IPL Mega Auction: ಎರಡನೇ ದಿನದ IPL ಹರಾಜು ಪ್ರಕ್ರಿಯೆ ಆರಂಭವಾಗಿದ್ದು ಆರಂಭದಲ್ಲೇ ನಾಲ್ವರು ಆಟಗಾರರು ಅನ್ಸೋಲ್ಡ್ ಆಗಿದ್ದಾರೆ. ಅನ್ಸೋಲ್ಡ್ ಆದ ಆಟಗಾರರ ಪಟ್ಟಿಯಲ್ಲಿ ಕೆಲ ಸ್ಟಾರ್ ಆಟಗಾರರು ಇದ್ದು ಅಚ್ಚರಿ ಮೂಡಿಸಿದೆ. ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸ್, ಗ್ಲೆನ್ ಫಿಲಿಪ್ಸ್, ಕೇಶವ್ ಮಹರಾಜ್, ಭಾರತದ ಅಜಿಂಕ್ಯಾ ರಹಾನೆ, ಶಾರ್ದೂಲ್ ಠಾಕೂರ್ ಅನ್ಸೋಲ್ಡ್, ಫೃಥ್ವಿ ಶಾ ಅನ್ಸೋಲ್ಡ್ ಆಗಿದ್ದಾರೆ. ಇವರೊಂದಿಗೆ ಕರ್ನಾಟಕದ ಸ್ಟಾರ್ ಆಟಗಾರನೂ ಕೂಡು ಅನ್ಸೋಲ್ಡ್ ಲಿಸ್ಟ್ಗೆ ಸೇರ್ಪಡೆ ಗೊಂಡಿದ್ದಾರೆ.
ಯಾರೂ ಖರೀದಿಸಲು ಮುಂದೆ ಬರಲೇ ಇಲ್ಲ: ಈ ಆಟಗಾರ ಒಟ್ಟು 121 ಐಪಿಎಲ್ ಪಂದ್ಯಗಳನ್ನು ಆಡಿದ್ದು ಇದರಲ್ಲಿ 2,665 ರನ್ ಕಲೆಹಾಕಿದ್ದಾರೆ. ಈ ಅವಧಿಯಲ್ಲಿ 1 ಶತಕ ಮತ್ತು 13 ಅರ್ಧಶತಕ ಸಿಡಿಸಿದ್ದಾರೆ. 106 ಹೈಸ್ಕೋರ್ ಆಗಿದೆ. ಇಷ್ಟೆಲ್ಲ ಅನುಭವ ಹೊಂದಿರುವ ಇವರು ಯಾವುದೇ ತಂಡಕ್ಕೆ ಸೇರ್ಪಡೆಯಾಗಿಲ್ಲ. ಹೌದು ನಾವು ಹೇಳುತ್ತಿರುವುದು ಕರ್ನಾಟಕದ ಸ್ಟಾರ್ ಆಟಗಾರ ಮಾಯಾಂಕ್ ಅಗರ್ವಾಲ್ ಕುರಿತು. ₹1 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಇವರನ್ನು ಯಾವುದೇ ಫ್ರಾಂಚೈಸಿಗಳು, ಹರಾಜಿನಲ್ಲಿ ಖರೀದಿಸಲು ಮುಂದೆ ಬರಲಿಲ್ಲ. ಈ ಹಿನ್ನೆಲೆ ಇವರು ಅನ್ಸೋಲ್ಡ್ ಆಗಿದ್ದಾರೆ.