ನವದೆಹಲಿ:ದೇಶೀಯ ಕ್ರಿಕೆಟ್ ಬದಲಿಗೆ ಐಪಿಎಲ್‌ಗೆ ಹೆಚ್ಚಿನ ಆದ್ಯತೆ ನೀಡಿದ ಹಿನ್ನೆಲೆಯಲ್ಲಿ ಈ ವರ್ಷದ ಬಿಸಿಸಿಐ ಕೇಂದ್ರೀಯ ಗುತ್ತಿಗೆಯಿಂದ ಕೈಬಿಡಲ್ಪಟ್ಟಿದ್ದ ಇಶಾನ್ ಕಿಶನ್ ಭಾರತ ಎ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ.
ಈ ಋತುವಿನಲ್ಲಿ ದೇಶೀಯ ಕ್ರಿಕೆಟ್‌ಗೆ ಹಿಂದಿರುಗಿದ್ದ ಕಿಶನ್, ಜಾರ್ಖಂಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸದ್ಯದಲ್ಲೇ ಆಸ್ಟ್ರೇಲಿಯಾ ಎ ವಿರುದ್ಧದ ಭಾರತ ಎ ತಂಡವು ಎರಡು ನಾಲ್ಕು ದಿನಗಳ ಟೆಸ್ಟ್‌ಗಳು ಮತ್ತು ಹಿರಿಯರ ತಂಡದೊಂದಿಗೆ ಪಂದ್ಯವೊಂದನ್ನು ಆಡಲಿದ್ದಾರೆ. ಎರಡೂ ಟೆಸ್ಟ್ ಪಂದ್ಯಗಳು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಅಕ್ಟೋಬರ್ 31ರಿಂದ ನವೆಂಬರ್ 3ರವರೆಗೆ ಹಾಗೂ ಬಳಿಕ ನವೆಂಬರ್ 7ರಿಂದ 10ರವರೆಗೆ ನಡೆಯಲಿವೆ.
ಇದನ್ನೂ ಓದಿ:ಟೆಸ್ಟ್ ಕ್ರಿಕೆಟ್ನಲ್ಲಿ 9,000 ರನ್ ಪೂರ್ಣಗೊಳಿಸಿದ ಕೊಹ್ಲಿ; ಈ ಸಾಧನೆ ಮಾಡಿದ 4ನೇ ಭಾರತೀಯ ಬ್ಯಾಟರ್
ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ ಇನ್ನೂ ಎ ತಂಡವನ್ನು ಪ್ರಕಟಿಸದಿದ್ದರೂ ಕೂಡ ರುತುರಾಜ್ ಗಾಯಕ್ವಾಡ್ ಅಥವಾ ಅಭಿಮನ್ಯು ಈಶ್ವರನ್ ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ. ಇತ್ತೀಚೆಗೆ ತಾವಾಡಿದ ನಾಲ್ಕು ಪ್ರಥಮ ದರ್ಜೆ ಪಂದ್ಯಗಳಲ್ಲಿ ನಾಲ್ಕು ಶತಕಗಳನ್ನು ಗಳಿಸಿರುವ ಅಭಿಮನ್ಯು ಈಶ್ವರನ್ ಅವರನ್ನು ಗವಾಸ್ಕರ್ ಬಾರ್ಡರ್ ಟ್ರೋಫಿಗೆ ಭಾರತ ತಂಡದಲ್ಲಿ ಬ್ಯಾಕ್ - ಅಪ್ ಆರಂಭಿಕ ಆಟಗಾರನಾಗಿ ಸೇರಿಸಿಕೊಳ್ಳುವ ಸಾಧ್ಯತೆಗಳಿವೆ. ಯಾಕೆಂದರೆ, ನಾಯಕ ರೋಹಿತ್ ಶರ್ಮಾ ವೈಯಕ್ತಿಕ ಕಾರಣಗಳಿಂದಾಗಿ ಈ ಸರಣಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ಒಂದರಲ್ಲಿ ವಿರಾಮ ತೆಗೆದುಕೊಳ್ಳಲಿದ್ದಾರೆ. ಅಲ್ಲದೇ, ಭಾರತ ಎ ತಂಡದಲ್ಲಿ ಬಂಗಾಳದ ವೇಗಿ ಮುಖೇಶ್ ಕುಮಾರ್ ಮತ್ತು ಕೀಪರ್-ಬ್ಯಾಟರ್ ಅಭಿಷೇಕ್ ಪೊರೆಲ್ ಸ್ಥಾನ ಪಡೆಯುವ ನಿರೀಕ್ಷೆ ಇದೆ.
ಇದನ್ನೂ ಓದಿ:ಮುಂಬೈ ತೊರೆದು ಆರ್ಸಿಬಿ ಸೇರ್ತಾರಾ ಸ್ಪೋಟಕ ಬ್ಯಾಟರ್?: ಇವರು ಬಂದ್ರೆ 'ಈ ಸಲ್ ಕಪ್ ನಮ್ದೆ'!
ಆಸ್ಟ್ರೇಲಿಯಾ ಪ್ರವಾಸಕ್ಕೆ ಸಂಭಾವ್ಯ ಭಾರತ ಎ ತಂಡ: ರುತುರಾಜ್ ಗಾಯಕ್‌ವಾಡ್, ಅಭಿಮನ್ಯು ಈಶ್ವರನ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ಬಿ ಇಂದ್ರಜಿತ್, ಅಭಿಷೇಕ್ ಪೊರೆಲ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ಮುಖೇಶ್ ಕುಮಾರ್, ರಿಕಿ ಭುಯಿ, ನಿತೀಶ್ ಕುಮಾರ್ ರೆಡ್ಡಿ, ಮನವ್ ಸುತಾರ್, ನವದೀಪ್ ಸೈನಿ, ಖಲೀಲ್ ಅಹ್ಮದ್, ತನುಷ್ ಕೋಟ್ಯಾನ್, ಯಶ್ ದಯಾಳ್.
ಇದನ್ನೂ ಓದಿ:ಕೇವಲ 3 ಓವರ್ಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ಬರೆದವರು ಡಾನ್ ಬ್ರಾಡ್ಮನ್! ಈ ದಾಖಲೆ ಮುರಿಯಲು ಸಾಧ್ಯವೇ?