ಕರ್ನಾಟಕ

karnataka

ರಿಯಾಸಿ ಉಗ್ರ ದಾಳಿ ಖಂಡಿಸಿದ ಪಾಕ್​ ಕ್ರಿಕೆಟಿಗ ಹಸನ್​ ಅಲಿ, ಅವರ ಪತ್ನಿ; ಭಾರತೀಯರಿಂದ ಪ್ರಶಂಸೆ - Hasan Ali

By ETV Bharat Karnataka Team

Published : Jun 13, 2024, 7:33 PM IST

All eyes on Reasi: ಪಾಕಿಸ್ತಾನ ಕ್ರಿಕೆಟಿಗ ಹಸನ್​ ಅಲಿ ಮತ್ತು ಅವರ ಪತ್ನಿ ರಿಯಾಸಿ ಉಗ್ರ ದಾಳಿಯನ್ನು ಖಂಡಿಸಿದ್ದಾರೆ. ಇದು ಪಾಕಿಸ್ತಾನದಲ್ಲಿ ಟೀಕೆಗೆ ಗುರಿಯಾದರೆ, ಭಾರತೀಯರಿಂದ ಪ್ರಶಂಸೆಗೆ ಒಳಗಾಗಿದೆ.

ರಿಯಾಸಿ ಉಗ್ರ ದಾಳಿ ಖಂಡಿಸಿದ ಪಾಕ್​ ಕ್ರಿಕೆಟಿಗ ಹಸನ್​ ಅಲಿ
ಪಾಕ್​ ಕ್ರಿಕೆಟಿಗ ಹಸನ್​ ಅಲಿ (ETV Bharat)

ನವದೆಹಲಿ:ಜಮ್ಮು- ಕಾಶ್ಮೀರದ ರಿಯಾಸಿನಲ್ಲಿ ನಡೆದ ಉಗ್ರ ದಾಳಿಯ ವಿರುದ್ಧ ಭಾರತೀಯ ಸೆಲೆಬ್ರಿಟಿಗಳೇ ದೊಡ್ಡದಾಗಿ ಧ್ವನಿ ಎತ್ತಲು ಹಿಂಜರಿಯುತ್ತಿದ್ದರೆ, ಪಾಕಿಸ್ತಾನದ ಕ್ರಿಕೆಟಿಗ ಹಸನ್​ ಅಲಿ ಮತ್ತು ಅವರ ಪತ್ನಿ ಈ ಮಾರಣಹೋಮವನ್ನು ಖಂಡಿಸಿದ್ದಾರೆ. ALL EYES ON REASI ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ನಾಲ್ಕು ದಿನಗಳ ಹಿಂದೆ ರಿಯಾಸಿಯಲ್ಲಿ ವೈಷ್ಣೋದೇವಿಗೆ ಹೊರಟಿದ್ದ ಯಾತ್ರಾರ್ಥಿಗಳ ಬಸ್​ ಮೇಲೆ ಪಾಕ್​ ಉಗ್ರರು ದಾಳಿ ನಡೆಸಿ ಮಕ್ಕಳು ಸೇರಿ 10 ಮಂದಿಯನ್ನು ಬಲಿ ಪಡೆದಿದ್ದರು. ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಪಾಕಿಸ್ತಾನದ ಗಡಿ ದಾಟಿ ಬಂದು ಭಾರತದಲ್ಲಿ ಉಗ್ರ ದಾಳಿ ನಡೆಸಿದ್ದು, ಖಂಡನೆಗೆ ಗುರಿಯಾಗಿತ್ತು.

ಇದರ ವಿರುದ್ಧ ಪಾಕಿಸ್ತಾನದ ಕ್ರಿಕೆಟಿಗ ಧ್ವನಿ ಎತ್ತಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ 'ರಿಯಾಸಿ ಭಯೋತ್ಪಾದಕ ದಾಳಿಯ ಮೇಲೆ ಎಲ್ಲರ ಕಣ್ಣುಗಳು ಇವೆ' ಎಂದು ಪೋಸ್ಟ್​​ ಹಂಚಿಕೊಂಡಿದ್ದರು. ಬಳಿಕ ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಸೃಷ್ಟಿಸಿತ್ತು.

ಕ್ರಿಕೆಟಿಗನ ಈ ನಡೆಗೆ ಪಾಕಿಸ್ತಾನದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಜೊತೆಗೆ ಹಸನ್​ ಅಲಿಗೆ ಜೀವ ಬೆದರಿಕೆಯೂ ಹಾಕಲಾಗಿದೆ. ಕ್ರಿಕೆಟಿಗನನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಆದರೆ, ಭಾರತದಲ್ಲಿ ಅಲಿಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಉಗ್ರ ದಾಳಿಯ ವಿರುದ್ಧ ಧ್ವನಿ ಎತ್ತಿದ ಹಸನ್​ ಅಲಿಗೆ ಧನ್ಯವಾದ. ನಿಮ್ಮ ಪರವಾಗಿ ನಾವಿದ್ದೇವೆ ಎಂದು ಬೆಂಬಲಿಸಲಾಗುತ್ತಿದೆ.

ಸ್ಪಷ್ಟನೆ ನೀಡಿದ ಅಲಿ:ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೇಳಿಕೆಯಿಂದ ಟೀಕೆ- ಟಿಪ್ಪಣಿ ವ್ಯಕ್ತವಾದ ಹಿನ್ನೆಲೆ ಸ್ಪಷ್ಟನೆ ನೀಡಿರುವ ಹಸನ್​ ಅಲಿ, "ಭಯೋತ್ಪಾದನೆ/ಹಿಂಸಾಚಾರವು ಯಾವುದೇ ಜಾತಿ ಅಥವಾ ಧರ್ಮಕ್ಕೆ ಮಾರಕ. ಅದಕ್ಕಾಗಿಯೇ ನಾನು ಈ ಹೇಳಿಕೆ ಹಂಚಿಕೊಂಡಿದ್ದೇನೆ. ಎಲ್ಲೆ ಮತ್ತು ಹೇಗೆ ಸಾಧ್ಯವೋ ಅಲ್ಲೆಲ್ಲಾ ಶಾಂತಿಯ ಪರ ಧ್ವನಿ ಎತ್ತುತ್ತೇನೆ. ಗಾಜಾದಲ್ಲಿ ನಡೆಯುತ್ತಿರುವ ದಾಳಿಯನ್ನು ನಾನು ಯಾವಾಗಲೂ ಖಂಡಿಸುತ್ತೇನೆ. ಎಲ್ಲಿಯೇ ಆದರೂ, ಅಮಾಯಕರ ಮೇಲೆ ದಾಳಿ ನಡೆದಾಗ ಅದರ ವಿರುದ್ಧ ನಾನು ನಿಲ್ಲುವೆ. ಪ್ರತಿ ಮಾನವನ ಜೀವವೂ ಮುಖ್ಯ. ಪ್ರಾಣ ಕಳೆದುಕೊಂಡವರಿಗೆ ದೇವರು ಸದ್ಗತಿ ನೀಡಲಿ" ಎಂದು ಕೋರಿದ್ದಾರೆ.

ಹಸನ್​ ಅಲಿ ಪತ್ನಿಯಿಂದಲೂ ಬೆಂಬಲ:ಹಸನ್​ ಅಲಿ ಬಳಿಕ ಅವರ ಪತ್ನಿಯಿಂದಲೂ ರಿಯಾಸಿ ದಾಳಿಯನ್ನು ಟೀಕಿಸಲಾಗಿದೆ. ಅವರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರತದಲ್ಲಿ ನಡೆದ ಉಗ್ರ ದಾಳಿಯನ್ನು ಖಂಡಿಸಿದ್ದಾರೆ. ಈ ಹಿಂದೆ ಮಣಿಪುರದಲ್ಲಿ ನಡೆದ ಹಿಂಸೆಯ ವಿರುದ್ಧವೂ ಅವರು ಧ್ವನಿ ಎತ್ತಿದ್ದರು.

ಇದನ್ನೂ ಓದಿ:ರೈಲಿನಲ್ಲಿ ಜೈಪುರಕ್ಕೆ ತಲುಪಿದ ರಿಯಾಸಿ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ನಾಲ್ವರ ಮೃತದೇಹಗಳು - Dead bodies reach jaipur

ABOUT THE AUTHOR

...view details