ನವದೆಹಲಿ:ಡೈಮೆಂಡ್ ಲೀಗ್ನಲ್ಲಿ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರನೀರಜ್ ಚೋಪ್ರಾ ಮತ್ತೊಮ್ಮೆ ನಿರಾಸೆ ಅನುಭವಿಸಿದ್ದಾರೆ. ಕೇವಲ ಒಂದು ಸೆಂಟಿ ಮೀಟರ್ನಿಂದ ಪ್ರಶಸ್ತಿ ವಂಚಿತರಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವಲ್ಲಿ ನೀರಜ್ ವಿಫಲರಾಗಿದ್ದರು. ಇದೀಗ ಡೈಮಂಡ್ ಲೀಗ್ನಲ್ಲೂ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ.
ನಿನ್ನೆ ರಾತ್ರಿ ಬ್ರಸೆಲ್ಸ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಕೇವಲ1 ಸೆಂ.ಮೀ ಅಂತರದಲ್ಲಿ ಟ್ರೋಫಿ ಗೆಲ್ಲುವುದನ್ನು ತಪ್ಪಿಸಿಕೊಂಡರು. ಈ ಅಂತಿಮ ಸ್ಪರ್ಧೆಯಲ್ಲಿ ಭಾರತದ ಅಗ್ರ ಜಾವೆಲಿನ್ ಎಸೆತಗಾರ ನೀರಜ್ 87.86 ಮೀಟರ್ ದೂರಕ್ಕೆ ಭರ್ಜಿ ಎಸೆದು ಎರಡನೇ ಸ್ಥಾನ ಪಡೆದರು. ಇದರೊಂದಿಗೆ ಅವರು ಸತತ ಎರಡನೇ ಬಾರಿಗೆ ಈ ಟೂರ್ನಿಯಲ್ಲಿ ವಿಜೇತರಾಗುವ ಅವಕಾಶವನ್ನು ಕಳೆದುಕೊಂಡರು.
ಗ್ರೆನೇಡಿಯನ್ ಜಾವೆಲಿನ್ ಎಸೆತಗಾರ ಆಂಡರ್ಸನ್ ಪೀಟರ್ಸ್ ಫೈನಲ್ ಹಣಾಹಣಿಯಲ್ಲಿ 87.87 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಡೈಮಂಡ್ ಲೀಗ್‌ನ ವಿಜೇತರಾದರು. ಪ್ಯಾರಿಸ್ ಒಲಿಂಪಿಕ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಪೀಟರ್ಸ್ ಕಂಚಿನ ಪದಕ ಗೆದ್ದಿದ್ದರು. ಇದರೊಂದಿಗೆ ಜರ್ಮನಿಯ ಜೂಲಿಯನ್ ವೆಬರ್ ಈ ಟೂರ್ನಿಯಲ್ಲಿ 85.97 ಮೀಟರ್ ಎಸೆದು ನೀರಜ್ ಚೋಪ್ರಾ ನಂತರ ಮೂರನೇ ಸ್ಥಾನ ಪಡೆದುಕೊಂಡರು.
ನೀರಜ್ ಚೋಪ್ರಾ ಹಿನ್ನಡೆಗೆ ಕಾರಣ ಏನು:ನೀರಜ್ ಚೋಪ್ರಾ ಕಳೆದ ಕೆಲ ತಿಂಗಳಿನಿಂದ ತೊಡೆಸಂದು ನೋವಿನಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವಲ್ಲಿ ವಿಫಲರಾಗಿದ್ದರು. ಇದೀಗ ಅದರ ಪರಿಣಾಮ ಡೈಮಂಡ್ ಲೀಗ್ ಮೇಲೂ ಬೀರಿದೆ. ಇದರ ಪರಿಣಾಮವಾಗಿ ಫೈನಲ್ ಸುತ್ತಿನಲ್ಲಿ ನೀರಜ್ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ನಲ್ಲಿ ದುಬಾರಿ ಬೆಲೆಯ ಬ್ಯಾಟ್ ಬಳಸಿದ ಆಟಗಾರರು ಇವರೇ ನೋಡಿ: ಇವುಗಳ ದರ ಕೇಳಿದ್ರೆ ಹೌಹಾರೋದು ಗ್ಯಾರಂಟಿ! - Expensive Bats Used By Cricketers