ಹೈದರಾಬಾದ್: ಮುಂದಿನ ತಿಂಗಳು 19ನೇ ತಾರೀಖಿನಿಂದ ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗಲಿದೆ. ಭಾರತ ಸೇರಿ 8 ತಂಡಗಳು ಭಾಗವಹಿಸುತ್ತಿರುವ ಈ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿದೆ. ಭಾರತ ಹೊರತು ಪಡಿಸಿ ಉಳಿದೆಲ್ಲ ತಂಡಗಳ ಪಂದ್ಯ ಪಾಕಿಸ್ತಾನದ ಮೈದಾನಗಳಲ್ಲಿ ನಡೆಯಲಿವೆ.
ಆದ್ರೆ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲೂ ಕೇವಲ 41 ದಿನಗಳ ಮಾತ್ರ ಉಳಿದರೂ ಪಾಕಿಸ್ತಾನದಲ್ಲಿ ಮೈದಾನಗಳು ಸಜ್ಜಾಗಿಲ್ಲ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ. ಹೌದು, ಪಾಕಿಸ್ತಾನದ ಪ್ರಮುಖ ಮೈದಾನಗಳ ವಿಡಿಯೋಗಳು ವೈರಲ್ ಆಗಿದ್ದು ಅದರಲ್ಲಿ ಮೈದಾನದ ದರುಸ್ತಿ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.
ವೈರಲ್ ಆದ ವಿಡಿಯೋದಲ್ಲಿ ಲಾಹೋರ್, ರಾವಲ್ಪಿಂಡಿ, ಕರಾಚಿ ಮೈದಾನಗಳ ದುರಸ್ತಿ ಮತ್ತು ನಿರ್ಮಾಣದ ಕಾರ್ಯ ನಡೆಯುತ್ತಿರುವುದು ಕಂಡು ಬಂದಿದೆ. ಅಲ್ಲದೇ ಮೈದಾನದಲ್ಲಿನ ಹಾಸನಗಳು ಹಳೆಯದಾಗಿದ್ದು ಅವುಗಳನ್ನು ಬದಲಾಯಿಸಲಾಗಿಲ್ಲ. ಜೊತೆಗೆ ಫ್ಲೆಡ್ ಲೈಟ್ಗಳ ರಿಪೇರಿ ಕಾರ್ಯವೂ ಮುಕ್ತಾಯಗೊಂಡಿಲ್ಲ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ಏತನ್ಮಧ್ಯೆ, ಕಳೆದ ವರ್ಷ ಐಸಿಸಿ ಸದಸ್ಯರ ತಂಡ ಪಾಕಿಸ್ತಾನದ ಮೈದಾನಗಳ ವೀಕ್ಷಣೆಗೆ ತೆರಳಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಇತರೇ ದೇಶಗಳ ಅಂತರಾಷ್ಟ್ರೀಯ ಮೈದಾನಗಳಿಗೆ ಹೋಲಿಕೆ ಮಾಡಿದರೇ ಪಾಕ್ ಮೈದಾನಗಳು ಹೆಳಿಕೊಳ್ಳುವಷ್ಟು ಉತ್ತಮವಾಗಿಲ್ಲ. ಆದರೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮೊದಲೇ ಪಂದ್ಯಾವಳಿಗಳು ನಡೆಯಲಿರುವ ಮೈದಾನಗಳು ಸಜ್ಜಾಗಿರುತ್ತವೆ ಎಂದಿದ್ದಾರೆ.