ಅಹಮದಾಬಾದ್:ಟೂರ್ನಿಯ ಬಲಿಷ್ಠ ತಂಡವಾಗಿರುವ ಕೋಲ್ಕತ್ತಾ ನೈಟ್ ರೈಡರ್ಸ್, ನಿರೀಕ್ಷೆಯಂತೆ ಫೈನಲ್ ತಲುಪಿದೆ. ಮೊದಲ ಕ್ವಾಲಿಫೈಯರ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿ ಸುತ್ತು ಪ್ರವೇಶಿಸಿದೆ.
ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಕೆಕೆಆರ್, ಮೊದಲ ಕ್ವಾಲಿಫೈಯರ್ನಲ್ಲೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡಿತು. ಹೈದರಾಬಾದ್ ನೀಡಿದ್ದ 159 ರನ್ಗಳ ಸಾಧಾರಣ ಗುರಿಯನ್ನು ಶ್ರೇಯಸ್ ಅಯ್ಯರ್ ಪಡೆ 13.4 ಓವರ್ಗಳಲ್ಲಿ 164 ಮುಟ್ಟಿ ಫೈನಲ್ ಟಿಕೆಟ್ ಖಾತ್ರಿ ಪಡಿಸಿಕೊಂಡಿತು.
ವೆಂಕಟೇಶ್ ಅಯ್ಯರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್ ಮುಂದೆ ಹೈದರಾಬಾದ್ ಬೌಲಿಂಗ್ ಪಡೆ ಧೂಳೀಪಟವಾಯಿತು. ವೆಂಕಟೇಶ್ 28 ಎಸೆತಗಳಲ್ಲಿ 51, ಶ್ರೇಯಸ್ 24 ಎಸೆತಗಳಲ್ಲಿ 58 ರನ್ ಗಳಿಸಿ ಔಟಾಗದೇ ಉಳಿದರು. ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ 23, ಸುನಿಲ್ ನರೈನ್ 21 ರನ್ ಮಾಡಿದರು.
ಸನ್ಗಿದೆ ಮತ್ತೊಂದು ಚಾನ್ಸ್:ಮೊದಲ ಕ್ವಾಲಿಫೈಯರ್ನಲ್ಲಿ ಸೋತರೂ ಸನ್ರೈಸರ್ಸ್ ಹೈದರಾಬಾದ್ಗೆ ಇನ್ನೊಂದು ಅವಕಾಶವಿದೆ. ಎರಡನೇ ಕ್ವಾಲಿಫೈಯರ್ನಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ಆಡಲಿದೆ. ಅಲ್ಲಿ ಗೆದ್ದವರು ನೇರವಾಗಿ ಫೈನಲ್ಗೆ ಪ್ರ್ರವೇಶಿಸಲಿದ್ದಾರೆ.
ಇದನ್ನೂ ಓದಿ:'ದೇವರ ಪ್ಲಾನ್ ಬೇಬಿ': ಯಶ್ ದಯಾಳ್ ಅದ್ಭುತ ಬೌಲಿಂಗ್ಗೆ ರಿಂಕು ಸಿಂಗ್ ಸೆಲ್ಯೂಟ್ - Rinku Singh Post on Yash Dayal