ಕರಾಚಿ:ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಆತಿಥ್ಯ ವಹಿಸುತ್ತಿರುವ ಪಾಕಿಸ್ತಾನ ಮುಂಚಿತವಾಗಿಯೇ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ಅಲ್ಲಿಯ ಮೈದಾನಗಳನ್ನು ಸಿದ್ಧಪಡಿಸಿಕೊಳ್ಳುತ್ತಿರುವ ಪಾಕ್, ಕರಾಚಿ ಮತ್ತು ಲಾಹೋರ್ ಮೈದಾನಗಳಿಗೆ ಹೊಸ ಫ್ಲಡ್ಲೈಟ್ ಅಳವಡಿಸಲು ಮುಂದಾಗಿದೆ. ಆದ್ರೆ ಹೊಸ ಫ್ಲಡ್ಲೈಟ್ಗಳನ್ನು ಖರೀದಿಸುವ ಬದಲಿಗೆ ಹಣ ಉಳಿತಾಯ ಮಾಡಲು ಬಾಡಿಗೆಗೆ ಪಡೆಯಲು ಪಾಕ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಕರಾಚಿ ಮತ್ತು ಲಾಹೋರ್ ಮೈದಾನಗಳಿಗೆ ಬೇಕಾದ ಫ್ಲಡ್ಲೈಟ್ಗಳನ್ನು 2024 ರಿಂದ 25ರ ವರೆಗೆ ಅಂದರೆ ಒಂದು ವರ್ಷಕ್ಕೆ ಬಾಡಿಗೆ ಪಡೆಯಲು ನಿರ್ಧರಿಸಿರುವ ಪಿಸಿಬಿ ಇದಕ್ಕಾಗಿ ಈಗಾಗಲೇ ಟೆಂಡರ್ ಅನ್ನು ಕರೆದಿದೆ. ಅಲ್ಲದೇ ಕರಾಚಿ ಮತ್ತು ಲಾಹೋರ್ ಮೈದಾನಗಳಲ್ಲಿ ಈಗಾಗಲೇ ಅಳವಡಿಸಿರುವ ಹಳೆಯ ಫ್ಲಡ್ಲೈಟ್ಗಳನ್ನು ತೆಗೆದುಕೊಂಡು ಹೋಗಿ ಕ್ವೆಟ್ಟಾ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳಿಗೆ ಅಳವಡಿಸಲಾಗುತ್ತಿದೆ ಎಂದು ಅಲ್ಲಿಯ ಮಾಧ್ಯಮಗಳು ವರದಿ ಮಾಡಿವೆ.
ಇದಷ್ಟೇ ಅಲ್ಲ, ಜನರೇಟರ್‌ಗಳನ್ನು ಸಹ ಬಾಡಿಗೆ ಪಡೆಯಲು ಪಾಕ್ ಮಂಡಳಿ ಮುಂದಾಗಿದೆ. ಕರಾಚಿ, ಲಾಹೋರ್, ರಾವಲ್ಪಿಂಡಿ, ಮುಲ್ತಾನ್, ಫೈಸಲಾಬಾದ್, ಅಬೋಟಾಬಾದ್, ಕ್ವೆಟ್ಟಾ, ಪೇಶಾವರ್ ಮೈದಾನಗಳಿಗೆ ಜನರೇಟರ್‌ಗಳನ್ನು ಒದಗಿಸಲು ಪಿಸಿಬಿ ಟೆಂಡರ್‌ಗಳನ್ನು ಆಹ್ವಾನಿಸಿದೆ. ಸದ್ಯ ಅಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಹೆಚ್ಚಿರುವ ಕಾರಣ ಪಂದ್ಯದ ವೇಳೆ ವಿದ್ಯುತ್ ವ್ಯತ್ಯಯ ಆಗದಂತೆ ಜನರೇಟರ್‌ಗಳನ್ನು ಬಳಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಈ ಪರಿಸ್ಥಿತಿ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಟ್ರೋಲ್ ಮಾಡಲಾರಂಭಿಸಿದ್ದಾರೆ.
ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟ್ ಮಂಡಳಿ ಪಟ್ಟಿಯಲ್ಲಿ ಪಾಕಿಸ್ತಾನ 4ನೇ ಸ್ಥಾನದಲ್ಲಿದ್ದರೂ ಈ ಪರಿಸ್ಥಿತಿ ಬಂದಿದ್ದಕ್ಕೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಕ್ರಿಕೆಟ್ ಮಂಡಳಿ ಬಳಿ ಹಣವೇ ಇಲ್ಲ, ಹೇಗೆ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುತ್ತಾರೆ ಎಂದು ಅಪಹಾಸ್ಯ ಮಾಡಲಾಗುತ್ತಿದೆ.
ಇದನ್ನೂ ಓದಿ:ದೆಹಲಿಗೆ ಬಂದಿಳಿದ ವಿನೇಶ್ ಪೋಗಟ್ಗೆ ಅದ್ಧೂರಿ ಸ್ವಾಗತ - Grand Welcome for Vinesh Phogat