ಬೆಂಗಳೂರು: ಅತಿದೊಡ್ಡ ಅಂತಾರಾಷ್ಟ್ರೀಯ ವೃತ್ತಿಪರ ಬಾಕ್ಸಿಂಗ್ ಈವೆಂಟ್‌ಗಳ ಆಯೋಜನೆಗೆ ರಾಜಧಾನಿ ಬೆಂಗಳೂರು ಸಜ್ಜಾಗಿದೆ. ಕ್ರೌನ್ ಬಾಕ್ಸಿಂಗ್ ಪ್ರೊಮೋಷನ್ ಹಾಗೂ ಗ್ರಾಸ್‌ರೂಟ್ ಬಾಕ್ಸಿಂಗ್‌ನ ಸಹಭಾಗಿತ್ವದಲ್ಲಿ ನವೆಂಬರ್ 30ರಂದು ರಾತ್ರಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ವೈಟ್ ಹೌಸ್‌ನಲ್ಲಿ ಬಾಕ್ಸಿಂಗ್‌ಗೆ ವೇದಿಕೆ ಸಿದ್ಧವಾಗಿದೆ.
ಫೈಟ್ ನೈಟ್ ಎರಡು ಪ್ರತಿಷ್ಠಿತ ಶೀರ್ಷಿಕೆ ಪಂದ್ಯಗಳನ್ನು ಹೊಂದಿರಲಿದೆ. WBC ಯೂತ್ ವರ್ಲ್ಡ್ ಟೈಟಲ್ ಮತ್ತು WBC ಇಂಡಿಯಾ ಶೀರ್ಷಿಕೆ, ಉಗಾಂಡಾ, ಘಾನಾ, ಥಾಯ್ಲೆಂಡ್ ಮತ್ತು ಫಿಲಿಪ್ಪಿನ್ಸ್ ಸೇರಿದಂತೆ ವಿವಿಧ ದೇಶಗಳ ಸವಾಲುಗಳೊಂದಿಗೆ ಭಾರತದ ಸ್ಪರ್ಧಿಗಳು ಸೆಣಸಾಡಲಿದ್ದಾರೆ.
ಬಾಕ್ಸಿಂಗ್ ಪಂದ್ಯ ಆಯೋಜಕರು (ETV Bharat) ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಪ್ರತಿಭೆಗಳ ಕಾದಾಟ, ಜಾಗತಿಕ ಬಾಕ್ಸಿಂಗ್ ಸಮುದಾಯದ ಗಮನ ಸೆಳೆಯುವ ನಿರೀಕ್ಷೆಯಿದೆ. ಮುಖ್ಯ ಈವೆಂಟ್ನಲ್ಲಿ ಚಾಂಪಿಯನ್ ಆದ ಬಾಕ್ಸರ್ಗಳಿಗೆ 5,000 ಡಾಲರ್ (4,20,602 ರೂಪಾಯಿ) ನಗದು ಬಹುಮಾನ ಪಡೆಯಲಿದ್ದಾರೆ.
WBC ಯೂತ್ ವರ್ಲ್ಡ್ ಟೈಟಲ್, 18-23 ವಯಸ್ಸಿನ ಯುವ ಬಾಕ್ಸರ್ಗಳಿಗೆ ಪ್ರತಿಷ್ಠಿತ ವೇದಿಕೆ ಕಲ್ಪಿಸುತ್ತದೆ. ಭವಿಷ್ಯದ ವಿಶ್ವ ಚಾಂಪಿಯನ್‌ಶಿಪ್‌ಗಳಿಗೆ ಅವರ ಸಾಮರ್ಥ್ಯ ಸಾಬೀತಿಗೆ ಇದು ಉತ್ತಮ ವೇದಿಕೆ ಆಗಿದೆ. WBC ಇಂಡಿಯಾ ಟೈಟಲ್ ದೇಶದ ಉನ್ನತ ಬಾಕ್ಸಿಂಗ್ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗಲಿದೆ. ಈವೆಂಟ್‌ನ ಯಶಸ್ಸು ಟಿಕೆಟ್ ಮಾರಾಟ ಮತ್ತು ಪ್ರಾಯೋಜಕತ್ವದ ಮೇಲೆ ಅವಲಂಬಿತವಾಗಿರಲಿದೆ ಎಂದು ಸಂಘಟಕರು ಆಶಾವಾದ ವ್ಯಕ್ತಪಡಿಸಿದ್ದಾರೆ.
ಬಾಕ್ಸಿಂಗ್ ಆಟಗಾರ ರಿತೇಶ್ ಸಿಂಗ್ (ETV Bharat) 2025ರ ಆರಂಭದ ವೇಳೆಗೆ ಹೊಸ ಆಡಳಿತ ಮಂಡಳಿಯನ್ನು ಸ್ಥಾಪಿಸದ ಹೊರತು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಿಂದ ಬಾಕ್ಸಿಂಗ್ ತೆಗೆದುಹಾಕುವುದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಇತ್ತೀಚೆಗೆ ಘೋಷಿಸಿತ್ತು. ಮತ್ತು ಆ ನಿರ್ಧಾರವು ಬಾಕ್ಸಿಂಗ್ ಸಮುದಾಯದಲ್ಲಿ ಕಳವಳ ಉಂಟುಮಾಡಿದೆ, ಅನೇಕ ಹವ್ಯಾಸಿ ಕ್ರೀಡಾಪಟುಗಳು ವೃತ್ತಿಪರ ಬಾಕ್ಸಿಂಗ್ ಕಡೆ ಮುಖಮಾಡಲು ಪ್ರೇರೇಪಿಸಿದೆ.
ಕ್ರೌನ್ ಬಾಕ್ಸಿಂಗ್ ಸಂಸ್ಥಾಪಕ ಪಯಾನ್ ಹೊನಾರಿ ಮತ್ತು ಗ್ರಾಸ್‌ರೂಟ್ ಬಾಕ್ಸಿಂಗ್ ಸಂಸ್ಥಾಪಕ ಮುಜ್ತಬಾ ಕಮಾಲ್ ಮಾತನಾಡಿ, ''ವೃತ್ತಿಪರ ಬಾಕ್ಸಿಂಗ್ ಕೌಶಲ್ಯ ಅಭಿವೃದ್ಧಿಗೆ ಪ್ರಮುಖವಾಗಿದ್ದರೂ, ಅದೇ ಮಟ್ಟದ ಗಮನ ಮತ್ತು ಆದಾಯವನ್ನು ಸೆಳೆಯಲು ಸಾಮಾನ್ಯವಾಗಿ ಹೆಣಗಾಡುತ್ತಿದೆ. ಈ ಈವೆಂಟ್ ಪ್ರೇಕ್ಷಕರನ್ನು ಆಕರ್ಷಿಸಲು ಮತ್ತು ಆದಾಯವನ್ನು ಗಳಿಸಲು ವೃತ್ತಿಪರ ಬಾಕ್ಸಿಂಗ್‌ನ ಸಾಮರ್ಥ್ಯವನ್ನು ಪ್ರದರ್ಶಿಸುವ ಅಂತರ ಕಡಿಮೆ ಮಾಡಲು ನಿರ್ಣಾಯಕ ಅವಕಾಶವನ್ನು ಪ್ರತಿನಿಧಿಸಲಿದೆ'' ಎಂದರು
ಪಂದ್ಯಗಳ ವೀಕ್ಷಣೆಗೆ 499ರೂ ಟಿಕೆಟ್‌ನ ಬೆಲೆ ನಿಗದಿಯಾಗಿದ್ದು, 700 ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ಗಮನಾರ್ಹ ಆದಾಯವನ್ನು ಗಳಿಸುವ ನಿರೀಕ್ಷೆಯನ್ನ ಆಯೋಜಕರು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಭಿಮಾನಿಗಳು ಲೈವ್ ಸ್ಟ್ರೀಮ್ (ಪೇ ಫಾರ್ ವ್ಯೂ) ಸಹ ವೀಕ್ಷಿಸಲು ವ್ಯವಸ್ಥೆ ಇರಲಿದೆ ಎಂದು ಆಯೋಜಕರು ಮಾಹಿತಿ ನೀಡಿದರು.
ಇದನ್ನೂ ಓದಿ:ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾದ ಮುಂದಿನ ಕ್ಯಾಪ್ಟನ್ ಇವರೇ: ಸಿಕ್ಕಿತು ದೊಡ್ಡ ಸುಳಿವು!