ಕರ್ನಾಟಕ

karnataka

ETV Bharat / sports

₹1.3 ಲಕ್ಷ ಕೋಟಿ ರೂ ದಾಟಿದ IPL ಬ್ರಾಂಡ್ ವ್ಯಾಲ್ಯೂ​: RCB ಮೌಲ್ಯ ಎಷ್ಟು? - IPL BRAND VALUE

ಇಂಡಿಯನ್​ ಪ್ರೀಮಿಯರ್​ ಲೀಗ್​ನ ಬ್ರಾಂಡ್​ ವ್ಯಾಲ್ಯೂ ಹೆಚ್ಚಳವಾಗಿದ್ದು, 12 ಬಿಲಿಯನ್​ ಡಾಲರ್​ಗೆ ತಲುಪಿದೆ.

IPL BRAND VALUE INDIAN RUPEE  IPL TEAMS BRAND VALUE  INDIAN PREMIER LEAGUE  IPL AUCTION 2025
IPL Trophy (ETV Bharat File Photo)

By ETV Bharat Sports Team

Published : Dec 7, 2024, 10:57 AM IST

IPL Brand Value: ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ಎನಿಸಿಕೊಂಡಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ (IPL)ನ ಬ್ರಾಂಡ್ ಮೌಲ್ಯವು ಕೆಲ ವರ್ಷಗಳಿಂದ ಗಮನಾರ್ಹವಾಗಿ ಹೆಚ್ಚಳವಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬ್ರಾಂಡ್ ಮೌಲ್ಯ ಶೇಕಡಾ 13ರಷ್ಟು ಹೆಚ್ಚಳವಾಗಿದ್ದು, ಒಟ್ಟಾರೆ 12 ಬಿಲಿಯನ್‌ ಡಾಲರ್​ ತಲುಪಿದೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ ಬರೋಬ್ಬರಿ ರೂ.1.01 ಲಕ್ಷ ಕೋಟಿ ಆಗಿದೆ. ಕಳೆದ ವರ್ಷ ಐಪಿಎಲ್ ಬ್ರಾಂಡ್ ಮೌಲ್ಯ 10.7 ಬಿಲಿಯನ್ ಡಾಲರ್ ಆಗಿತ್ತು.

ಐಪಿಎಲ್​ ಇತಿಹಾಸ:ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2008ರಲ್ಲಿ ಐಪಿಎಲ್ ಅನ್ನು ಪ್ರಾರಂಭಿಸಿತು. ಅಂದಿನಿಂದ ಈ ವರೆಗೆ 2009ರಲ್ಲಿ ಐಪಿಎಲ್​ ಬ್ರಾಂಡ್ ಮೌಲ್ಯವು 2 ಶತಕೋಟಿ ಡಾಲರ್‌ಗೆ ಹತ್ತಿರವಾಗಿತ್ತು. ಈಗ ಅದು 12 ಬಿಲಿಯನ್ ಡಾಲರ್‌ಗಳನ್ನು ತಲುಪಿದೆ. ಪಾಕಿಸ್ತಾನ ಹೊರತುಪಡಿಸಿ ಐಸಿಸಿ ಸದಸ್ಯರಾಗಿರುವ ಎಲ್ಲಾ ಕ್ರಿಕೆಟ್ ದೇಶಗಳ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಾರೆ.

ಹೆಚ್ಚು ಬ್ರ್ಯಾಂಡ್​ ವ್ಯಾಲ್ಯೂ ಹೊಂದಿರುವ ಫ್ರಾಂಚೈಸಿಗಳು;ಫ್ರಾಂಚೈಸಿಗಳ ಪ್ರಕಾರ ನೋಡಿದರೆ ಬ್ರ್ಯಾಂಡ್ ಮೌಲ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ತಂಡಗಳು 100 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ ಟಾಪ್-4ರಲ್ಲಿ ಮುಂದುವರಿದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ರಾಜಸ್ಥಾನ ರಾಯಲ್ಸ್‌ನ ಬ್ರ್ಯಾಂಡ್ ಮೌಲ್ಯವು 30 ಪ್ರತಿಶತದಿಂದ 81 ಮಿಲಿಯನ್ ಡಾಲರ್‌ಗಳಿಗೆ ಹೆಚ್ಚಳವಾಗಿದೆ. ದೆಹಲಿ ಕ್ಯಾಪಿಟಲ್ಸ್‌ನ ಬ್ರ್ಯಾಂಡ್ ಮೌಲ್ಯವು 24 ಶೇಕಡಾದಿಂದ 80 ಮಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ.

ಹೊಸ ಫ್ರಾಂಚೈಸಿಯಾದ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಬ್ರಾಂಡ್ ಮೌಲ್ಯವು ಕ್ರಮವಾಗಿ 69 ಮಿಲಿಯನ್ ಡಾಲರ್ ಮತ್ತು 60 ಮಿಲಿಯನ್ ಡಾಲರ್ ಆಗಿದೆ. ಹಳೆಯ ಫ್ರಾಂಚೈಸಿಯಾಗಿದ್ದರೂ, ಇತ್ತೀಚೆಗೆ ಪುನರುಜ್ಜೀವನಗೊಂಡ ಪಂಜಾಬ್ ಕಿಂಗ್ಸ್ 49 ಪ್ರತಿಶತದಷ್ಟು ಹೆಚ್ಚಳದೊಂದಿಗೆ 68 ಮಿಲಿಯನ್ ಡಾಲರ್‌ಗಳಷ್ಟು ಹೆಚ್ಚಳವಾಗಿದೆ.

ಟಾಪ್​ 4 ತಂಡಗಳ ಬ್ರಾಂಡ್​ ವ್ಯಾಲ್ಯೂ

ಚೆನ್ನೈ ಸೂಪರ್​ ಕಿಂಗ್ಸ್​ (CSK): ಪ್ರಸ್ತುತ ಹೆಚ್ಚಿನ ಬ್ರಾಂಡ್​ ಮೌಲ್ಯ ಹೊಂದಿರುವ ತಂಡಗಳಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಅಗ್ರಸ್ಥಾನದಲ್ಲಿದೆ. ಅದರ ಬ್ರಾಂಡ್​ ಮೌಲ್ಯ 52% ರಷ್ಟು ಹೆಚ್ಚಿದ್ದು, ₹1034 ಕೋಟಿ ರೂ. ಗೆ ತಲುಪಿದೆ.

ಮುಂಬೈ ಇಂಡಿಯನ್ಸ್​ (MI): ಈ ತಂಡದ ಬ್ರಾಂಡ್​ ಮೌಲ್ಯ ಈ ಬಾರಿ 36 ರಷ್ಟು ಹೆಚ್ಚಳವಾಗಿದ್ದು, ₹1008 ಕೋಟಿ ರೂ. ಗೆ ತಲುಪಿದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ಒಮ್ಮೆಯೂ IPL ಟ್ರೋಫಿ ಗೆಲ್ಲದಿದ್ದರೂ RCBಯ ಬ್ರಾಂಡ್​ ಮೌಲ್ಯ 67% ರಷ್ಟು ಹೆಚ್ಚಿದ್ದು, 991 ಕೋಟಿ ರೂ. ಗೆ ತಲುಪಿದೆ.

ಕೋಲ್ಕತ್ತಾ ನೈಟ್​ ರೈಡರ್ಸ್​: ಕಳೆದ ಬಾರಿ ಚಾಂಪಿಯನ್​ ಆಗಿದ್ದ KKR ತಂಡ ಬ್ರಾಂಡ್​ ವ್ಯಾಲ್ಯೂ 38% ರಷ್ಟು ಹೆಚ್ಚಿದ್ದು, ಒಟ್ಟು 923 ಕೋಟಿ ರೂ ಆಗಿದೆ.

ಇದನ್ನೂ ಓದಿ:ವಿರಾಟ್ ಕೊಹ್ಲಿ​ ಫಿಟ್ನೆಸ್​ ಗುಟ್ಟು ಬಹಿರಂಗಪಡಿಸಿದ ಪತ್ನಿ ಅನುಷ್ಕಾ ಶರ್ಮಾ

ABOUT THE AUTHOR

...view details