ಹೈದರಾಬಾದ್:ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಗಾತಿ ಹಿಮಾನಿ ಅವರನ್ನು ವರಿಸಿದ್ದಾಗಿ ನೀರಜ್ ಚೋಪ್ರಾ ಮದುವೆಯ ಮೊದಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾನುವಾರ ಹಂಚಿಕೊಂಡಿದ್ದಾರೆ. ಆದರೆ ಎರಡು ದಿನಗಳ ಹಿಂದೆ ಮದುವೆ ಆಗಿದ್ದು, ಎಲ್ಲಿ ಮತ್ತು ಯಾವಾಗ ಎಂಬುದು ತಿಳಿದು ಬಂದಿಲ್ಲ.
"ನನ್ನ ಕುಟುಂಬದೊಂದಿಗೆ ಜೀವನದ ಹೊಸ ಅಧ್ಯಾಯ ಆರಂಭಿಸಿದೆ " ಎಂದು ನೀರಜ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
"ಈ ಕ್ಷಣ ನಮ್ಮನ್ನು ಒಟ್ಟಿಗೆ ಸೇರಿಸಿದ ಪ್ರತಿ ಆಶೀರ್ವಾದಕ್ಕೂ ಕೃತಜ್ಞರಾಗಿರುತ್ತೇನೆ. ಪ್ರೀತಿಯಿಂದ ಬಂಧಿತರಾಗಿದ್ದು, ಯಾವಾಗಲೂ ಸಂತೋಷವಾಗಿರುತ್ತೇವೆ" ಎಂದು ಬಂಗಾರದ ಹುಡುಗ ನೀರಜ್ ಸಂತಸ ಹಂಚಿಕೊಂಡಿದ್ದಾರೆ. ಮದುವೆ ವಿಚಾರವನ್ನು ನೀರಜ್ ಬಹಿರಂಗಪಡಿಸಿರಲಿಲ್ಲ. ಆದರೆ ಎಕ್ಸ್ ಖಾತೆಯಲ್ಲಿ ಫೋಟೋ ಪೋಸ್ಟ್ ಮೂಲಕ ವಿವಾಹವಾದ ಸುದ್ದಿಯನ್ನು ನೀಡಿದ್ದಾರೆ.
ಭಾರತದಲ್ಲಿ ಎರಡು ದಿನಗಳ ಹಿಂದೆ ನೀರಜ್ ಮದುವೆ ನಡೆದಿದೆ. ಯಾವ ಸ್ಥಳದಲ್ಲಿ ವಿವಾಹವಾಗಿದೆ ಎಂದು ನನಗೆ ಹೇಳಲಾಗುವುದಿಲ್ಲ. ಸದ್ಯ ದಂಪತಿಗಳು ಹನಿಮೂನ್‌ಗೆ ತೆರಳಿದ್ದಾರೆ ಎಂದು ಹರಿಯಾಣದ ಪಾಣಿಪತ್ ಬಳಿಯ ಖಂದ್ರಾದಲ್ಲಿರುವ ತಮ್ಮ ಹಳ್ಳಿಯಿಂದ ಭೀಮ್ ಮಾಹಿತಿ ನೀಡಿದ್ದಾರೆ.