ಕರ್ನಾಟಕ

karnataka

ETV Bharat / sports

ರಾಷ್ಟ್ರೀಯ ಕ್ರೀಡಾ ದಿನ: ಮೇಜರ್​ ಧ್ಯಾನ್​ ಚಂದ್​ ಪುತ್ಥಳಿ ಅನಾವರಣ ಮಾಡಿದ ಮಗ ಅಶೋಕ್​ ಕುಮಾರ್​ - National Sports Day - NATIONAL SPORTS DAY

ಆಗಸ್ಟ್​​ 29ರಂದು ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡೆಯಾಗಿ ಆಚರಣೆ ಮಾಡುವ ಮೂಲಕ ದೇಶಕ್ಕೆ ಅವರ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ.

olympian-ashok-kumar-unveils-major-dyan-chands-statue-on-national-sports-day
ಮೇಜರ್​ ಧ್ಯಾನ್​ ಚಂದ್​ ಪುತ್ಥಳಿ ಅನಾವರಣ (ANI)

By ANI

Published : Aug 29, 2024, 11:33 AM IST

ಜಬಲ್ಪುರ್​,ಮಧ್ಯಪ್ರದೇಶ: ರಾಷ್ಟ್ರೀಯ ಕ್ರೀಡಾ ದಿನದ ಹಿನ್ನೆಲೆಯಲ್ಲಿ ಹಾಕಿ ಮಾಂತ್ರಿಕ ಧ್ಯಾನ್​ ಚಂದ್​​ ಅವರ ಪುತ್ಥಳಿಯನ್ನು ಅವರ ಮಗ ಒಲಿಂಪಿಕ್​​ ಕ್ರೀಡಾಪಟು ಅಶೋಕ್​ ಕುಮಾರ್​ ಮಧ್ಯಪ್ರದೇಶದ ಜಬಲ್ಪುರ್​ನಲ್ಲಿ ಅನಾವರಣ ಮಾಡಿದ್ದಾರೆ.

ಹಾಕಿ ಪಿತಾಮಹ ಎಂದೇ ಗುರುತಿಸಿಕೊಂಡಿರುವ ಧ್ಯಾನ್​ ಚಂದ್​​ 1925 ರಿಂದ 1949ರವರೆಗೆ ಭಾರತದ ಹಾಕಿ ತಂಡವನ್ನು ಪ್ರತಿನಿಧಿಸಿದ್ದರು. 185 ಪಂದ್ಯದಲ್ಲಿ ಅವರು 1500 ಗೋಲ್​ಗಳನ್ನು ಗಳಿಸಿದ್ದಾರೆ. ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಅವರು ಸೆಂಟರ್​ ಫಾರ್ವಡ್​​ ಆಗಿ ಆಟವನ್ನು ಆಡಿದ್ದಾರೆ. 1928, 1932 ಮತ್ತು 1936ರಲ್ಲಿ ಅವರು ಒಲಿಂಪಿಕ್​​ ಚಿನ್ನದ ಪದಕವನ್ನು ಗಳಿಸಿದ್ದಾರೆ. ಅವರ ಈ ಸಾಧನೆಯನ್ನು ಗೌರವಿಸಿ 1956ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಗಸ್ಟ್​​ 29ರಂದು ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡೆಯಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾದಿನದಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಕೊಡುಗೆ ನೀಡಿರುವ ಅವರ ಸಾಧನೆಗಳನ್ನು ಗೌರವಿಸಲಾಗುತ್ತಿದೆ.

ತಮ್ಮ ತಂದೆ ಧ್ಯಾನ್​ ಚಂದ್​ ಅವರ ಪುತ್ಥಳಿ ಅನಾವರಣ ಮಾಡಿ ಸಂತಸ ವ್ಯಕ್ತಪಡಿಸಿದ ಅಶೋಕ್​ ಕುಮಾರ್​, ಅವರ ಗುಣಗಳು ಮತ್ತು ಸಾಮರ್ಥ್ಯಗಳು ದೇಶ ಮತ್ತು ಅದರ ಸ್ವಾಭಿಮಾನದ ಮೇಲೆ ಪ್ರಭಾವಬೀರಿದೆ. ಮಗನಾಗಿ ಇಂದು ಅವರ ಪುತ್ಥಳಿ ಅನಾವರಣಕ್ಕೆ ಅವಕಾಶ ಸಿಕ್ಕಿದೆ. ಭಾರತದಲ್ಲಿ ಹಾಕಿಯ ಹೊಸ ಸಂಸ್ಕೃತಿಯನ್ನು ಅವರು ಶುರು ಮಾಡಿದರು. ಆಟಗಾರನಾಗಿ, ಯೋಧನಾಗಿ, ನಾಗರಿಕನಾಗಿ ಹಾಗೂ ತಂದೆಯಾಗಿ ಹೊಸ ಮಾನದಂಡವನ್ನು ನಿಗದಿ ಪಡಿಸಿದರು. ಇದು ನನಗೆ ಹೆಮ್ಮೆಯ ಕ್ಷಣವಾಗಿದೆ. ಇದಕ್ಕಾಗಿ ಎಂಪಿಇ ವಿಭಾಗಕ್ಕೆ ಧನ್ಯವಾದ ತಿಳಿಸುತ್ತೇನೆ. ಇಲ್ಲಿಗೆ ಬರುವ ಮಕ್ಕಳಿಗೆ ಹೊಸ ದಿಕ್ಕು, ಸ್ಫೂರ್ತಿ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

ಫಿಟ್​ ಇಂಡಿಯಾದಲ್ಲಿ ಭಾಗಿಯಾಗಲು ಕರೆ: ಕೇಂದ್ರ ಯುವ, ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಆಗಸ್ಟ್​ 24ರಂದು ಮಾತನಾಡಿ, ರಾಷ್ಟ್ರೀಯ ಕ್ರೀಡಾ ದಿನದಂದು ಕನಿಷ್ಠ ಒಂದು ಗಂಟೆ ಹೊರಾಂಗಣ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ದೇಶದ ಜನರಿಗೆ ಕರೆ ನೀಡಿದ್ದರು. ಈ ಮೂಲಕ ಸರ್ಕಾರವು ದೇಶಾದ್ಯಂತ ದೈಹಿಕ ಸದೃಢತೆ ಮತ್ತು ಕ್ರೀಡಾ ಸಂಸ್ಕೃತಿ ಉತ್ತೇಜಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಈ ಕುರಿತು ಮಾತನಾಡಿದ ಸಚಿವರು, ಪ್ರಧಾನಿ ಅವರ ಕನಸು ಭಾರತವನ್ನು ಸದೃಢ ದೇಶವಾಗಿಸುವುದು. ಫಿಟ್​ ಇಂಡಿಯಾ ಅಭಿಯಾನ ಅವರ ಪರಿಕಲ್ಪನೆಯಾಗಿದ್ದು, ಇದು ದೇಶದ ಪ್ರತಿಯೊಬ್ಬರ ಕಾರ್ಯಕ್ರಮ. ಈ ನಿಟ್ಟಿನಲ್ಲಿ ಭಾರತದ ನಾಗರಿಕರು ರಾಷ್ಟ್ರೀಯ ಕ್ರೀಡಾ ದಿನದಂದು ಇದರ ಆಚರಣೆಯಲ್ಲಿ ತೊಡಗಬೇಕು ಎಂದು ನಾನು ಕರೆ ನೀಡುತ್ತೇನೆ ಎಂದಿದ್ದರು.

ಫಿಟ್​ ಇಂಡಿಯಾ ಅಭಿಯಾನದ ಮಹತ್ವ ಒತ್ತಿ ಹೇಳಿದ ಕೇಂದ್ರ ಸಚಿವರು, ಭಾರತದ ಪ್ರತಿಯೊಬ್ಬ ನಾಗರಿಕರು ಆರೋಗ್ಯಯುತ ಮತ್ತು ಕ್ರಿಯಾಶೀಲ ಜೀವನ ನಡೆಸುವುದು ಅಗತ್ಯ. ಯಾವುದಾದರೂ ಕ್ರೀಡೆ ಆಡಿ, ಸದೃಢವಾಗಿರಿ ಎಂದು ಕರೆ ನೀಡಿದ್ದರು.

ರಾಷ್ಟ್ರೀಯ ಕ್ರೀಡಾದಿನ ಕೇವಲ ನಮ್ಮ ಕ್ರೀಡಾ ಹೀರೋಗಳನ್ನು ಗೌರವಿಸಲು ಸಿಗುವ ಅವಕಾಶವಲ್ಲ. ಬದಲಾಗಿ ಕ್ರೀಡೆ ಹೇಗೆ ಆರೋಗ್ಯಯುತ ಜೀವನ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ಸ್ಮರಿಸಲಾಗುವುದು. ಈ ನಿಟ್ಟಿನಲ್ಲಿ ಜನರು ಸದೃಢ ಮತ್ತು ಕ್ರೀಯಾಶೀಲ ಭಾರತ ನಿರ್ಮಾಣದಲ್ಲಿ ಭಾಗಿಯಾಗಲು ಮುಂದಾಗುವಂತೆ ತಿಳಿಸಿದ್ದರು.

ಇದನ್ನೂ ಓದಿ: ರಾಷ್ಟ್ರೀಯ ಕ್ರೀಡಾ ದಿನ: ನೀವು ನೋಡಲೇಬೇಕಾದ ಕ್ರೀಡಾ ಸ್ಫೂರ್ತಿದಾಯಕ ಸಿನಿಮಾಗಳಿವು

ABOUT THE AUTHOR

...view details