೆ ಸೆಣಸಲಿದ್ದಾರೆ.
- ಪುರುಷರ ಸಿಂಗಲ್ಸ್ ಸ್ಕಲ್ಸ್ ರೆಪೆಚೇಜ್ ರೌಂಡ್ (ಬಾಲರಾಜ್ ಪನ್ವಾರ್ - ಭಾರತ) - 12:30 PM
ಶೂಟಿಂಗ್:ಎಲವೆನಿಲ್ ವಲರಿವನ್ ಮತ್ತು ರಮಿತಾ ಜಿಂದಾಲ್ ನಾಳೆ 10 ಮೀಟರ್ ಏರ್ ರೈಫಲ್ ಶೂಟಿಂಗ್ ಮಹಿಳೆಯರ ಅರ್ಹತಾ ಪಂದ್ಯದಲ್ಲಿ ಸ್ಪರ್ಧಿಸಲಿದ್ದಾರೆ. ಬಳಿಕ ಪುರುಷರ ಅರ್ಹತ ಪಂದ್ಯದಲ್ಲಿ ಸಂದೀಪ್ ಸಿಂಗ್ ಮತ್ತು ಅರ್ಜುನ್ ಬಾಬುತಾ ಭಾಗವಹಿಸಲಿದ್ದಾರೆ. ನಂತರ ಫೈನಲ್ ಪಂದ್ಯಗಳು ನಡೆಯಲಿವೆ.
- 10 ಮೀ ಏರ್ ರೈಫಲ್ (ಮಹಿಳೆಯರ ಅರ್ಹತೆ) - ಮಧ್ಯಾಹ್ನ 12:45
- 10 ಮೀ ಏರ್ ಪಿಸ್ತೂಲ್ (ಪುರುಷರ ಅರ್ಹತೆ) - ಮಧ್ಯಾಹ್ನ 1 ಗಂಟೆಗೆ
- 10ಮೀ ಏರ್ ರೈಫಲ್ (ಪುರುಷರ ಫೈನಲ್) - ಮಧ್ಯಾಹ್ನ 2:45
- 10ಮೀ ಏರ್ ಪಿಸ್ತೂಲ್ (ಮಹಿಳೆಯರ ಫೈನಲ್) - ಮಧ್ಯಾಹ್ನ 3:30
ಬ್ಯಾಡ್ಮಿಂಟನ್:ಪ್ಯಾರಿಸ್ ಒಲಿಂಪಿಕ್ಸ್‌ನ ಎರಡನೇ ದಿನ ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಆ್ಯಕ್ಷನ್ ಪ್ಯಾಕ್ಡ್ ದಿನವಾಗಲಿದೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿವಿ ಸಿಂಧು ಜರ್ಮನಿಯ ರೋತ್ ಫ್ಯಾಬಿಯನ್ ಅವರೊಂದಿಗೆ ಸೆಣಸಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್ ಕಾಣಿಸಿಕೊಳ್ಳಲಿದ್ದಾರೆ.
ಮಹಿಳಾ ಸಿಂಗಲ್ಸ್ - ಪಿವಿ ಸಿಂಧು: ಮಧ್ಯಾಹ್ನ 12
ಪುರುಷರ ಸಿಂಗಲ್ಸ್ - ಎಚ್.ಎಸ್.ಪ್ರಣೋಯ್: ಸಂಜೆ 5.30