ಪ್ಯಾರಿಸ್: ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನಾ ಮಹಿಳೆಯರ 57 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ಲಿ ಕ್ವಾನ್ ಅವರೊಂದಿಗೆ ಪೈಪೋಟಿ ನಡೆಸಿ ಸೋಲನುಭವಿಸಿದರು. ಚೀನಾದ ಆಟಗಾರ್ತಿ 4-1 ಅಂತರದಿಂದ ಭಾರತೀಯ ಬಾಕ್ಸರ್ ವಿರುದ್ಧ ಗೆಲುವು ಸಾಧಿಸಿದರು. ಇದರೊಂದಿಗೆ ಲೊವ್ಲಿನಾ ಬೊರ್ಗೊಹೆ ಅವರ ಒಲಿಂಪಿಕ್ ಅಭಿಯಾನವು ಕೊನೆಗೊಂಡಿತು.
ಬಾಕ್ಸಿಂಗ್ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಲೊವ್ಲಿನಾ ಬೊರ್ಗೊಹೆನಾಗೆ ಸೋಲು - paris olympics 2024 - PARIS OLYMPICS 2024
ಒಲಿಂಪಿಕ್ಸ್ನ ಬಾಕ್ಸಿಂಗ್ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಲೊವ್ಲಿನಾ ಬೊರ್ಗೊಹೆನಾ ಸೋಲನುಭವಿಸಿದ್ದಾರೆ.
ಬಾಕ್ಸಿಂಗ್ನಲ್ಲಿ ಲೊವ್ಲಿನಾ ಬೊರ್ಗೊಹೆನಾಗೆ ಸೋಲು (AP)
Published : Aug 4, 2024, 4:54 PM IST
|Updated : Aug 4, 2024, 5:19 PM IST
ಮಹಿಳೆಯರ 75 ಕೆಜಿ ವಿಭಾಗದ 16ರ ಸುತ್ತಿನ ಪಂದ್ಯದಲ್ಲಿ ನಾರ್ವೆಯ ಸುನ್ನಿವಾ ಹಾಫ್‌ಸ್ಟೆಡ್ ಅವರನ್ನು ಸೋಲಿಸುವ ಮೂಲಕ ಲೊವ್ಲಿನಾ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದರು. ಈ ಹಿಂದೆ 2020ರ ಟೋಕಿಯೊ ಒಲಿಂಪಿಕ್ನಲ್ಲಿ ಭಾರತಕ್ಕಾಗಿ ಕಂಚಿನ ಪದಕ ಗೆದ್ದಿದ್ದರು. ಈ ಬಾರಿಯೂ ಪದಕದ ನಿರೀಕ್ಷೆಯಲ್ಲಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ.
ಇದನ್ನೂ ಓದಿ:ಹಾಕಿ ಕ್ವಾರ್ಟರ್ ಫೈನಲ್ನಲ್ಲಿ ಬ್ರಿಟನ್ ಮಣಿಸಿ ಗೆದ್ದ ಭಾರತ: ಸೆಮಿ ಫೈನಲ್ ಪ್ರವೇಶ - paris olympics 2024
Last Updated : Aug 4, 2024, 5:19 PM IST