ಕರ್ನಾಟಕ

karnataka

ETV Bharat / sports

₹16 ಕೋಟಿಗೆ ರಿಟೇನ್​ ಆದ, IPL ಕಪ್​ ಗೆದ್ದಿದ್ದ ನಾಯಕ ಮೊದಲ ಪಂದ್ಯದಿಂದಲೇ BAN!

ಈ ಬಾರಿ​ ₹16 ಕೋಟಿಗೆ ರಿಟೇನ್​ ಆಗಿರುವ ಸ್ಟಾರ್​ ಆಟಗಾರ ಮೊದಲ ಪಂದ್ಯದಿಂದಲೇ ಬ್ಯಾನ್​ ಆಗಿದ್ದಾರೆ.

HARDIK PANDYA IPL 2025  HARDIK PANDYA FIRST MATCH BAN  MUMBAI INDIANS RETAINED PLAYERS  MUMBAI INDIANS TEAM 2025
ಸಾಂದರ್ಭಿಕ ಚಿತ್ರ (Getty Image)

By ETV Bharat Sports Team

Published : Dec 3, 2024, 7:21 PM IST

Star Cricketer Ban For 1st Match Of IPL:ಇಂಡಿಯನ್​ ಪ್ರೀಮಿಯರ್​ ಲೀಗ್​ (IPL) 2025ರ ಭಾಗವಾಗಿ ಇತ್ತೀಚೆಗೆ ನಡೆದಿದ್ದ ಮೆಗಾ ಹರಾಜಿನಲ್ಲಿ ಎಲ್ಲಾ ತಂಡಗಳು ಉತ್ತಮ ಆಟಗರಾರನ್ನು ಖರೀದಿಸಿ ಬಲಿಷ್ಠ ತಂಡಗಳನ್ನು ಕಟ್ಟಿಕೊಂಡಿವೆ. ಇದೀಗ ಐಪಿಎಲ್​ ತಯಾರಿಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದರ ನಡುವೆಯೇ ಸ್ಟಾರ್​ ಆಟಗಾರನಿಗೆ ಮೊದಲ ಪಂದ್ಯದಿಂದ ನಿಷೇಧಿಸಲಾಗಿದೆ.

ಈ ಸ್ಟಾರ್​ ಆಟಗಾರ ತಮ್ಮ ಚೊಚ್ಚಲ ನಾಯಕತ್ವದಲ್ಲೇ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿ ಯಶಸ್ವಿ ನಾಯಕರ ಪಟ್ಟಿಗೆ ಸೇರಿದ್ದರು. ಇದಾದ ಬಳಿಕ ಮುಂಬೈ ಇಂಡಿಯನ್ಸ್ ಮರಳಿ​ ತಂಡಕ್ಕೆ ಕರೆದುಕೊಂಡು ಬಂದು ನಾಯಕತ್ವ ಪಟ್ಟವನ್ನು ನೀಡಿತ್ತು. ಹೌದು, ಇದೀಗ ಹೇಳುತ್ತಿರುವುದು ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅವರ ಬಗ್ಗೆ.

ಹಾರ್ದಿಕ್​ ಪಾಂಡ್ಯ (ANI)

ಕಳೆದ ವರ್ಷ ಹಾರ್ದಿಕ್​ ಅವರನ್ನು ಗುಜರಾತ್​ ಟೈಟಾನ್ಸ್​ನಿಂದ ತಂಡಕ್ಕೆ ವಾಪ್ಸಿ ಮಾಡಿಕೊಂಡಿದ್ದ ಮುಂಬೈ ಇಂಡಿಯನ್ಸ್​ ಪಾಂಡ್ಯಗೆ ನಾಯಕತ್ವ ನೀಡಿತ್ತು. ಆದರೆ ಇವರ ನಾಯಕತ್ವದಲ್ಲಿ ತಂಡ ಹೀನಾಯ ಪ್ರದರ್ಶನ ತೋರಿ ಕನಿಷ್ಠ ಪ್ಲೇ ಆಫ್​ಗೂ ಬಾರದೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಲುಪಿತ್ತು.

ಆದರೂ ಹಾರ್ದಿಕ್​ ಅವರನ್ನು ತಂಡದಿಂದ ಕೈಬಿಡದ ಮುಂಬೈ ಈಬಾರಿ ₹16 ಕೋಟಿ ಕೊಟ್ಟು ತಂಡದಲ್ಲೇ ಉಳಿಸಿಕೊಂಡಿದೆ. ಆದರೆ ಐಪಿಎಲ್​ ಆರಂಭಕ್ಕೂ ಮುನ್ನವೇ ಮುಂಬೈಗೆ ತಲೆ ಬಿಸಿ ಶುರವಾಗಿದೆ. ಇದಕ್ಕೆ ಕಾರಣ ಮೊದಲ ಪಂದ್ಯಕ್ಕೆ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅವರನ್ನು ನಿಷೇಧಿಸಲಾಗಿದೆ.

ನಿಷೇಧಕ್ಕೇನು ಕಾರಣ?ಕಳೆದ ವರ್ಷ ಮುಂಬೈ ಇಂಡಿಯನ್ಸ್​ ನಾಯಕತ್ವ ವಹಿಸಿಕೊಂಡಿದ್ದ ಹಾರ್ದಿಕ್​ ಪಾಂಡ್ಯ ತಂಡವನ್ನು ಚಾಂಪಿಯನ್​ ಪಟ್ಟಕ್ಕೆ ಕೊಂಡೊಯ್ಯುವಲ್ಲಿ ವಿಫಲರಾಗಿದ್ದರು. ಆದರೆ ಲಕ್ನೋ ವಿರುದ್ಧ ನಡೆದಿದ್ದ ಮುಂಬೈ ಇಂಡಿಯನ್ಸ್​ನ ಕೊನೆಯ ಪಂದ್ಯದಲ್ಲಿ ತಂಡ ಮಾಡಿದ ಕೆಲ ತಪ್ಪುಗಳಿಂದಾಗಿ ಹಾರ್ದಿಕ್​ ಪಾಂಡ್ಯ ಮತ್ತು ಇಡೀ ತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸುಲ್ಲಿ ವಿಫಲವಾಗಿತ್ತು. ಇದರಿಂದಾಗಿ 30 ಲಕ್ಷ ರೂ. ದಂಡ ಸಹಿತ ನಾಯಕ ಹಾರ್ದಿಕ್ ಪಾಂಡ್ಯಗೆ ಮುಂದಿನ ಒಂದು ಪಂದ್ಯದಿಂದ ನಿಷೇಧಿಸಿ ಆದೇಶಿಸಲಾಗಿತ್ತು. ಆದರೆ ಮುಂಬೈ ಇಂಡಿಯನ್ಸ್​ಗೆ ಇದೇ ಕೊನೆಯ ಪಂದ್ಯವಾಗಿದ್ದರಿಂದ ಐಪಿಎಲ್ 2025ರ ಮೊದಲ ಪಂದ್ಯದಿಂದ ಪಾಂಡ್ಯ ಹೊರಗುಳಿಯಲಿದ್ದಾರೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಕೂಡ ನಿಷೇಧಕ್ಕೊಳಗಾಗಿ ಆರ್‌ಸಿಬಿ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.

ಇದನ್ನೂ ಓದಿ:ಶರವೇಗದ ಶತಕ ಸಿಡಿಸಿ ಟಿ20ಯಲ್ಲಿ ವಿಶ್ವದಾಖಲೆ ಬರೆದ ಐಪಿಎಲ್​ Unsold ಬ್ಯಾಟರ್​

ABOUT THE AUTHOR

...view details