ಪ್ಯಾರಿಸ್ (ಫ್ರಾನ್ಸ್): ಭಾರತದ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಒಲಿಂಪಿಕ್ಸ್ನಿಂದ ಹೊರಬಿದ್ದಿದ್ದಾರೆ. ನಿಖತ್ ಜರೀನ್ ಪ್ಯಾರಿಸ್ ಒಲಿಂಪಿಕ್ನ ಮಹಿಳೆಯರ 50 ಕೆಜಿ ಸುತ್ತಿನ 16ನೇ ಪಂದ್ಯದಲ್ಲಿ ಚೀನಾದ ವು ಯು ವಿರುದ್ಧ 5-0 ಅಂತರದಿಂದ ಸೋಲನುಭವಿಸಿದರು. ಈ ಸೋಲಿನೊಂದಿಗೆ ಚೊಚ್ಚಲ ಒಲಿಂಪಿಕ್ನಲ್ಲಿ ಜರೀನ್ ಅಭಿಯಾನ ಅಂತ್ಯಗೊಂಡಿತು.
ಈ ಪಂದ್ಯದಲ್ಲಿ ಮೊದಲ ಶ್ರೇಯಾಂಕದ ಚೀನಾದ ವು ಯು ಆಕ್ರಮಣಕಾರಿ ರೀತಿಯಲ್ಲಿ ಆಟವನ್ನು ಪ್ರಾರಂಭಿಸಿದರು ಮತ್ತು ಮೊದಲ ಸುತ್ತಿನಲ್ಲಿಯೇ ಜರೀನ್ ಮೇಲೆ ಪ್ರಾಬಲ್ಯ ಸಾಧಿಸಿದರು. ಆದಾಗ್ಯೂ, ಎರಡು ಬಾರಿಯ ವಿಶ್ವ ಚಾಂಪಿಯನ್ ಭಾರತದ ನಿಖತ್ ಜರೀನ್ ಎರಡನೇ ಸುತ್ತಿನಲ್ಲಿ ಆರಂಭಿಕ ಹಂತದ ಪುನರಾಗಮನವನ್ನು ಮಾಡಿದರಾದರೂ ವು ಯು ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ.
ನಂತರ ಮೂರನೇ ಸುತ್ತು ಏಕಪಕ್ಷಿಯವಾಗಿ ಚೀನಾದ ಬಾಕ್ಸರ್ ವು ಯು ಪಾಪರವಾಯಿತು. ಪ್ರಸ್ತುತ 52 ಕೆಜಿ ವಿಶ್ವ ಚಾಂಪಿಯನ್ ಹಾಗೂ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಚೀನಾದ ವು ಯು ಈ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ. ಅವರು ತಮ್ಮ ಮೊದಲ ಒಲಿಂಪಿಕ್ ಪದಕವನ್ನು ಪಡೆಯಲು ಕೇವಲ ಒಂದು ಗೆಲುವಿನ ಅಂತರದಲ್ಲಿದ್ದಾರೆ.
ಈ ಸೋಲಿನ ಮೊದಲು, ಅರೆನಾ ಪ್ಯಾರಿಸ್ ನಾರ್ಡ್‌ನಲ್ಲಿ ನಡೆದ 32ನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಮ್ಯಾಕ್ಸಿ ಕ್ಯಾರಿನಾ ಕ್ಲೋಟ್ಜರ್ ಅವರನ್ನು ಸೋಲಿಸುವ ಮೂಲಕ ಭಾರತದ 28 ವರ್ಷದ ಜರೀನ್ 16ನೇ ಸುತ್ತಿಗೆ ಪ್ರವೇಶಿಸಿದ್ದರು.
ಕ್ವಾರ್ಟರ್ ಫೈನಲ್ಗೆ ನಿಶಾಂತ್:ಇದಕ್ಕೂ ಮೊದಲು ನಡೆದ ಪುರುಷರ ಬಾಕ್ಸಿಂಗ್ ಸ್ಫರ್ಧೆಯಲ್ಲಿ ಭಾರತದ ಸ್ಟಾರ್ ಬಾಕ್ಸರ್ ನಿಶಾಂತ್ ದೇವ್ ತಮ್ಮ ಅತ್ಯುತ್ತಮ ಪ್ರದರ್ಶನ ತೋರಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದಿದ್ದಾರೆ. ನಿಶಾಂತ್ ದೇವ್ ಪುರುಷರ 71 ಕೆಜಿ ವಿಭಾಗದ 16ನೇ ಸುತ್ತಿನ ಪಂದ್ಯದಲ್ಲಿ 7ನೇ ಶ್ರೇಯಾಂಕದ ಈಕ್ವೆಡಾರ್‌ನ ಜೋಸ್ ಗೇಬ್ರಿಯಲ್ ರೊಡ್ರಿಗಸ್ ಟೆನೊರಿಯೊ ಅವರನ್ನು 3-2 ಅಂತರದಿಂದ ಮಣಿಸಿದರು.
ನಿಶಾಂತ್ ಪಂದ್ಯದ ಆರಂಭದಿಂದಲೂ ಎದುರಾಳಿ ಮೇಲೆ ಪ್ರಾಬಲ್ಯ ಸಾಧಿಸಿದರು. ಮತ್ತು ಮೊದಲ ಸುತ್ತಿನಲ್ಲಿ 4 ತೀರ್ಪುಗಾರರಿಂದ 10 ಅಂಕಗಳನ್ನು ಪಡೆದರು. ಎರಡನೇ ಸುತ್ತಿನಲ್ಲೂ ಇದೇ ಟ್ರೆಂಡ್ ಮುಂದುವರೆಯಿತು. ಮೂರನೇ ಸುತ್ತಿನಲ್ಲಿ ಗೆದ್ದು ಜೋಸ್ ರೋಡ್ರಿಗಾಸ್ ಕಮ್ ಬ್ಯಾಕ್ ಮಾಡಿದರು. ಇದರಲ್ಲಿ ನಿಶಾಂತ್ ಕೇವಲ 1 ತೀರ್ಪುಗಾರರಿಂದ 10 ಅಂಕಗಳನ್ನು ಪಡೆದರು ಮತ್ತು ಅತ್ತು ಅಂತಿಮ ಸುತ್ತಿನ ರೋಚಕ ಪಂದ್ಯದಲ್ಲಿ ಜೋಸ್ ರೋಡ್ರಿಗಾಸ್ ಅನ್ನು ಮಣಿಸಿದ ನಿಶಾಂತ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಇದನ್ನೂ ಓದಿ:ಶೂಟಿಂಗ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕಂಚು ಗೆದ್ದ ಸ್ವಪ್ನಿಲ್ ಕುಸಾಲೆ - Third medal for India in Olympics