ಕರ್ನಾಟಕ

karnataka

ETV Bharat / sports

ಪ್ಯಾರಾಲಿಂಪಿಕ್ಸ್ 2024: ಭಾರತದ ಖಾತೆಗೆ ಎರಡನೇ ಚಿನ್ನ; ಬ್ಯಾಡ್ಮಿಂಟನ್​ನಲ್ಲಿ ನಿತೇಶ್​​ ಕುಮಾರ್​ ಕಮಾಲ್​​ ​ - Nitesh Kumar Clinches Gold

ಪ್ಯಾರಿಸ್​ ಪ್ಯಾರಾಲಿಂಪಿಕ್ಸ್​ನಲ್ಲಿ ಇಂದು ಭಾರತದ ಸ್ಟಾರ್​ ಶಟ್ಲರ್​ ನಿತೇಶ್​ ಕುಮಾರ್ ಬ್ಯಾಡ್ಮಿಂಟನ್​ ಸಿಂಗಲ್ಸ್​ ಪಂದ್ಯದಲ್ಲಿ​ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ನಿತೇಶ್​ ಕುಮಾರ್​
ನಿತೇಶ್​ ಕುಮಾರ್​ (ANI)

By ETV Bharat Sports Team

Published : Sep 2, 2024, 5:14 PM IST

ಪ್ಯಾರಿಸ್​ (ಫ್ರಾನ್ಸ್​):ಪ್ಯಾರಿಸ್​ (ಫ್ರಾನ್ಸ್​): ಪ್ಯಾರಾಲಿಂಪಿಕ್ಸ್​ನಲ್ಲಿಂದು ಭಾರತದ ಖಾತೆಗೆ ಎರಡನೇ ಪದಕ ಸೇರ್ಪಡೆಗೊಂಡಿದೆ. ಸೋಮವಾರ ನಡೆದ ಪುರುಷರ ಸಿಂಗಲ್ಸ್​ SL3 ಬ್ಯಾಡ್ಮಿಂಟನ್​ ಈವೆಂಟ್​ನಲ್ಲಿ ಭಾರತದ ನಿತೇಶ್​ ಕುಮಾರ್​ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಈವೆಂಟ್‌ನ ಫೈನಲ್‌ನಲ್ಲಿ ನಿತೇಶ್​ ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರನ್ನು ಎದುರಿಸಿದ್ದರು. ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟು ಅಂತಿಮವಾಗಿ ನಿತೀಶ್ ಕುಮಾರ್, ಬೆಥೆಲ್​ ಅವರನ್ನು 2-1 ಅಂತರದಿಂದ ಮಣಿಸಿದರು. ಇದರೊಂದಿಗೆ ಭಾರತ ಪ್ಯಾರಾಲಿಂಪಿಕ್ಸ್​ನಲ್ಲಿ 9ನೇ ಪದಕ ಗೆದ್ದುಕೊಂಡು ಒಲಿಂಪಿಕ್ಸ್​ ದಾಖಲೆಯನ್ನು ಮುರಿದಿದೆ.

29 ವರ್ಷದ ನಿತೇಶ್​ ಕುಮಾರ್ ಮತ್ತು ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ನಡುವೆ ಫೈನಲ್​ ಪಂದ್ಯದಲ್ಲಿ ಕಠಿಣ ಪೈಪೋಟಿ ಏರ್ಪಟ್ಟಿತ್ತು. ಪಂದ್ಯದ ಮೊದಲ ಸೆಟ್ ನಿತೇಶ್ ಕುಮಾರ್ 21-14 ರಿಂದ ಗೆದ್ದುಕೊಂಡರು. ಅದೇ ವೇಳೆ ಎರಡನೇ ಸೆಟ್​ನಲ್ಲಿ ದಿಟ್ಟ ಪ್ರದರ್ಶನ ನೀಡಿದರೂ 18-21ರಿಂದ ಸೋಲನುಭವಿಸಬೇಕಾಯಿತು. ಒಂದು ಬಾರಿ 16-16 ರಿಂದ ಸೆಟ್​ ಸಮವಾಗಿದ್ದರಿಂದ ನಿತೀಶ್ ಕುಮಾರ್ ಹಿನ್ನಡೆ ಅನುಭವಿಸಿದರು. ಇದಾದ ಬಳಿಕ ಮೂರನೇ ಸೆಟ್‌ನಲ್ಲಿ ದಿಟ್ಟ ಪ್ರದರ್ಶನ ತೋರಿ ಪಂದ್ಯವನ್ನು 23-21ರಿಂದ ಗೆದ್ದು ಪದಕವನ್ನು ವಶಪಡೆಸಿಕೊಂಡರು.

ಚಿನ್ನ ಗೆದ್ದ ಎರಡನೇ ಷಟ್ಲರ್:ನಿತೇಶ್ ಕುಮಾರ್ ಪ್ರಸ್ತುತ ವಿಶ್ವದ ನಂಬರ್ 1 ಪ್ಯಾರಾ ಶಟ್ಲರ್​ ಆಗಿದ್ದಾರೆ. ಇದೀಗ ಈ ಚಿನ್ನದ ಪದಕದೊಂದಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಪ್ರಮೋದ್ ಭಗತ್ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದಿದ್ದರು.

ಇದನ್ನೂ ಓದಿ:ನನ್ನ ಮಗನ ವೃತ್ತಿಜೀವನ ಹಾಳು ಮಾಡಿದ ಧೋನಿಯನ್ನು ಎಂದಿಗೂ ಕ್ಷಮಿಸಲ್ಲ: ಮಾಜಿ ನಾಯಕನ ವಿರುದ್ಧ ಯುವಿ ತಂದೆ ಕಿಡಿ! - Yuvraj Singh father allegation

ABOUT THE AUTHOR

...view details